ETV Bharat / entertainment

Rashmika Mandanna: ಅಭಿಮಾನಿಗಳಿಗೊಂದು ಪ್ರಶ್ನೆ ಕೇಳಿದ ನ್ಯಾಷನಲ್​ ಕ್ರಶ್ - ನಿಮ್ಮ ಉತ್ತರವೇನು?! - Rashmika Mandanna movies

ರಶ್ಮಿಕಾ ಮಂದಣ್ಣ ಶೇರ್ ಮಾಡಿರುವ ಇನ್​ಸ್ಟಾಗ್ರಾಮ್​ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ.

Rashmika Mandanna
ರಶ್ಮಿಕಾ ಮಂದಣ್ಣ
author img

By

Published : Jun 29, 2023, 9:45 AM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ತಾರೆ. ಹಾಗಾಗಿಯೇ ಅವರನ್ನು 'ನ್ಯಾಷನಲ್ ಕ್ರಶ್' ಎಂದು ಕರೆಯಲಾಗುತ್ತದೆ. ಸಿನಿಮಾಗಳ ಹೊರತಾಗಿ, ಅವರ ವೈಯಕ್ತಿಕ ಜೀವನ, ಬೇಕು - ಬೇಡಗಳ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿರುತ್ತಾರೆ. ನಟಿ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮೂಲಕ ತಮ್ಮ ಸಿನಿಮಾ ಜೊತೆಗೆ ಪರ್ಸನಲ್​ ಲೈಫ್​ ಬಗ್ಗೆ ಕೆಲ ಅಪ್​ಡೇಟ್ಸ್ ಕೊಡುತ್ತಿರುತ್ತಾರೆ. ಇತ್ತೀಚೆಗೆ ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು, ಅದರಲ್ಲಿ ತಮ್ಮಿಷ್ಟದ ತಿನಿಸಿನ ಬಗ್ಗೆ ತಿಳಿಸಿದ್ದಾರೆ.

ರಶ್ಮಿಕಾ ಮಂದಣ್ಣ ಚೀಟ್​ ಡೇ: ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ, ರಶ್ಮಿಕಾ ಸಿಹಿ ಖಾದ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿದೆ. ಡಯೆಟ್ ರೂಲ್ಸ್​ ಅನ್ನು ಕಟ್ಟುನಿಟ್ಟಾಗಿ ಪಾಲಿಸುವ ನಟಿಮಣಿಯರು ಆಗಾಗ್ಗೆ ತಿನಿಸಿನ ವಿಚಾರದಲ್ಲಿ ಚೀಟ್​ ಡೇ ಅನ್ನು ಆನಂದಿಸುತ್ತಾರೆ.

ಅಭಿಮಾನಿಗಳಿಗೊಂದು ಪ್ರಶ್ನೆ: ''ನಿಮಗೆ ಗೊತ್ತಾ, ನನ್ನ ಚೀಟ್​ ಡೇನಲ್ಲಿ ನಾನು ಯಾವಾಗಲೂ ನನ್ನ ಮುಖ್ಯ ಊಟಕ್ಕೂ ಮೊದಲು ಡೆಸರ್ಟ್ಸ್ (desserts) ಅನ್ನು ಆರ್ಡರ್ ಮಾಡುತ್ತೇನೆ. ನನ್ನ ಬಹಳಷ್ಟು ಸ್ನೇಹಿತರು ಇದನ್ನು ವಿಚಿತ್ರವಾಗಿ ನೋಡುತ್ತಾರೆ. ಹಾಗಾಗಿ ನಾನು ಈ ಬಗ್ಗೆ ಅರ್ಥಮಾಡಿಕೊಳ್ಳಲು ಬಯಸುತ್ತೇನೆ. ಈ ರೀತಿ ಮಾಡುವುದು ನಾನು ಮಾತ್ರವೇ? ಅಥವಾ ನಿಮ್ಮಲ್ಲಿ ಯಾರಾದರೂ?'' ಎಂದು ಫೋಟೋ ಕ್ಯಾಪ್ಷನ್​ನಲ್ಲಿ ಬರೆದಿದ್ದಾರೆ.

ಅಭಿಮಾನಿಗಳ ಪ್ರಶ್ನೆ: ರಶ್ಮಿಕಾ ಅವರ ಈ ಮುದ್ದಾದ ಫೋಟೋ ಮತ್ತು ಅವರ ಪ್ರಶ್ನೆಗೆ ಕಾಮೆಂಟ್ ಮಾಡಿದ ಅನೇಕರು ತಮ್ಮದೇ ಆದ ರೀತಿಯಲ್ಲಿ ಉತ್ತರಗಳನ್ನು ನೀಡಿದ್ದಾರೆ. 'ಹೌದು, ನನಗೂ ಒಂದು ವಿಚಿತ್ರ ಅಭ್ಯಾಸವಿದೆ, ನಾನು ಯಾವಾಗಲೂ ತಿನ್ನುವ ಮೊದಲು ಬಿಲ್ ಕೇಳುತ್ತೇನೆ' ಎಂದು ಅಭಿಮಾನಿಯೊಬ್ಬರು ತಮಾಷೆಯಾಗಿ ಬರೆದಿದ್ದಾರೆ. ರಶ್ಮಿಕಾ ಅವರನ್ನು ಶ್ಲಾಘಿಸಿದ ಅಭಿಮಾನಿಯೊಬ್ಬರು 'ಕ್ಯೂಟ್‌ನೆಸ್ ಓವರ್‌ಲೋಡೆಡ್​' ಎಂದು ಬರೆದಿದ್ದಾರೆ.

ಇದನ್ನೂ ಓದಿ: Satyaprem Ki Katha: ಮೊದಲ ದಿನ 8 ಕೋಟಿ ರೂ. ಕಲೆಕ್ಷನ್ ಸಾಧ್ಯತೆ​ ​ - ಕಿಲ್ಲಿಂಗ್​​ ಲುಕ್​​ ಕೊಟ್ಟ ಕಿಯಾರಾ

ರಶ್ಮಿಕಾ ಯಾವಾಗಲೂ ತಮ್ಮ ಅಭಿಮಾನಿಗಳಿಗಾಗಿ ತಮಾಷೆಯ ಪೋಸ್ಟ್​ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ, ಅವರು ತಮ್ಮ ನಾಯಿಮರಿಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದರು. ಅದಕ್ಕೆ ಅವರ ಅಭಿಮಾನಿಯೊಬ್ಬರು 'ಹೇ ಗೂಗಲ್ ಹೇಗೆ ನಾಯಿಯಾಗುವುದು' ಎಂದು ತಮಾಷೆಯ ಕಾಮೆಂಟ್ ಬರೆದಿದ್ದರು.

ಇದನ್ನೂ ಓದಿ: Janhvi Kapoor: ಲಂಡನ್​ನಿಂದ ಸರಣಿ ಚಿತ್ರಗಳನ್ನು ಹಂಚಿಕೊಂಡ ಬಾಲಿವುಡ್​ ಬೆಡಗಿ

ನಟಿ​ ರಶ್ಮಿಕಾ ಮಂದಣ್ಣ ಅವರ ಮುಂದಿನ ಸಿನಿಮಾ ಅನಿಮಲ್. ಇದೇ ಮೊದಲ ಬಾರಿಗೆ ಬಾಲಿವುಡ್​​ ನಟ ರಣ್​​​ಬೀರ್ ಕಪೂರ್ ಜೊತೆಗೆ ನಟಿಸಿದ್ದಾರೆ. ಅನಿಮಲ್​ ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಇದಕ್ಕೂ ಮುನ್ನ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್​ ಮಜ್ನು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅನಿಮಲ್ ಸಿನಿಮಾ​ ಬಿಡುಗಡೆಗೆ ಸಜ್ಜಾಗಿದ್ದರೆ, ಮೂರ್ನಾಲ್ಕು ಸಿನಿಮಾಗಳು ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್​​ ಹಂತದಲ್ಲಿದೆ. ಪುಷ್ಪ 2 ಬಿಡುಗಡೆಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.