ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರುವ ರಂಗಿನ ರಾಟೆ ಸಿನಿಮಾ ಟ್ರೈಲರ್ ಅನ್ನು ನಟಿ ರಾಗಿಣಿ ದ್ವಿವೇದಿ ಬಿಡುಗಡೆ ಮಾಡಿದರು. ಚಿತ್ರದ ಕೆಲವು ಸನ್ನಿವೇಶಗಳನ್ನು ನೋಡಿದ್ದೇನೆ, ತುಂಬಾ ಚೆನ್ನಾಗಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಅಂತ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಮಾಜಿ ಸಂಸದರಾದ ಶಿವರಾಮೇಗೌಡ ಮಾತನಾಡಿ, ಚಿತ್ರದ ಪ್ರಮುಖ ಪಾತ್ರಧಾರಿ, ನಟ ರಾಜೀವ್ ರಾಥೋಡ್ ನನ್ನ ಅಳಿಯ. ಅವರ ಜೊತೆಗೆ ಮಂಡ್ಯದ ಹುಡುಗರು ಇದರಲ್ಲಿರುವುದು ತಿಳಿದು ಖುಷಿಯಾಯಿತು. ಟ್ರೈಲರ್ ಚೆನ್ನಾಗಿದೆ. ಚಿತ್ರ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಲಿ ಎಂದು ಹಾರೈಸಿದರು.
![Rangina Rate trailer released by actress Ragini Dwivedi](https://etvbharatimages.akamaized.net/etvbharat/prod-images/16524337_news.jpg)
ಏಳು ಪ್ರಮುಖ ಪಾತ್ರಗಳ ಸುತ್ತ ನಡೆಯುವ ಕಥೆಯಿದು. ಕೆಟ್ಟದ್ದನ್ನು ಮಾಡಿದವರು ಇಲ್ಲೇ ಅನುಭವಿಸುತ್ತಾರೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಇಂದು ಟ್ರೈಲರ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಪ್ರೋತ್ಸಾಹಿಸಿ ಎಂದು ನಿರ್ದೇಶಕ ಆರ್ಮುಗಂ ತಿಳಿಸಿದರು.
ಇದೊಂದು ಕಾಡಿನಲ್ಲಿ ನಡೆಯುವ ಕಥೆ. ನನ್ನ ಜೊತೆಗಿರುವವರು ಅನಿವಾರ್ಯ ಕಾರಣದಿಂದ ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಅವರನೆಲ್ಲಾ ಕಷ್ಟದಿಂದ ಪಾರು ಮಾಡುವ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಬಗ್ಗೆ ರಾಜೀವ್ ರಾಥೋಡ್ ವಿವರಿಸಿದರು.
![Rangina Rate trailer released by actress Ragini Dwivedi](https://etvbharatimages.akamaized.net/etvbharat/prod-images/16524337_dfvhe.jpg)
ಇದನ್ನೂ ಓದಿ: ಕಾಂತಾರ ಸಿನಿಮಾ ವೀಕ್ಷಿಸಿದ ಪ್ರಭಾಸ್: ರಿಷಬ್ ಶೆಟ್ಟಿಗೆ ಬಾಹುಬಲಿ ವಿಶ್
ಆರ್ಮುಗಂ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ ಹಾಗೂ ಚಂದ್ರು ಓಬ್ಬಯ್ಯ ಅವರ ಸಂಗೀತ ನಿರ್ದೇಶನವಿದೆ. ರಾಜೀವ್ ರಾಥೋಡ್, ಮುರಳಿ ಮೋಹನ್ (ಸಂತ), ದುನಿಯಾ ರಶ್ಮಿ, ಸಂತೋಷ್ ಮಳವಳ್ಳಿ, ಭವ್ಯ, ರಾಂಕಲ್ ಚಂದ್ರು, ಸ್ವಪ್ನ ಶೆಟ್ಟಿಗಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕಮಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕವಿತಾ ಅರುಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ರಂಗಿನ ರಾಟೆ ಸಿನಿಮಾ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಚಿತ್ರ ತಂಡವಿದೆ.