ETV Bharat / entertainment

'ಕೆಲವೊಮ್ಮೆ ಮಾಡದ ತಪ್ಪಿಗೂ...': ರವೀನಾ ಟಂಡನ್ ಹೀಗೆ ಹೇಳಿದ್ದೇಕೆ? - ಅಗಸ್ತ್ಯ ನಂದಾ

ಅಗಸ್ತ್ಯ ನಂದಾ ಮತ್ತು ಖುಷಿ ಕಪೂರ್ ಅವರನ್ನು ಅಪಹಾಸ್ಯ ಮಾಡುವ ಪೋಸ್ಟ್ ಅನ್ನು 'ಆಕಸ್ಮಿಕವಾಗಿ' ಲೈಕ್​ ಮಾಡಿದ ಕೆಲವು ದಿನಗಳ ನಂತರ ರವೀನಾ ಟಂಡನ್ ಸಾಮಾಜಿಕ ಮಾಧ್ಯಮದಲ್ಲಿ ರಹಸ್ಯಕರ ಪೋಸ್ಟ್ ಮಾಡಿದ್ದಾರೆ.

Raveena Tandon
ನಟಿ ರವೀನಾ ಟಂಡನ್
author img

By ETV Bharat Karnataka Team

Published : Dec 15, 2023, 3:27 PM IST

ಉದಯೋನ್ಮುಖ ಕಲಾವಿದರಾದ ಅಗಸ್ತ್ಯ ನಂದಾ ಮತ್ತು ಖುಷಿ ಕಪೂರ್ ಅವರ ನಟನೆಯನ್ನು ಅಪಹಾಸ್ಯ ಮಾಡುವ ಪೋಸ್ಟ್‌ವೊಂದನ್ನು 'ಅಜಾಗರೂಕತೆ'ಯಿಂದ ಲೈಕ್​ ಮಾಡಿರುವ ಬಾಲಿವುಡ್​ ನಟಿ ರವೀನಾ ಟಂಡನ್ ಸಾಕಷ್ಟು ಟೀಕೆ ಎದುರಿಸಿದ್ದಾರೆ. ಈ ಘಟನೆಯ ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ರಹಸ್ಯ ಸಂದೇಶವುಳ್ಳ ಪೋಸ್ಟ್ ಹಂಚಿಕೊಂಡಿದ್ದಾರೆ. ಟ್ರೋಲ್‌ಗಳಿಗೆ ಗುರಿಯಾಗುವ ವಿಚಾರ ಇಟ್ಟುಕೊಂಡು ಪೋಸ್ಟ್ ಶೇರ್ ಮಾಡಿದಂತಿದೆ.

'ಇಷ್ಟಪಡಿ ಇಲ್ಲವೇ ಬಿಡಿ, ಕೆಲವೊಮ್ಮೆ ಏನೂ ಮಾಡದೇ ಸಾಕಷ್ಟು ಭರಿಸಬೇಕಾಗುತ್ತದೆ' ಎಂಬುದು ರವೀನಾ ಟಂಡನ್​ ಇನ್​ಸ್ಟಾಗ್ರಾಮ್​ ಪೋಸ್ಟ್. ಇದಕ್ಕೆ, 'ಕರ್ಮ ಕರೆಯುತ್ತಿದೆಯೇ?' ಎಂಬ ಶೀರ್ಷಿಕೆಯನ್ನೂ ಅವರೇ ಕೊಟ್ಟಿದ್ದಾರೆ. ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.

ಯಾರಾದರೂ ವಿವರಿಸಬಹುದೇ? ಎಂದು ಕೆಲವರು ಗೊಂದಲ ನಿವಾರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಾನಾ ತೆರನಾದ ಕಾಮೆಂಟ್‌ಗಳು ಬಂದಿವೆ. ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು 'ಒಂದು ವೇಳೆ ನಿಮಗೆ ತಿಳಿದಿದ್ದರೆ, ನಿಮಗೆ ತಿಳಿದಿದೆ' ಎಂದು ಹಿಂಟ್ ಕೊಟ್ಟಿದ್ದಾರೆ. ಮತ್ತೊಂದು ಕಾಮೆಂಟ್​ನಲ್ಲಿ 'ಕರ್ಮ' ಅಂಶವನ್ನು ಹೈಲೈಟ್ ಮಾಡಲಾಗಿದೆ. ಇದು 'ಕರ್ಮದ ಚಕ್ರ'ದ ಬಗ್ಗೆ ಹೇಳುತ್ತಿದೆ ಎಂದಿದ್ದಾರೆ. ಏನಾಗಿದೆಯೋ ಅದಕ್ಕೆ ತಕ್ಕ ಫಲ ಭರಿಸುವುದು (ಕರ್ಮ) ಅವಶ್ಯಕವಾಗಿದೆ. ಉದ್ದೇಶಪೂರ್ವಕವಾಗದೇ ಇದ್ದರೂ ಸಹ ಮಾಡಿದ ಕೆಲಸಕ್ಕೆ ಭರಿಸುವುದು ಅತ್ಯಗತ್ಯ ಎಂಬರ್ಥದಲ್ಲಿ ಕಾಮೆಂಟ್​ಗಳಿವೆ.

ಇದನ್ನೂ ಓದಿ: ಬಿಗ್​​ ಬಾಸ್​ ಮನೆಯಲ್ಲಿ ಮುದ್ದೆ ತಂದ ಆಪತ್ತು...! ವಿಡಿಯೋ ನೋಡಿ

ರವೀನಾ ಟಂಡನ್​​ ಈ ಹಿಂದೆ 'ಆಕಸ್ಮಿಕವಾಗಿ' ಸೋಷಿಯಲ್​ ಮೀಡಿಯಾ ಪೋಸ್ಟ್ ಒಂದನ್ನು ಲೈಕ್​​ ಮಾಡಿದ್ದರು. ದಿ ಆರ್ಚೀಸ್​ ಸಿನಿಮಾದ ಅಗಸ್ತ್ಯ ನಂದಾ ಮತ್ತು ಖುಷಿ ಕಪೂರ್ ಅವರ ನಟನಾ ಕೌಶಲ್ಯವನ್ನು ಅಪಹಾಸ್ಯ ಮಾಡುವ ಪೋಸ್ಟ್ ಅದಾಗಿತ್ತು. 'ಇಲ್ಲಿ ನಟನೆ ಸತ್ತಿದೆ #ಆರ್ಚೀಸ್​' ಎಂಬ ಬರಹವನ್ನು ಆ ಪೋಸ್ಟ್ ಹೊಂದಿತ್ತು. ರವೀನಾ ಟಂಡನ್ ಲೈಕ್​ ಮಾಡಿದ ಹಿನ್ನೆಲೆಯಲ್ಲಿ ಪೋಸ್ಟ್​ ಮಹತ್ವ ಪಡೆದಿತ್ತು. ನಟಿಯ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಅವರ ಲೇಟೆಸ್ಟ್ ಪೋಸ್ಟ್ ಪ್ರಕಾರ, ಆ ಲೈಕ್​ ಆಕಸ್ಮಿಕ ಎಂಬುದು ಬಹುತೇಕ ಖಚಿತ.

ಇದನ್ನೂ ಓದಿ: 'ನಾನು ಕುಡಿಯಲು ಬಯಸಿದರೆ..': ವೈರಲ್ ವಿಡಿಯೋಗೆ ಸನ್ನಿ ಡಿಯೋಲ್​ ಮತ್ತೊಮ್ಮೆ ಸ್ಪಷ್ಟನೆ

ರವೀನಾ ಸಿನಿಮಾ ಜರ್ನಿ: ಜುಲೈನಲ್ಲಿ ಬಿಡುಗಡೆಯಾದ ಒನ್ ಫ್ರೈಡೆ ನೈಟ್​ನಲ್ಲಿ ರವೀನಾ ಕಾಣಿಸಿಕೊಂಡರು​. ಸದ್ಯ ವೆಲ್ಕಮ್​ ಸೀರೀಸ್​ನ ಮೂರನೇ ಭಾಗ ವೆಲ್ಕಮ್​ ಟು ದಿ ಜಂಗಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎರಡು ದಶಕಗಳ ನಂತರ ಅಕ್ಷಯ್ ಕುಮಾರ್ ಜೊತೆ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಂಜಯ್ ದತ್ ಜೊತೆಗೆ ಘುಡ್ಚಾಡಿ ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.