ETV Bharat / entertainment

ರಣ್​ಬೀರ್ ಕಪೂರ್​ಗೆ ಕನ್ನಡ, ತೆಲುಗು ಕಲಿಸಿದ ರಶ್ಮಿಕಾ ಮಂದಣ್ಣ: ವಿಡಿಯೋ ನೋಡಿ - ರಣ್​ಬೀರ್ ಕಪೂರ್​ ತೆಲುಗು

Animal Promotion: ಅನಿಮಲ್​​ ಸಿನಿಮಾ ಪ್ರಮೋಶನ್​ ಸಂದರ್ಭ ನಟ ರಣ್​ಬೀರ್ ಕಪೂರ್​ ಅವರಿಗೆ ನಟಿ ರಶ್ಮಿಕಾ ಮಂದಣ್ಣ ತೆಲುಗು ಮತ್ತು ಕನ್ನಡ ಮಾತನಾಡಲು ಸಹಾಯ ಮಾಡಿದ್ದಾರೆ.

Rashmika Mandanna Ranbir Kapoor
ರಶ್ಮಿಕಾ ಮಂದಣ್ಣ ರಣ್​ಬೀರ್ ಕಪೂರ್​
author img

By ETV Bharat Karnataka Team

Published : Nov 22, 2023, 5:59 PM IST

Updated : Nov 22, 2023, 6:06 PM IST

ಬಾಲಿವುಡ್​ ನಟ ರಣ್​ಬೀರ್ ಕಪೂರ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಅನಿಮಲ್'. ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಚಾರವನ್ನು ಚುರುಕುಗೊಳಿಸಿದೆ. ರಶ್ಮಿಕಾ ಮತ್ತು ರಣ್​ಬೀರ್​​ ಸಹ ತಮ್ಮ ಮುಂಬರುವ ಚಿತ್ರದ ಪ್ರಚಾರದಲ್ಲಿ ಮುಳುಗಿದ್ದಾರೆ. ಇಂದು 'ಇಂಡಿಯನ್ ಐಡಲ್' ಸೆಟ್​ನ ಹೊರಗೆ ಈ ಜೋಡಿ ಕಾಣಿಸಿಕೊಂಡಿದೆ. ಸೆಟ್​ ಬಳಿ ಕುತೂಹಲಕಾರಿ ಘಟನೆಯೂ ನಡೆದಿದೆ.

ರಶ್ಮಿಕಾ ಮತ್ತು ಪಾಪರಾಜಿಗಳು ಸೇರಿ ನಟ ರಣ್​​ಬೀರ್​​ ಕಪೂರ್​ ಅವರಿಂದ ತೆಲುಗು ಮತ್ತು ಕನ್ನಡ ಮಾತನಾಡಿಸಿದ್ದಾರೆ. ನಟಿಯ ಸಹಾಯ ಪಡೆದು ನಟ ತೆಲುಗು ಮಾತನಾಡಲು ಪ್ರಯತ್ನಿಸಿದ್ದಾರೆ. ಬಳಿಕ ಪಾಪರಾಜಿಯೋರ್ವರ ಕೋರಿಕೆ ಮೇರೆಗೆ ನಟನಿಂದ ಕನ್ನಡದಲ್ಲೂ ಮಾತನಾಡಿಸಿದ್ದಾರೆ.

ನ್ಯಾಶನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ರಣ್​​​ಬೀರ್ ಕಪೂರ್​​ ವೈಟ್​ ಶರ್ಟ್​, ಬ್ಲೂ ಸೂಟ್‌ನಲ್ಲಿ ಎಂದಿನಂತೆ ಹ್ಯಾಡ್ಸಂ ಲುಕ್​ನಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದು, ಸಖತ್​ ಸದ್ದು ಮಾಡುತ್ತಿವೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆ್ಯಕ್ಷನ್ ಪ್ಯಾಕ್ಡ್ ಅನಿಮಲ್​​ ಸಿನಿಮಾದಲ್ಲಿ ಈ ಜೋಡಿ ಮಿಂಚಲು ಸಜ್ಜಾಗಿದೆ. ಅನಿಮಲ್​ ಈಗಾಗಲೇ ಕಾಸ್ಟ್, ಪೋಸ್ಟರ್, ಟೀಸರ್, ಸ್ಪೆಷಲ್​ ವಿಡಿಯೋ ಮತ್ತು ಕಥಾಹಂದರದ ಸಲುವಾಗಿ ಸಾಕಷ್ಟು ಗಮನ ಸೆಳೆದಿದೆ. ಸಹ-ನಟರು ಸಹ ಪ್ರಚಾರದಲ್ಲಿ ತೊಡಗಿದ್ದಾರೆ.

ಅನಿಮಲ್ ಪ್ರಚಾರಕ್ಕಾಗಿ ರಣ್​​ಬೀರ್​ ಆ್ಯಂಡ್​ ರಶ್ಮಿಕಾ ಇಂದು ಇಂಡಿಯನ್ ಐಡಲ್ ಸೆಟ್‌ಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಪಾಪರಾಜಿಗಳ ಕ್ಯಾಮರಾಗಳಿಗೆ ಜೊತೆಯಾಗಿ ಪೋಸ್ ಕೊಟ್ಟಿದ್ದಾರೆ. ನಟಿ ಬಳಿ ಪಾಪರಾಜಿಗಳು ತೆಲುಗಿನಲ್ಲಿ ಮಾತನಾಡಿಸಿದ್ದಾರೆ. ಆ ಸಂದರ್ಭ ರಣ್​​ಬೀರ್ ಕಪೂರ್ ಕ್ಯಾಶುವಲ್​ ಆಗಿ ಪಾಪರಾಜಿಯೋರ್ವರಲ್ಲಿ, "ನಿಮಗೆ ತೆಲುಗು ಹೇಗೆ ಗೊತ್ತು?" ಎಂದು ಕೇಳಿದ್ದಾರೆ. "ತೆಲುಗು ನನ್ನ ಮಾತೃಭಾಷೆ" ಎಂದು ಕ್ಯಾಮರಾಮ್ಯಾನ್ ಪ್ರತಿಕ್ರಿಯಿಸಿದ್ದಾರೆ. ರಣ್​​ಬೀರ್ ಮತ್ತು ಪಾಪರಾಜಿ ಉಲ್ಲಾಸಕರ ಸಂಭಾಷಣೆ ನಡೆಸಿದ್ದಾರೆ. ಆ ಸಂದರ್ಭ, ನಟ ತೆಲುಗು ಭಾಷೆಯಲ್ಲಿ "ನಮಸ್ಕಾರಂ" ಎಂದು ತಿಳಿಸಿದ್ದಾರೆ. ನಂತರ ರಶ್ಮಿಕಾ ಅವರು ರಣ್​​ಬೀರ್‌ಗೆ ಸಹಾಯ ಮಾಡಲು ಮುಂದಾದರು. ನಟನಿಗೆ, "ನೀವು ಚೆನ್ನಾಗಿದ್ದೀರಾ? ನಾನು ಚೆನ್ನಾಗಿದ್ದೇನೆ" ಎಂಬುದನ್ನು ತೆಲುಗಿನಲ್ಲಿ ಹೇಳಿಕೊಟ್ಟರು. ಇದೇ ವೇಳೆ ಕನ್ನಡದಲ್ಲಿಯೂ ಏನಾದರು ಹೇಳಿ ಎಂದು ಪಾಪರಾಜಿಗಳು ಕೇಳಿದ್ದಾರೆ. ಆಗ 'ಎಲ್ಲರಿಗೂ ಸಮಸ್ಕಾರ' ಎಂದು ಹೇಳಲು ನಟನಿಗೆ ನಟಿ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ವಿಜಯ್​ ದೇವರಕೊಂಡ ಹೆಸರೇಳಿ ರಶ್ಮಿಕಾ ಕಾಲೆಳೆದ ರಣ್​​ಬೀರ್,​ ಬಾಲಯ್ಯ: ವಿಡಿಯೋ ನೋಡಿ

ವರದಿಗಳ ಪ್ರಕಾರ, ಅನಿಮಲ್ ಸಿನಿಮಾ 3 ಗಂಟೆ 21 ನಿಮಿಷ ರನ್​ಟೈಮ್​ ಹೊಂದಿದೆ. IMDb ಮಾಹಿತಿ ಪ್ರಕಾರ, ಸಿನಿಮಾ 3 ಗಂಟೆ 2 ನಿಮಿಷಗಳಿರಲಿದೆ. ಸಿನಿಮಾ 2 ಇಂಟರ್​​​ವಲ್ಸ್​​ ಹೊಂದಿರುತ್ತದೆ ಎಂದು ಕೆಲ ಮೂಲಗಳು ತಿಳಿಸಿವೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ತ್ರಿಪ್ತಿ ಡಿಮ್ರಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 1ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ಇದನ್ನೂ ಓದಿ: ಟಾಪ್​ 10 ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್​​ ಖಾನ್​ ನಂಬರ್​ ಒನ್!

Last Updated : Nov 22, 2023, 6:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.