ETV Bharat / entertainment

'ಮ್ಯಾನೇಜರ್ ವಂಚಿಸಿಲ್ಲ, ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕವಾಗಿದ್ದೇವೆ': ರಶ್ಮಿಕಾ ಮಂದಣ್ಣ ಸ್ಪಷ್ಟನೆ! - Rashmika Mandanna manager

ಮಾನೇಜರ್​ ಅವರಿಂದ ವಂಚನೆ ಆಗಿದೆ ಎಂಬ ವದಂತಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ.

Rashmika Mandanna
ರಶ್ಮಿಕಾ ಮಂದಣ್ಣ
author img

By

Published : Jun 23, 2023, 9:48 AM IST

Updated : Jun 23, 2023, 11:51 AM IST

ಬಹುಭಾಷಾ ಚಿತ್ರಗಳಲ್ಲಿ ಮಿಂಚುತ್ತಿರುವ ಜನಪ್ರಿಯ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಮ್ಯಾನೇಜರ್​ ವಂಚಿಸಿದ್ದಾರೆ. ನಟಿಗೆ 80 ಲಕ್ಷ ರೂ. ಮೋಸ ಮಾಡಿದ್ದಾರೆ. ಈ ಹಿನ್ನೆಲೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿ ತೀವ್ರ ಸದ್ದು ಮಾಡಿದ ಹಿನ್ನೆಲೆ ಸ್ವತಃ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

'ಯಾವುದೇ ಜಗಳ ನಡೆದಿಲ್ಲ': ಮಾನೇಜರ್​​ಯಿಂದ ವಂಚನೆ ಆಗಿದೆ. ತಮ್ಮ ನಡುವೆ ಜಗಳವಾಗಿದೆ ಎಂಬ ವದಂತಿಗಳನ್ನು ನಟಿ ನಿರಾಕರಿಸಿದರು. ತಮ್ಮ ನಡುವೆ ಯಾವುದೇ ಜಗಳ ನಡೆದಿಲ್ಲ ಎಂದು ಕೂಡ ರಶ್ಮಿಕಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

'ನಮ್ಮ ನಡುವೆ ಯಾವುದೇ ದ್ವೇಷವಿಲ್ಲ. ನಮ್ಮ ಮಾರ್ಗಗಳು ವಿಭಿನ್ನವಾಗಿವೆ. ಅವರು ವೃತ್ತಿಜೀವನದಲ್ಲಿ ಬೆಳೆಯಬೇಕೆಂದು ನಾನು ಬಯಸುತ್ತೇನೆ. ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಅವರು ಬೇರೆ ಕೆಲಸದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ನಾವು ವೃತ್ತಿಪರರು, ನಾವು ಏನೇ ಮಾಡಿದರೂ ಅದಕ್ಕೆ ಬದ್ಧರಾಗಿರುತ್ತೇವೆ' ಎಂದು ಸ್ಪಷ್ಟನೆ ನೀಡಿದ್ದಾರೆ.

ವದಂತಿಗಳೇನು?: ಸರಣಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಅವರಿಗೆ ಇತ್ತೀಚೆಗಷ್ಟೇ ಅವರ ಪರ್ಸನಲ್ ಮ್ಯಾನೇಜರ್‌ ಆರ್ಥಿಕವಾಗಿ ವಂಚಿಸಿದ್ದಾರೆ ಎಂದು ಹೇಳಲಾಗಿತ್ತು. ರಶ್ಮಿಕಾ ಅವರಿಗೆ ತಿಳಿಯದಂತೆ ಸುಮಾರು 80 ಲಕ್ಷ ರೂ. ಮೋಸ ಮಾಡಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡಿತ್ತು. ತಮಗೆ ಮೋಸ ಮಾಡಿದ ಕಾರಣ ರಶ್ಮಿಕಾ ಮ್ಯಾನೇಜರ್​ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಸಹ ವರದಿಯಾಗಿತ್ತು.

ತಮ್ಮ ಸಿನಿಮಾ ವೃತ್ತಿಜೀವನದ ಆರಂಭದಿಂದಲೂ ಜೊತೆಗಿರುವ ಮ್ಯಾನೇಜರ್ ಮಾಡಿರುವ ಈ ಕೆಲಸದಿಂದ ರಶ್ಮಿಕಾ ಅವರಿಗೆ ತುಂಬಾ ನೋವಾಗಿದೆ ಎಂಬ ಸುದ್ದಿಗಳು ಹರಿದಾಡಿತ್ತು. ಈ ವದಂತಿಗಳು ಹೆಚ್ಚಿದ ಕಾರಣ ಸ್ವತಃ ರಶ್ಮಿಕಾ ಮಂದಣ್ಣ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮತ್ತು ಮ್ಯಾನೇಜರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Dhoomam: ಇಂದು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಬಹುನಿರೀಕ್ಷಿತ ಚಿತ್ರ 'ಧೂಮಂ' ಬಿಡುಗಡೆ

ಕಿರಿಕ್​ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ವೃತ್ತಿಜೀವನ ಗಮನಿಸಿದರೆ, ಅನಿಮಲ್ ಸಿನಿಮಾ ಶೂಟಿಂಗ್​​ ಪೂರ್ಣಗೊಳಿಸಿದ್ದಾರೆ. ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಣ್​​​ಬೀರ್ ಕಪೂರ್ ಜೊತೆ ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡಿರುವ ಅನಿಮಲ್ ಸಿನಿಮಾ ಆಗಸ್ಟ್ 11 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ, ಸುಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2ನಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ರಶ್ಮಿಕಾ, ರಣಬೀರ್​ ಅಭಿನಯದ 'ಅನಿಮಲ್​' ಶೂಟಿಂಗ್​ ಕಂಪ್ಲೀಟ್; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ​

ಬಾಲಿವುಡ್​​ನ ಮಿಷನ್ ಮಜ್ನು ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇದಕ್ಕೂ ಮುನ್ನ ಬಾಲಿವುಡ್​ ಹಿರಿಯ ನಟ ಅಮಿತಾಭ್ ಬಚ್ಚನ್ ಅವರೊಂದಿಗೆ ಗುಡ್ ​ಬೈ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ರಣ್​​​ಬೀರ್ ಕಪೂರ್ ಜೊತೆ ನಟಿಸಿರುವ 'ಅನಿಮಲ್' ನ್ಯಾಶನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಅವರ ಮೂರನೇ ಬಾಲಿವುಡ್​ ಸಿನಿಮಾ.

Last Updated : Jun 23, 2023, 11:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.