ETV Bharat / entertainment

ರಶ್ಮಿಕಾ ಮಂದಣ್ಣ ಏರ್​ಪೋರ್ಟ್ ಲುಕ್​ ವೈರಲ್​​: ಟ್ರೋಲಿಗರ ಆಟ ಶುರು! - Rashmika Mandanna troll

Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಏರ್​ಪೋರ್ಟ್ ಲುಕ್​ ಟ್ರೋಲ್​ ಆಗಿದೆ.

Rashmika Mandanna
ರಶ್ಮಿಕಾ ಮಂದಣ್ಣ
author img

By ETV Bharat Karnataka Team

Published : Sep 21, 2023, 5:24 PM IST

ನ್ಯಾಶನಲ್​ ಕ್ರಶ್​​ ರಶ್ಮಿಕಾ ಮಂದಣ್ಣ ಸರಣಿ ಸಿನಿಮಾ ಶೂಟಿಂಗ್​​ಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಕ್ ಕಮಿಟ್​​ಮೆಂಟ್ಸ್ ಹಿನ್ನೆಲೆ ಹೆಚ್ಚು ಪ್ರಯಾಣ ಮಾಡುತ್ತಾರೆ. ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ಆನ್​ಲೈನ್​ನಲ್ಲಿ ವಿಡಿಯೋ ವೈರಲ್​ ಆಗಿದೆ.

ರಶ್ಮಿಕಾ ಮಂದಣ್ಣ ನ್ಯಾಶನಲ್​ ಕ್ರಶ್​ ಎಂದೇ ಫೇಮಸ್​. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ. ಇವರ ನಟನೆ ಜೊತೆ ಜೊತೆಗೆ ಸೌಂದರ್ಯ, ಫ್ಯಾಷನ್​ ಸೆನ್ಸ್​ ಸಹ ಸಖತ್​ ಸದ್ದು ಮಾಡುತ್ತದೆ. ಫ್ಯಾಷನ್​ ವಿಚಾರವಾಗಿ ಜನಪ್ರಿಯರಾಗಿರುವ ಹಿನ್ನೆಲೆ, ಸದ್ಯ ನಟಿಯ ಡ್ರೆಸ್ಸಿಂಗ್​ ಸ್ಟೈಲ್​​ ಚರ್ಚೆಯ ವಿಷಯವಾಗಿದೆ. ಮುಂಬೈ ಏರ್​ಪೋರ್ಟ್​ನಲ್ಲಿ ನಟಿ ಕಾಣಿಸಿಕೊಂಡಿದ್ದು, ಪಾಪರಾಜಿಯೋರ್ವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋ ನೋಡಿದವರ ಪೈಕಿ ಹಲವರು ನಟಿಮಣಿಯನ್ನು ಟ್ರೋಲ್​ ಮಾಡಿದ್ದಾರೆ.

ಇನ್​​ಸ್ಟಾಗ್ರಾಮ್​ನಲ್ಲಿ ಪಾಪರಾಜಿಯೋರ್ವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಮುಂಬೈ ವಿಮಾನ ನಿಲ್ದಾಣದಿಂದ ಪುಷ್ಪ ನಟಿ ರಶ್ಮಿಕಾ ಮಂದಣ್ಣ ಹೊರಬರುತ್ತಿರುವುದನ್ನು ಕಾಣಬಹುದು. ಪಾಪರಾಜಿಗಳ ಕ್ಯಾಮರಾ ಕಂಡು ನಸುನಕ್ಕ ಕಿರಿಕ್​ ಪಾರ್ಟಿ ಬೆಡಗಿ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ನಟಿ ವಿಮಾನ ನಿಲ್ದಾಣದದಲ್ಲಿ ಸಖತ್​ ಕ್ಯಾಶುವಲ್​ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲ್ಯೂ ಜೀನ್ಸ್, ವೈಟ್​ ಶರ್ಟ್, ಬ್ಲ್ಯಾಕ್​ ಕ್ಯಾಶುವಲ್​ ಸ್ಲಿಪ್ಪರ್, ಫ್ರೀ ಹೇರ್ ಸ್ಟೈಲ್​​, ಕಡಿಮೆ ಮೇಕ್​​ ಅಪ್​ ನಲ್ಲಿ ಬಹುಭಾಷ ಚೆಲುವೆ ಕಾಣಿಸಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ನಟಿಯ ಡ್ರೆಸ್ಸಿಂಗ್​ ಸ್ಟೈಲ್​ ವಿಚಾರವಾಗಿ ಟ್ರೋಲಿಗರು ಆಟ ಶುರು ಮಾಡಿಕೊಂಡಿದ್ದಾರೆ.

ವಿಡಿಯೋ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯೆ ಕೊಡಲು ಶುರು ಮಾಡಿಕೊಂಡಿದ್ದಾರೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗರು ಕ್ಯಾಶುವಲ್​ ಲುಕ್​ನಲ್ಲೂ ಸಖತ್​ ಕ್ಯೂಟ್​ ಎಂದರೆ, ಟ್ರೋಲಿಗರು ನಟಿಯ ಏರ್​ಪೋರ್ಟ್ ನೋಟವನ್ನು ಟ್ರೋಲ್ ಮಾಡಿದ್ದಾರೆ. ಇನ್ನೂ ಎನೇನ್​ ಸ್ಟೈಲ್​ ಬರಲಿದೆಯೋ ಎಂದು ಸೋಷಿಯಲ್​ ಮೀಡಿಯಾ ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ. ಮತ್ತೋರ್ವರು ನಟಿಯ ಜೀನ್ಸ್ ಸ್ಟೈಲ್​​​​​ ಶೈಲಿಗೆ ವ್ಯಂಗ್ಯವಾಡಿದ್ದಾರೆ. ಹೀಗೆ ಹಲವರು ನಟಿಯ ಫ್ಯಾಶನ್​ ಸೆನ್ಸ್​​ ಅನ್ನು ಟೀಕಿಸಿದ್ದಾರೆ. ಆದ್ರೆ ಅಭಿಮಾನಿಗಳು ರೆಡ್​ ಹಾರ್ಟ್ ಎಮೋಜಿಯೊಂದಿಗೆ ನಟಿಮಣಿಗೆ ಪ್ರೀತಿ ಸುರಿಸಿದ್ದಾರೆ.

ಇದನ್ನೂ ಓದಿ: ನಾಡು, ನುಡಿ, ಭಾಷೆಗೆ ಪ್ರಾಣ ಕೊಡಲು ಸಿದ್ಧ, ಹೋರಾಟಕ್ಕೆ ರೆಡಿ: ಕಾವೇರಿ ಪರ ದನಿ ಎತ್ತಿದ ರಾಘವೇಂದ್ರ ರಾಜ್​​ಕುಮಾರ್

ರಶ್ಮಿಕಾರ ಮುಂದಿನ ಸಿನಿಮಾಗಳನ್ನು ಗಮನಿಸುವುದಾದರೆ, ರಣ್​ಬೀರ್​ ಕಪೂರ್​ ಜೊತೆ ಅನಿಮಲ್​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ಡಿಸೆಂಬರ್​ 1 ರಂದು ತೆರೆಕಾಣಲಿದೆ. ಅಲ್ಲು ಅರ್ಜುನ್​ ಜೊತೆಗಿನ ಪುಪ್ಪ ಸೀಕ್ವೆಲ್​​​ ಶೂಟಿಂಗ್​​ ಚುರುಕುಗೊಂಡಿದೆ. ಸುಕುಮಾರ್​ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಸಿನಿಮಾ ಮೇಲೆ ಪ್ರೇಕ್ಷಕರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ 'ಘೋಸ್ಟ್' ಕೋಟಿ ಕೋಟಿ ವ್ಯವಹಾರ: ಹ್ಯಾಟ್ರಿಕ್ ಹೀರೋ‌ ಸಿನಿಮಾ ಬಗ್ಗೆ ಭಾರಿ ಕುತೂಹಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.