ETV Bharat / entertainment

ರವಿತೇಜ- ಗೋಪಿಚಂದ್ ಕಾಂಬಿನೇಷನ್​ನಲ್ಲಿ 4ನೇ ಸಿನಿಮಾ ಫಿಕ್ಸ್​; ಮೋಷನ್​ ಪೋಸ್ಟರ್​ ಔಟ್​

author img

By

Published : Jul 9, 2023, 7:34 PM IST

ಮಾಸ್ ಮಹಾರಾಜ ರವಿತೇಜ ಮತ್ತು ನಿರ್ದೇಶಕ ಗೋಪಿಚಂದ್ ಮಲಿನೇನಿ ಕಾಂಬಿನೇಷನ್​ನಲ್ಲಿ ಈಗಾಗಲೇ ಮೂರು ಸಿನಿಮಾಗಳು ಬಂದಿದ್ದು, ಇದೀಗ ನಾಲ್ಕನೇ ಬಾರಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ravi teja gopichand malineni
ರವಿತೇಜ- ಗೋಪಿಚಂದ್

ಮಾಸ್ ಮಹಾರಾಜ ರವಿತೇಜ ಮತ್ತು ನಿರ್ದೇಶಕ ಗೋಪಿಚಂದ್ ಮಲಿನೇನಿ ಟಾಲಿವುಡ್‌ನ ಕ್ರೇಜಿ ಕಾಂಬಿನೇಷನ್‌ಗಳಲ್ಲಿ ಒಂದಾಗಿದೆ. ಇವರಿಬ್ಬರೂ ಈಗಾಗಲೇ ಮೂರು ಸಿನಿಮಾ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಪಡೆದಿದ್ದಾರೆ. ಇದೀಗ ನಾಲ್ಕನೇ ಬಾರಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಕುರಿತು ಟ್ವೀಟ್ ಮಾಡಿದೆ.

ಸದ್ಯ ಹೊಸ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಸೃಷ್ಟಿಸಲು ನಾಲ್ಕನೇ ಬಾರಿಗೆ ಹಿಟ್ ಕಾಂಬೊ ಸಿದ್ಧವಾಗಲಿದೆ ಎಂದು ಮೈತ್ರಿ ಮೂವಿ ತಿಳಿಸಿದೆ. ಈ ಚಿತ್ರಕ್ಕೆ ತಮನ್ ಸಂಗೀತ ನೀಡುತ್ತಿದ್ದಾರೆ. ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ನೀಡಲಾಗುವುದು. ಇದರ ಹಿನ್ನೆಲೆ ಸಂಗೀತ ಆಕರ್ಷಕವಾಗಿದೆ. ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಇಂಟ್ರೆಸ್ಟಿಂಗ್ ಕಥೆಯನ್ನಿಟ್ಟುಕೊಂಡು ಚಿತ್ರ ತಯಾರಾಗಲಿದೆ.

ಕಳೆದ ವರ್ಷ 'ಧಮಾಕಾ' ಚಿತ್ರದ ಮೂಲಕ ಸೂಪರ್ ಹಿಟ್ ಪಡೆದಿದ್ದ ಮಾಸ್ ಮಹಾರಾಜ, ಈ ವರ್ಷ ವಾಲ್ತೇರು ವೀರಯ್ಯ ಜೊತೆಗಿನ ರೋ ಚಿತ್ರದ ಮೂಲಕ ಸಕ್ಸಸ್​ ಪಡೆದುಕೊಂಡಿದ್ದಾರೆ. ಆ ನಂತರ ಬಂದ 'ರಾವಣಾಸುರ' ಬಾಕ್ಸ್ ಆಫೀಸ್‌ನಲ್ಲಿ ನಿರಾಸೆ ಮೂಡಿಸಿತು. ವಿಭಿನ್ನ ಪರಿಕಲ್ಪನೆಯೊಂದಿಗೆ ಬಂದ ಈ ಚಿತ್ರ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ವಿಫಲವಾಯಿತು. ಆದರೆ ರವಿತೇಜ ನಟನೆಗೆ ಈ ಸಿನಿಮಾದಲ್ಲಿ ಪ್ರೇಕ್ಷಕರಿಂದ ಒಳ್ಳೆ ಮಾರ್ಕ್ಸ್ ಸಿಕ್ಕಿತ್ತು.

ಇದನ್ನೂ ಓದಿ: ಶ್ರೇಷ್ಠ ಸಾಹಿತಿ ರವೀಂದ್ರನಾಥ್​ ಠಾಗೋರ್​ ಪಾತ್ರದಲ್ಲಿ ಅನುಪಮ್​ ಖೇರ್​: ಹಿರಿಯ ನಟನ 538ನೇ ಸಿನಿಮಾ!

ರವಿತೇಜ ಮುಂದಿನ ಸಿನಿಮಾಗಳು: ಸದ್ಯ ರವಿತೇಜ 'ಟೈಗರ್ ನಾಗೇಶ್ವರ ರಾವ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಂಶಿ ನಿರ್ದೇಶನದಲ್ಲಿ ಸಿನಿಮಾ ತಯಾರಾಗುತ್ತಿದೆ. ಗಜದೊಂಗದ ಜೀವನಾಧಾರಿತ ಚಿತ್ರವು ಸ್ಟುವರ್ತುಪುರಂನಲ್ಲಿ ನಿರ್ಮಾಣವಾಗುತ್ತಿದೆ. ಕಥೆಯು 1970 ರ ದಶಕದಲ್ಲಿ ನಡೆಯುತ್ತದೆ. ಇದು ರವಿತೇಜ ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರ.

ಸುಮಾರು 18 ವರ್ಷಗಳ ನಂತರ ನಟಿ ರೇಣು ದೇಸಾಯಿ ಈ ಚಿತ್ರದ ಮೂಲಕ ಇಂಡಸ್ಟ್ರಿಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಲವಣಂ ಪಾತ್ರದಲ್ಲಿ ರವಿತೇಜ ಅವರ ಅಕ್ಕನಾಗಿ ಹೇಮಲತಾ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರವು ಅಕ್ಟೋಬರ್ 20 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಅದೇ ರೀತಿ ಮಾಸ್ ಮಹಾರಾಜ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ‘ಹದ್ದು’ ಎಂಬ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಲಿದ್ದಾರೆ.

ಇನ್ನು, 'ಕಲರ್ ಫೋಟೋ' ಖ್ಯಾತಿಯ ನಿರ್ದೇಶಕ ಸಂದೀಪ್ ರಾಜ್ ನಿರ್ಮಿಸಲಿರುವ ಚಿತ್ರದಲ್ಲಿ ನಟಿಸಲು ರವಿತೇಜ ಇತ್ತೀಚೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬಹುತಾರಾಗಣದ ಈ ಚಿತ್ರದಲ್ಲಿ ರವಿತೇಜ ಮತ್ತೊಬ್ಬ ಸ್ಟಾರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಪಾತ್ರಕ್ಕೆ ಮೊದಲು ಯಂಗ್ ಹೀರೋ ಶರ್ವಾನಂದ್ ಅವರನ್ನು ಪರಿಗಣಿಸಲಾಗಿತ್ತು. ಈಗ ಶರ್ವಾ ಬದಲಿಗೆ ಮತ್ತೊಬ್ಬ ಸ್ಟಾರ್ ಹೀರೋ ಅನ್ನು ಪರಿಗಣಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ: 'ಘೋಸ್ಟ್​' ಒಡೆಯನಿಗೆ ಜನ್ಮದಿನದ ಸಂಭ್ರಮ: ಕೌತುಕ ಹೆಚ್ಚಿಸಿದ 'BIG DADDY'‌ ಪೋಸ್ಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.