ETV Bharat / entertainment

ಮತ್ತೊಂದು ಸಿನಿಮಾ ಮೂಲಕ ತೆರೆಗೆ ಬರಲಿದೆ ರೋಹಿತ್​ಶೆಟ್ಟಿ- ರಣವೀರ್​ ಸಿಂಗ್ ಜೋಡಿ - ಮುಂದಿನ ಸಿನಿಮಾ ಬಗ್ಗೆ ರೋಹಿತ್​ ಶೆಟ್ಟಿ ಘೋಷಣೆ

ಬಾಲಿವುಡ್​ನ ಸಕ್ಸಸ್​ಫುಲ್​ ಜೋಡಿಯಾದ ರಣವೀರ್​ ಸಿಂಗ್ ಮತ್ತು ನಿರ್ದೇಶಕ ರೋಹಿತ್​ ಮತ್ತೊಂದು ಸಿನಿಮಾ ಮೂಲಕ ಒಂದಾಗಲಿದ್ದಾರೆ. ಆ್ಯಕ್ಷನ್​ ಕಮರ್ಷಿಯಲ್​ ಸಿನಿಮಾ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ranveer-singh-and-rohit-shetty
ರೋಹಿತ್​ಶೆಟ್ಟಿ- ರಣವೀರ್​ ಸಿಂಗ್ ಜೋಡಿ
author img

By

Published : May 26, 2022, 3:28 PM IST

ಮುಂಬೈ: ಬಾಲಿವುಡ್​ನ ಬ್ಲಾಕ್‌ಬಸ್ಟರ್ ಜೋಡಿಯಾದ ನಿರ್ದೇಶಕ ರೋಹಿತ್ ಶೆಟ್ಟಿ ಮತ್ತು ನಟ ರಣವೀರ್ ಸಿಂಗ್ ಅವರು ಸೂರ್ಯವಂಶಿ ಮತ್ತು ಮುಂಬರುವ ಬಹು ನಿರೀಕ್ಷಿತ ಚಿತ್ರ 'ಸರ್ಕಸ್' ಜೊತೆಗೆ ಇನ್ನೊಂದು ಸಿನಿಮಾದಲ್ಲೂ ಒಂದಾಗಲಿದ್ದಾರೆ.

ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖಡಕ್​ ಲುಕ್​ನಲ್ಲಿರುವ ಸ್ಟಿಲ್​ ಒಂದನ್ನು ಈ ಜೋಡಿ ಹಂಚಿಕೊಂಡಿದೆ. ಇದು ಅಭಿಮಾನಿಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ. ಇಬ್ಬರೂ ದೊಡ್ಡ ಪ್ರಮಾಣದ ಸಿನಿಮಾಗೆ ಕೈ ಹಾಕಿದ್ದು, ನಿರೀಕ್ಷೆ ದ್ವಿಗುಣಗೊಳಿಸಿದೆ. ಡೈರೆಕ್ಟರ್​ ರೋಹಿತ್ ಶೆಟ್ಟಿ ನಿರ್ದೇಶಿಸುವ ಸಿನಿಮಾಗಳಲ್ಲಿ ಕಾಣುವಂತೆ ಕಾರುಗಳು ಹಾರುವುದು, ಬೆಂಕಿಯ ಜ್ವಾಲೆಯೂ ಈ ಸಿನಿಮಾದಲ್ಲಿ ಕಾಣಸಿಗಲಿದೆ. ರಣವೀರ್ ಕೈಯಲ್ಲಿರುವ ಪಿಸ್ತೂಲ್​ನಿಂದ ಗುಂಡು ಹಾರಿಸುವುದು ಈ ವಿಡಿಯೋದಲ್ಲಿದೆ.

ನಾವು ಕಮರ್ಷಿಯಲ್ ಸಿನಿಮಾವನ್ನು ಹೇಗೆ ಶೂಟ್ ಮಾಡುತ್ತೇವೆ ಎಂಬುದರ ಒಂದು ನೋಟವಿದು. ನನಗೆ ಗೊತ್ತು ಈ ಸಿನಿಮಾದಲ್ಲೂ ಆ್ಯಕ್ಷನ್​ಗಳು ಇರುತ್ತವೆ ಅಂತ. ಆದರೆ, ನಾವೇನು ಮಾಡೋದು ಇದು ಬಿಟ್ಟು ನಮಗೆ ಬೇರೆ ಏನೂ ಮಾಡಲು ಬರುವುದಿಲ್ಲ ಎಂದು ನಿರ್ದೇಶಕ ರೋಹಿತ್​ ಶೆಟ್ಟಿ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಅದೇ ವಿಡಿಯೋವನ್ನು ರಣವೀರ್ ತಮ್ಮ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದು, 'ಬಾಸ್ ಮತ್ತು ಬಾಬಾ ಮತ್ತೆ ಒಟ್ಟಿಗೆ' @itsrohitshetty #RanveerSinghXRohitShetty ಎಂದು ಕ್ಯಾಪ್ಷನ್​ ನೀಡಿದ್ದಾರೆ. ಈ ಮಧ್ಯೆ ರೋಹಿತ್ ಶೆಟ್ಟಿ ನಿರ್ದೇಶನದ ಮತ್ತು ರಣವೀರ್ ಸಿಂಗ್, ಪೂಜಾ ಹೆಗ್ಡೆ, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ವರುಣ್ ಶರ್ಮಾ ನಟಿಸಿರುವ ಸರ್ಕಸ್ ಸಿನಿಮಾ ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.

ಓದಿ: ಉಪೇಂದ್ರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಿರ್ದೇಶಕ ಆರ್.ಚಂದ್ರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.