ETV Bharat / entertainment

'ರಶ್ಮಿಕಾ ಬ್ಯೂಟಿಫುಲ್​'..ಕ್ಯಾಶುವಲ್​ ಲುಕ್​ನಲ್ಲಿ ಅಭಿಮಾನಿಗಳ ಗಮನ ಸೆಳೆದ 'ನ್ಯಾಷನಲ್​ ಕ್ರಶ್​​'​ - ರಶ್ಮಿಕಾ ಮಂದಣ್ಣ 2 ಸಿನಿಮಾ

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಶುವಲ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

Rashmika Mandanna
ರಶ್ಮಿಕಾ ಮಂದಣ್ಣ
author img

By

Published : Jul 20, 2023, 5:53 PM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೋಟ್ಯಂತರ ಜನರ ಮೆಚ್ಚಿನ ತಾರೆಯಾಗಿದ್ದಾರೆ. ಹಾಗಾಗಿಯೇ ಈ ಚೆಲುವೆ 'ನ್ಯಾಷನಲ್​ ಕ್ರಶ್​' ಎಂದೇ ಫೇಮಸ್ ಆಗಿದ್ದಾರೆ​. ಸಿನಿಮಾಗಳ ಹೊರತಾಗಿಯೂ ಅವರ ವೈಯಕ್ತಿಕ ಜೀವನದ ಬಗ್ಗೆಯೂ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅವರ ಡ್ರೆಸ್ಸಿಂಗ್​ ಸ್ಟೈಲ್​, ಫ್ಯಾಷನ್​ಗೆ ಮರುಳಾಗಿದ್ದಾರೆ. ಇತ್ತೀಚೆಗೆ ನಟಿಯ ಕ್ಯಾಶುವಲ್​ ಲುಕ್​ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ನಟಿ ರಶ್ಮಿಕಾ ಮಂದಣ್ಣ ಪಾಪರಾಜಿಗಳ ಕಣ್ಣಿಗೆ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅವರ ಫೋಟೋಗಳು, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತವೆ. ಇತ್ತೀಚೆಗೆ ನಟಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಶುವಲ್​ ಉಡುಪಿನಲ್ಲಿ ಗಮನ ಸೆಳೆದಿದ್ದಾರೆ. ಆಕರ್ಷಕವಾಗಿ ಕಂಡಿದ್ದಾರೆ. ಅವರು ಒಂದು ನಗು ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನ್ಯಾಷನಲ್​ ಕಶ್​ ಸಂಪೂರ್ಣ ನೋಟಕ್ಕೆ ಫಿದಾ ಆಗಿದ್ದಾರೆ.

ಇನ್​ಸ್ಟಾದಲ್ಲಿ ಪಾಪರಾಜಿ ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿ, ರಶ್ಮಿಕಾ ಕ್ರೀಮ್​ ಬಣ್ಣದ ಪ್ಯಾಂಟ್​ ಮತ್ತು ಬಿಳಿ ಕ್ರಾಪ್​ ಟಾಪ್​ನಲ್ಲಿ ಕಂಡಿದ್ದಾರೆ. ನೀಲಿ ಮತ್ತು ಕೆಂಪು ಮಿಶ್ರಿತ ಪಟ್ಟಿಯ ಚೆಕ್ಕರ್​ ಶರ್ಟ್​ನೊಂದಿಗೆ ತಮ್ಮ ನೋಟ ಪೂರ್ಣಗೊಳಿಸಿದರು. ಯಾವುದೇ ಮೇಕಪ್​ ಇಲ್ಲದೇ, ಆಭರಣಗಳನ್ನು ಧರಿಸಿದೇ ಕ್ಯಾಶುವಲ್​ ಆಗಿ ಕಾಣಿಸಿಕೊಂಡರು. ಕೂದಲನ್ನು ಮೇಲಕ್ಕೆ ಎತ್ತಿ ಕಟ್ಟಿದ್ದರು. ಜೊತೆಗೆ ಬಿಳಿ ಶೂಗಳನ್ನು ಧರಿಸಿದ್ದರು. ರಶ್ಮಿಕಾ ತಮ್ಮ ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡಿದ್ದರು. ಮುದ್ದಾದ ನಗುವಿನಿಂದ ವಿಮಾನ ನಿಲ್ದಾಣದಲ್ಲಿ ಎಲ್ಲರನ್ನು ಆಕರ್ಷಿಸಿದರು.

ವಿಡಿಯೋ ಶೇರ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಕಾಮೆಂಟ್​ ಸೆಕ್ಷನ್​ಗೆ ಮುಗಿಬಿದ್ದರು. ರಶ್ಮಿಕಾ ಮಂದಣ್ಣ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಅಭಿಮಾನಿಯೊಬ್ಬರು, "ಓ ಮೈ ಗಾಡ್​! ಮೇಕಪ್​ ಇಲ್ಲದೆಯೇ ಸುಂದರವಾಗಿ ಕಾಣುವ ಏಕೈಕ ನಟಿ ಅವಳು ಎಂದು ನಾನು ಭಾವಿಸುತ್ತೇನೆ" ಎಂದು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು, "ಎಲ್ಲಾ ಭಾರತೀಯರ ಕ್ರಶ್​" ಎಂದಿದ್ದಾರೆ. ಇನ್ನೊಬ್ಬರು, "ಡ್ರಾಪ್​ ಡೆಡ್​ ಗಾರ್ಜಿಯಸ್​" ಎಂದು ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರೊಬ್ಬರು, "ವಾವ್​ ರಶ್ಮಿಕಾ ಬ್ಯೂಟಿಫುಲ್​" ಎಂದು ಬರೆದಿದ್ದಾರೆ.

ರಶ್ಮಿಕಾ ಮಂದಣ್ಣ ಸಿನಿಮಾಗಳು: ರಶ್ಮಿಕಾ ಮಂದಣ್ಣ 2 ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮೂರ್ನಾಲ್ಕು ಸಿನಿಮಾಗಳು ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್​​ ಹಂತದಲ್ಲಿದೆ. ಪುಷ್ಪ-2 ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ. ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಜೊತೆಗೆ ನಾಯಕಿಯಾಗಿ ಮತ್ತೊಮ್ಮೆ ಕಾಣಸಿಕೊಳ್ಳಲಿದ್ದಾರೆ. ಶ್ರೀವಲ್ಲಿ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಚಿತ್ರವನ್ನು ಸುಕುಮಾರ್​ ನಿರ್ದೇಶಿಸುತ್ತಿದ್ದಾರೆ. ಇದೊಂದು ಪ್ಯಾನ್​ ಇಂಡಿಯಾ ಸಿನಿಮಾವಾಗಿದೆ.

ಇದಲ್ಲದೇ 'ಅನಿಮಲ್​'ನಲ್ಲೂ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್​ ನಟ ರಣಬೀರ್​ ಕಪೂರ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರವನ್ನು ಸಂದೀಪ್​ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. 2023ರ ಡಿಸೆಂಬರ್​ 1 ರಂದು ಚಿತ್ರಮಂದಿರಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿ ಐದು ಭಾಷೆಗಳಲ್ಲಿ ದೇಶಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ. ಇದಕ್ಕೂ ಮುನ್ನ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್​ ಮಜ್ನು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ರಶ್ಮಿಕಾ, ರಣಬೀರ್​ ಅಭಿನಯದ 'ಅನಿಮಲ್​' ಶೂಟಿಂಗ್​ ಕಂಪ್ಲೀಟ್; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.