ETV Bharat / entertainment

ಫಿಲ್ಮ್‌ಫೇರ್ ಅವಾರ್ಡ್ಸ್ 2022: ಕಾರ್ಯಕ್ರಮ ನಿರೂಪಿಸಲಿದ್ದಾರೆ ಬಾಲಿವುಡ್‍ನ ಗಲ್ಲಿಬಾಯ್ - ರಣವೀರ್ ಸಿಂಗ್ ಲೇಟೆಸ್ಟ್​​ ನ್ಯೂಸ್​​

ಬಾಲಿವುಡ್‍ನ ಗಲ್ಲಿಬಾಯ್ ರಣವೀರ್ ಸಿಂಗ್ ಅವರು ಮೊದಲ ಬಾರಿಗೆ 'ಫಿಲ್ಮ್‌ಫೇರ್' ಪ್ರಶಸ್ತಿ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

Ranveer Singh to host Filmfare Awards with his BFF Arjun Kapoor
ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್
author img

By

Published : Jul 30, 2022, 12:00 PM IST

ಬಹು ನಿರೀಕ್ಷಿತ 67ನೇ ಆವೃತ್ತಿಯ ಫಿಲ್ಮ್‌ಫೇರ್ ಅವಾರ್ಡ್ಸ್-2022, Wolf 777 news ಸಹಯೋಗದಲ್ಲಿ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಗಸ್ಟ್ 30 ನಡೆಯಲಿದೆ. ಈ ಕಾರ್ಯಕ್ರಮವನ್ನು ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ನಿರೂಪಿಸಲಿದ್ದಾರೆ.

ನಟ ಕಾರ್ತಿಕ್ ಆರ್ಯನ್, ವಿಕ್ಕಿ ಕೌಶಲ್, ಕಿಯಾರಾ ಅಡ್ವಾಣಿ ಮತ್ತು ದಿಶಾ ಪಟಾನಿ ಅವರು ಈ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಮನಮೋಹಕ ಕಾರ್ಯಕ್ರಮ ಕಲರ್ಸ್ ಮತ್ತು ಕಲರ್ಸ್ ಸಿನೆಪ್ಲೆಕ್ಸ್‌ನಲ್ಲಿ ಪ್ರಸಾರವಾಗಲಿದೆ ಮತ್ತು ಜಾಗತಿಕವಾಗಿ ಫಿಲ್ಮ್‌ಫೇರ್‌ನ ಫೇಸ್‌ಬುಕ್ ಪುಟದಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ರಣವೀರ್ ಸಿಂಗ್ ಪತ್ರಿಕಾಗೋಷ್ಠಿ

ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಣವೀರ್ ಸಿಂಗ್, "ನಾನು ಮೊದಲ ಬಾರಿಗೆ ನಿರೂಪಣೆ ಮಾಡುತ್ತಿದ್ದೇನೆ. ಕಾರ್ಯಕ್ರಮದಲ್ಲಿ ನಾನು ಕೆಲವು ಬಾರಿ ನೃತ್ಯ ಮಾಡಿದ್ದೇನೆ. ವೇದಿಕೆಯಲ್ಲಿ ಪ್ರದರ್ಶನ ನೀಡುವುದು ನಿರೂಪಣೆಗಿಂತ ವಿಭಿನ್ನವಾಗಿದೆ. ನನ್ನ ಪ್ರಕಾರ ನಿರೂಪಣೆಗೆ ಹತ್ತು ಪಟ್ಟು ಹೆಚ್ಚು ಕೆಲಸ ತೆಗೆದುಕೊಳ್ಳುತ್ತದೆ. ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಘೋಷಿಸುವುದು ಮತ್ತು ನಿರೂಪಣೆ ಮಾಡುವುದು ಒಂದು ಗೌರವ. ಪ್ರೇಕ್ಷಕರ ಮುಂದೆ ಕಾರ್ಯಕ್ರಮವನ್ನು ಆಯೋಜಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್: ಇತ್ತೀಚಿನ ದಿನಗಳಲ್ಲಿ ರಣವೀರ್ ಸಿಂಗ್ ಅವರ ನ್ಯೂಡ್ ಫೋಟೋಶೂಟ್‌ನಿಂದ ಸುದ್ದಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ನಿಯತಕಾಲಿಕೆಗೆ ನಗ್ನ ಚಿತ್ರಗಳನ್ನು ಹಾಕಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. "ತನ್ನ ಛಾಯಾಚಿತ್ರಗಳ ಮೂಲಕ ಮಹಿಳೆಯರ ಭಾವನೆಗಳಿಗೆ ಮತ್ತು ಅವರ ಘನತೆಗೆ ಧಕ್ಕೆ ತಂದಿದ್ದಾರೆ" ಎಂದು ಆರೋಪಿಸಲಾಗಿದೆ.

ಎಫ್‌ಐಆರ್ ದಾಖಲಾದ ಎರಡು ದಿನಗಳ ನಂತರ ಅವರು ಗುರುವಾರ 'ಫಿಲ್ಮ್‌ಫೇರ್' ಪತ್ರಿಕಾಗೋಷ್ಠಿಯಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ನಾನು ಸ್ವಭಾವತಃ ಸ್ಪರ್ಧಾತ್ಮಕವಾಗಿಲ್ಲ ಮತ್ತು ಇತರರ ಮೇಲೆ ಪ್ರಾಬಲ್ಯ ಸಾಧಿಸುವುದರಲ್ಲಿ ನಂಬಿಕೆಯಿಲ್ಲ ಎಂದು ರಣವೀರ್ ಸಿಂಗ್ ಹೇಳಿದರು.

ಇದನ್ನೂ ಓದಿ: Ranveer Nude photoshoot: ನಗ್ನ ಫೋಟೋಶೂಟ್​ ಆಪತ್ತು.. ರಣವೀರ್​ ವಿರುದ್ಧ FIR

ETV Bharat Logo

Copyright © 2024 Ushodaya Enterprises Pvt. Ltd., All Rights Reserved.