ETV Bharat / entertainment

ತನ್ನನ್ನು ದ್ವೇಷಿಸುವವರ ಬಗ್ಗೆ ಮನಸ್ಸು ಮುರಿದುಕೊಂಡ ರಶ್ಮಿಕಾ ಮಂದಣ್ಣ: ಹೇಳಿದ್ದೇನು ಗೊತ್ತೇ? - I know the price of my life

ನಾನು ಆರಿಸಿಕೊಂಡ ನನ್ನ ಜೀವನದ ಬೆಲೆ ನನಗೆ ತಿಳಿದಿದೆ. ಪ್ರತಿಯೊಬ್ಬರ ಕಪ್‌ನಲ್ಲಿರುವ ಚಹಾ ನಾನಲ್ಲ. ಹಾಗಾಗಿ ಎಲ್ಲರೂ ನನ್ನನ್ನು ಪ್ರೀತಿಸಬೇಕೆಂದು ನಿರೀಕ್ಷಿಸಲಾರೆ.- ನಟಿ ರಶ್ಮಿಕಾ ಮಂದಣ್ಣ

Rashmika Mandanna On Receiving Hate
ತನ್ನನ್ನು ದ್ವೇಷಿಸುವವರ ಬಗ್ಗೆ ಮನಸ್ಸು ಮುರಿದುಕೊಂಡ ರಶ್ಮಿಕಾ ಮಂದಣ್ಣ
author img

By

Published : Nov 9, 2022, 11:21 AM IST

ನಟಿ ರಶ್ಮಿಕಾ ಮಂದಣ್ಣ ಎಲ್ಲರಿಗೂ ತಿಳಿದಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಹಾಗೆಯೇ ಹಂಚಿಕೊಂಡಿರುವ ತಮ್ಮ ಇತ್ತೀಚಿನ ಪೋಸ್ಟ್‌ಗಳಲ್ಲಿ ಕೆಲವು ದಿನಗಳಿಂದ ಅವರನ್ನು ತೊಂದರೆಗೀಡು ಮಾಡುತ್ತಿರುವ ಟ್ರೋಲ್‌ಗಳು, ತನ್ನನ್ನು ದ್ವೇಷಿಸುವ ಕೆಲವು ವರ್ಗಗಳು ಹಾಗೆಯೇ ತಾನು "ಪಂಚಿಂಗ್ ಬ್ಯಾಗ್" ಆಗಿರುವ ವಿಷಯಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳು ನನ್ನ ಬಗ್ಗೆ ಹೆಮ್ಮೆಪಡುವಂತೆ ಮಾಡಲು ನನ್ನೆಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಆದರೂ ಕೆಲವರು ನನ್ನನ್ನು ದ್ವೇಷಿಸುತ್ತಿದ್ದಾರೆ. ಇದು ನನ್ನನ್ನು ನಿರಾಶೆಗೊಳಿಸಿದೆ. ಕೆಲವು ದಿನಗಳಿಂದ ಒಂದೆರಡು ವಿಷಯಗಳು ನನ್ನನ್ನು ತೊಂದರೆಗೊಳಿಸುತ್ತಿವೆ. ಮತ್ತು ಈಗ ಅದನ್ನು ನಾನು ಪರಿಹರಿಸುವ ಸಮಯ ಬಂದಿದೆ. ನಾನು ಬರೀ ನನಗಾಗಿ ಮಾತ್ರ ಮಾತನಾಡುತ್ತಿದ್ದೇನೆ. ಈ ಕೆಲಸ ಮೊದಲೇ ಮಾಡಬೇಕಾಗಿತ್ತು. ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದಲೂ ನಾನು ಬಹಳಷ್ಟು ದ್ವೇಷದ ಟ್ರೋಲ್‌ಗಳನ್ನು ಸ್ವೀಕರಿಸಿಕೊಂಡೇ ಬಂದಿದ್ದೇನೆ ಎಂದು ಮನದಾಳ ವಿವರಿಸಿದರು.

ನಾನು ಆರಿಸಿಕೊಂಡ ಜೀವನದ ಬೆಲೆ ನನಗೆ ತಿಳಿದಿದೆ. ನಾನು ಪ್ರತಿಯೊಬ್ಬರ ಕಪ್‌ನಲ್ಲಿರುವ ಚಹಾ ಅಲ್ಲ. ಹಾಗಾಗಿ ಎಲ್ಲರೂ ನನ್ನನ್ನು ಪ್ರೀತಿಸಬೇಕೆಂದು ನಿರೀಕ್ಷಿಸಲಾರೆ. ಆದರೆ ಎಲ್ಲರೂ ಹೆಮ್ಮಪಡುವ ಕೆಲಸವನ್ನು ನಾನು ಮಾಡುತ್ತೇನೆ. ನಾನು ಹೇಳದ ವಿಷಯಗಳಿಗಾಗಿ ನನ್ನನ್ನು ಅಪಹಾಸ್ಯ ಮಾಡಿದಾಗ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತದೆ. ಸಂದರ್ಶನದಲ್ಲಿ ಹೇಳಿದ ಕೆಲವು ವಿಷಯಗಳು ನನ್ನ ವಿರುದ್ಧವೇ ತಿರುಗಿವೆ. ಕೆಲವು ಸುಳ್ಳು ನಿರೂಪಣೆಗಳು ಇಂಟರ್ನೆಟ್‌ನಲ್ಲಿ ಹರಡಿರುವುದು ನನ್ನ ಉದ್ಯಮ ಮತ್ತು ನನ್ನ ಸಂಬಂಧಗಳಿಗೆ ಹಾನಿಕಾರಕವಾಗಿದೆ ಎಂದು ತಿಳಿಸಿದ್ದಾರೆ.

ಈ ರೀತಿಯ ಪೋಸ್ಟ್‌ ಅನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡ ಕೂಡಲೇ, ಅವರ ಸೀತಾ ರಾಮಂ ಚಿತ್ರದ ಸಹನಟ ದುಲ್ಕರ್ ಸಲ್ಮಾನ್ ಅವರು, "ನಿನ್ನ ಥರ ಇರಲು ಇಚ್ಚಿಸುವವರು ನಿನ್ನನ್ನು ಪ್ರೀತಿಸುತ್ತಾರೆ, ಯಾರಿಂದ ಅದು ಸಾಧ್ಯವಿಲ್ಲವೊ ಅವರು ದ್ವೇಷಿಸುತ್ತಾರೆ" ಎಂದು ಬರೆದಿದ್ದಾರೆ. ರಶ್ಮಿಕಾ ಅವರ ಅಭಿಮಾನಿಯೊಬ್ಬರು, "ನೀವು ಆ ಜೋಕರ್‌ಗಳ ಬಗ್ಗೆ ಚಿಂತಿಸಬೇಡಿ, ನಿಮ್ಮನ್ನು ಬೆಂಬಲಿಸಲು ಮತ್ತು ನಿಮ್ಮನ್ನು ಪ್ರೋತ್ಸಾಹಿಸಲು ನಾವು ಇದ್ದೇವೆ" ಎಂದು ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: ದೇಹದ ಅಸಮತೋಲನ ಕಾಯಿಲೆಗೆ ಒಳಗಾದ ನಟ ವರುಣ್ ಧವನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.