ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ಯಾನ್ ಇಂಡಿಯಾ ನಟ. ಹಾಗಾಗಿ, ವಿಶೇಷ ಪರಿಚಯ ಬೇಕೆನಿಸದು. ಕೆಜಿಎಫ್ ಎಂಬ ಒಂದೆಸರು ಸಾಕಲ್ಲವೇ ಇದಕ್ಕೆ. ಕಳೆದ ಐದು ವರ್ಷಗಳಲ್ಲಿ ಇವರು ಮಾಡಿದ್ದು ಎರಡೇ ಸಿನಿಮಾ. ಆದ್ರೆ ಅಮೋಘ ಅಭಿನಯ ನಟನ ಜನಪ್ರಿಯತೆಯನ್ನು ನೂರ್ಮಡಿಸಿದೆ. ದೇಶ, ವಿದೇಶಗಳಲ್ಲೂ ತಮ್ಮದೇ ಆದ ಸ್ಟಾರ್‌ಡಮ್ ಸೃಷ್ಟಿಸಿದ್ದಾರೆ. ಅಭಿಮಾನಿಗಳ ಬಾಯಲ್ಲಿ ರಾಕಿ ಭಾಯ್ ಎಂದೇ ಫೇಮಸ್ ಆಗಿದ್ದಾರೆ. ಆದರೆ ಯಶ್ ಕುರಿತು 'ಟಾಲಿವುಡ್ ಮಾಸ್ ಮಹಾರಾಜ' ರವಿತೇಜ ಕೊಟ್ಟಿರುವ ಸ್ಟೇಟ್ಮೆಂಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
'ಟೈಗರ್ ನಾಗೇಶ್ವರ್ ರಾವ್' ಸಿನಿಮಾ ಪ್ರಮೋಶನ್: ರವಿತೇಜ ಅಭಿನಯದ ಮುಂದಿನ ಸಿನಿಮಾ 'ಟೈಗರ್ ನಾಗೇಶ್ವರ್ ರಾವ್'. ರವಿತೇಜ ಸದ್ಯ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ದಕ್ಷಿಣದಿಂದ ಹಿಡಿದು ಉತ್ತರದವರೆಗೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಏಕೆಂದರೆ, ಇದು ಅವರ ವೃತ್ತಿ ಜೀವನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಬಾಲಿವುಡ್ ಕೋಟೆಯಲ್ಲಿ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ.
-
#Ramcharan & #ThalapathyVijay are really good dancers,I want to steal dance from them,#Prabhas is truly a darling,I like his appearance,SS RAJAMOULI is an visionary,#YASH is lucky for having #KGF
— Indian Cinema Hub (@IndianCinemaHub) October 10, 2023 " class="align-text-top noRightClick twitterSection" data="
- #Raviteja#TigerNageswaraRao pic.twitter.com/V6z5SlU6ko
">#Ramcharan & #ThalapathyVijay are really good dancers,I want to steal dance from them,#Prabhas is truly a darling,I like his appearance,SS RAJAMOULI is an visionary,#YASH is lucky for having #KGF
— Indian Cinema Hub (@IndianCinemaHub) October 10, 2023
- #Raviteja#TigerNageswaraRao pic.twitter.com/V6z5SlU6ko#Ramcharan & #ThalapathyVijay are really good dancers,I want to steal dance from them,#Prabhas is truly a darling,I like his appearance,SS RAJAMOULI is an visionary,#YASH is lucky for having #KGF
— Indian Cinema Hub (@IndianCinemaHub) October 10, 2023
- #Raviteja#TigerNageswaraRao pic.twitter.com/V6z5SlU6ko
ಟಾಲಿವುಡ್ ಸ್ಟಾರ್ಸ್ ಗುಣಗಾನ: ಇತ್ತೀಚೆಗೆ ಬಾಲಿವುಡ್ ಮಾಧ್ಯಮವೊಂದರ ಸಂದರ್ಶನದಲ್ಲಿ ದಕ್ಷಿಣದ ಕೆಲ ಸೂಪರ್ ಸ್ಟಾರ್ಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿ ಪ್ರಶ್ನೆಗಳಿಗೂ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಆರ್ಆರ್ಆರ್ ಮೂಲಕ ವಿಶ್ವಾದ್ಯಂತ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ರಾಮ್ ಚರಣ್ ಬಗ್ಗೆ ಪ್ರಶ್ನೆ ಎದುರಾದಾಗ, ಅವರ ನೃತ್ಯವನ್ನು ಇಷ್ಟಪಡುತ್ತೇನೆ. ಉತ್ತಮ ಡ್ಯಾನ್ಸರ್ ಎಂದರು. ಪ್ರಭಾಸ್ ಹಾಗೂ ರಾಜಮೌಳಿ ವಿಷನರಿಗಳು (ದೂರದೃಷ್ಟಿ) ಎಂದರು.
ಯಶ್ ಬಗ್ಗೆ ಹೇಳಿದ್ದೇನು?: ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಯಶ್ ಬಗ್ಗೆ ರವಿತೇಜ ಅವರಿಗೆ ಪ್ರಶ್ನೆ ಎದುರಾಯಿತು. ''ಯಶ್, ನಾನು ಕೇವಲ ಅವರ ಕೆಜಿಎಫ್ ನೋಡಿದ್ದೇನಷ್ಟೇ. ಕೆಜಿಎಫ್ನಂತಹ ಸಿನಿಮಾ ಸಿಕ್ಕಿದ್ದು ಅವರ ಅದೃಷ್ಟ'' ಎಂದು ತಿಳಿಸಿದರು. ಯಶ್ ಕುರಿತ ರವಿತೇಜರ ಈ ಸ್ಟೇಟ್ಮೆಂಟ್ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಬಹುತೇಕ ಅಭಿಮಾನಿಗಳು ಈ ಕಾಮೆಂಟ್‌ಗಳನ್ನು ಇಷ್ಟಪಟ್ಟಿಲ್ಲ. ಒಂದಿಷ್ಟು ಸಂಖ್ಯೆಯ ಯಶ್ ಅಭಿಮಾನಿಗಳು ರವಿತೇಜ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಲಯಾಳಂ ನಟಿಗೆ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಕಿರುಕುಳ, ಪೊಲೀಸರಿಗೆ ದೂರು
ವಂಶಿ ನಿರ್ದೇಶನದ 'ಟೈಗರ್ ನಾಗೇಶ್ವರ್ ರಾವ್' ಅನ್ನು ಅಭಿಷೇಕ್ ಅಗರ್ವಾಲ್ ಆರ್ಟ್ಸ್ನಡಿ, ಅಭಿಷೇಕ್ ಅಗರ್ವಾಲ್ ನಿರ್ಮಾಣ ಮಾಡಿದ್ದಾರೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 20ಕ್ಕೆ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಬರ್ತ್ಡೇ: ಕಲ್ಕಿ2898ಎಡಿ ಪೋಸ್ಟರ್ ರಿಲೀಸ್; ಪ್ರಭಾಸ್ ಸ್ಪೆಷಲ್ ವಿಶ್