ETV Bharat / entertainment

ಹ್ಯಾಪಿ ಬರ್ತ್ ಡೇ ಶ್ರೀವಲ್ಲಿ: ರಶ್ಮಿಕಾ ಮಂದಣ್ಣ ಫಸ್ಟ್ ಲುಕ್, ಪುಷ್ಪಾ 2 ಟೀಸರ್ ತುಣುಕು​ ರಿಲೀಸ್ - ಪುಷ್ಪಾ 2

ರಶ್ಮಿಕಾ ಮಂದಣ್ಣ ಜನ್ಮದಿನಕ್ಕೆ ಪುಷ್ಪ 2 ತಂಡ ವಿಶೇಷವಾಗಿ ಶುಭಾಶಯ ಕೋರಿದೆ.

Pushpa 2
ರಶ್ಮಿಕಾ ಮಂದಣ್ಣ ಪುಷ್ಪಾ 2 ಫಸ್ಟ್ ಲುಕ್
author img

By

Published : Apr 5, 2023, 3:11 PM IST

ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ, ಸದ್ಯ ಬಹುಭಾಷೆಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 27ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಗೆ ಕುಟುಂಬಸ್ಥರು, ಆಪ್ತರೇಷ್ಟರು, ಚಿತ್ರರಂಗದವರೂ ಸೆರಿದಂತೆ ಬಹು ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

Pushpa 2
ಪುಷ್ಪಾ 2 ಟೀಸರ್ ತುಣುಕು​ ರಿಲೀಸ್

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಹಿನ್ನೆಲೆ, 'ಪುಷ್ಪಾ: ದಿ ರೂಲ್' ನಿರ್ಮಾಪಕರು ಚಿತ್ರದ ಮೊದಲ ನೋಟವನ್ನು ಅನಾವರಣಗೊಳಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪುಷ್ಪ 2 ದಿಂದ ರಶ್ಮಿಕಾ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ನಟಿ ಶ್ರೀವಲ್ಲಿ ಪಾತ್ರವನ್ನು ಮುಂದುವರಿಸಲಿದ್ದಾರೆ. ಆದರೆ ಅವರ ನೋಟವು 'ಪುಷ್ಪ: ದಿ ರೈಸ್‌'ಗಿಂತ ಕೊಂಚ ಭಿನ್ನವಾಗಿದೆ. ಈ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ರಶ್ಮಿಕಾ ಮಂದಣ್ಣ ಜನ್ಮದಿನದಂದು ಪುಷ್ಪ ಸೀಕ್ವೆಲ್​ ಬಗ್ಗೆ ಅಪ್​ಡೇಟ್ ಸಿಗಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದರು.​ ಭರವಸೆಯಂತೆ ಮೈತ್ರಿ ಮೂವಿ ಮೇಕರ್ಸ್, ಪುಷ್ಪಾ 2ರ ಅಪ್​ಡೇಟ್​​ನೊಂದಿಗೆ ಬಂದಿದ್ದಾರೆ. ಇದು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಉಡುಗೊರೆಯಾಗಿದೆ ಎಂದು ಭಾವಿಸಲಾಗಿದೆ. ನಟಿ ತನ್ನ ಪುಷ್ಪಾ ಪಾತ್ರದ ಮೂಲಕ ವಿಮರ್ಶಕರು ಮತ್ತು ಪ್ರೇಕ್ಷಕರನ್ನು ಮೆಚ್ಚಿಸುತ್ತಿದ್ದಾರೆ.

ಪುಷ್ಪ: ದಿ ರೂಲ್ ಚಿತ್ರ ತಯಾರಕರ ಚಿತ್ರದ ಕುತೂಹಲಕಾರಿ ಟೀಸರ್​ನ ಸಣ್ಣ ತುಣುಕನ್ನು ಸಹ ಅನಾವರಣಗೊಳಿಸಿದ್ದಾರೆ. ನ್ಯಾಶನಲ್​ ಕ್ರಶ್​​ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ ನಂತರ ಪುಷ್ಪ ತಂಡವು ಟೀಸರ್​ನ ತುಣುಕುಳ್ಳ ವಿಡಿಯೋವನ್ನೂ​ ಸಹ ಬಿಡುಗಡೆ ಮಾಡಿದ್ದಾರೆ. ಇದೇ ಏಪ್ರಿಲ್ 8ರ ಅಲ್ಲು ಅರ್ಜುನ್ / ಪುಷ್ಪ ರಾಜ್ ಜನ್ಮದಿನಕ್ಕೆ, ಚಿತ್ರತಂಡ ಮೊದಲೇ ಸರ್​ಪ್ರೈಸ್​ ಕೊಟ್ಟಿದೆ. ಏಪ್ರಿಲ್ 8ಕ್ಕೂ ಮುನ್ನ ಅಂದರೆ ಏಪ್ರಿಲ್​ 7ರ ಸಂಜೆ ಮತ್ತಷ್ಟು ಸರ್ಪ್ರೈಸ್, ಫುಲ್​ ವಿಡಿಯೋ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಮೈತ್ರಿ ಮೂವಿ ಮೇಕರ್ಸ್ ಪುಷ್ಪ 2ರ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. "ಎಲ್ಲಿ ಪುಷ್ಪಾ ? ಹುಡುಕಾಟವು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ, ಏಪ್ರಿಲ್ 7 ರಂದು ಸಂಜೆ 4.05 ಗಂಟೆಗೆ ಸಂಪೂರ್ಣ ಟೀಸರ್ ಅನಾವರಣಗೊಳ್ಳಲಿದೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಸುದೀಪ್​ಗೆ ಬೆದರಿಕೆ ವಿಚಾರದಲ್ಲಿ ಸರ್ಕಾರ ಸುಮ್ಮನೆ ಕೂರಲ್ಲ': ಡಾ. ಸುಧಾಕರ್

ಅಲ್ಲು ಅರ್ಜುನ್ ಅವರ ಅಭಿಮಾನಿಗಳನ್ನು ಅಚ್ಚರಿಗೊಳಿಸಲು ಮೈತ್ರಿ ಮೂವಿ ಮೇಕರ್ಸ್ ಸಜ್ಜಾಗುತ್ತಿದೆ. ಸುಕುಮಾರ್ ನಿರ್ದೇಶನದ ಪುಷ್ಪ 2 ಸೌತ್​ ಸಿನಿಮಾ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ. ಪುಷ್ಪ: ದಿ ರೈಸ್‌ನ ಅದ್ಭುತ ಯಶಸ್ಸಿನ ನಂತರ, ಚಿತ್ರ ತಯಾರಕರು ಸೀಕ್ವೆಲ್​ ಭಾಗವನ್ನು ಅದ್ಧೂರಿಯಾಗಿ ಚಿತ್ರೀಕರಿಸುತ್ತಿದ್ದಾರೆ.

ಇದನ್ನೂ ಓದಿ: 'ರೈನ್​ಬೋ' ಸಮಂತಾ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ.. ಶಾಕುಂತಲಂ ತಾರೆಯ ಅಭಿಮಾನಿಗಳ ಅಸಮಾಧಾನ

VNRTrio ರಶ್ಮಿಕಾ ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ. ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ VNRTrio ತಂಡ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ನಟಿಗೆ ವಿಶೇಷವಾಗಿ ಶುಭ ಕೋರಲಾಗಿದೆ. ವೆಂಕಿ ಕುಡುಮುಲ ನಿರ್ದೇಶನದ ಈ ಚಿತ್ರದಲ್ಲಿ ನಟ ನಿತಿನ್ ಅವರಿಗೆ ನಾಯಕಿಯಾಗಿ ಅವರು ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.