ETV Bharat / entertainment

'ಶಾಖಾಹಾರಿ' ರಂಗಾಯಣ ರಘು: ಫಸ್ಟ್ ಲುಕ್ ರಿಲೀಸ್​​ - ರಂಗಾಯಣ ರಘು ಫಸ್ಟ್ ಲುಕ್

ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಶಾಖಾಹಾರಿ' ಚಿತ್ರದ ಮೊದಲ ನೋಟ ಇದು.

Rangayana Raghu first look from Shakhahari
ಶಾಖಾಹಾರಿ ಸಿನಿಮಾದ ರಂಗಾಯಣ ರಘು ಫಸ್ಟ್ ಲುಕ್
author img

By ETV Bharat Karnataka Team

Published : Oct 18, 2023, 7:00 PM IST

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ರೀತಿಯ ಛಾಪು ಮೂಡಿಸಿರುವ ನಟ ರಂಗಾಯಣ ರಘು. ಬಹಳ ವರ್ಷಗಳಿಂದ ಚಂದನವನದಲ್ಲಿ ಕಲಾಸೇವೆ ಮಾಡುತ್ತಾ ಬಂದಿದ್ದಾರೆ. ರಂಗಾಯಣ ರಘು ಪ್ರಧಾನ ಪಾತ್ರಧಾರಿಯಾಗಿರುವ ಮುಂದಿನ ಸಿನಿಮಾ 'ಶಾಖಾಹಾರಿ'. ವಿಭಿನ್ನ ಶೀರ್ಷಿಕೆಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಹಿಂದೆ ನಿರ್ದೇಶಕ ಯೋಗರಾಜ್ ಭಟ್ ಟೈಟಲ್ ಪೋಸ್ಟರ್ ಬಿಡುಗಡೆಗೊಳಿಸಿದ್ದರು. ಇದೀಗ ರಂಗಾಯಣ ರಘು ಅವರ ಮೊದಲ ನೋಟ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ.

ಸಂದೀಪ್ ಸುಂಕದ್ 'ಶಾಖಾಹಾರಿ' ಸಿನಿಮಾದ ಸೂತ್ರಧಾರ. ಈಗಾಗಲೇ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅವರಿಗೆ ಇದು ಚೊಚ್ಚಲ ಸಿನಿಮಾ. ಸಹ-ನಿರ್ದೇಶಕನಾಗಿ, ಬರಹಗಾರರಾಗಿ ಅನುಭವ ಪಡೆದಿರುವ ಸಂದೀಪ್ ಸುಂಕದ್, 'ಶಾಖಾಹಾರಿ'ಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಮಲೆನಾಡಿನ ತೀರ್ಥಹಳ್ಳಿಯ ಒಂದು ಪ್ರದೇಶದಲ್ಲಿ ನಡೆಯುವ ಒಂದಷ್ಟು ನಿಗೂಢ ಘಟನೆಗಳ ಸುತ್ತಲಿನ ಕಥೆಯೇ ಈ ಸಿನಿಮಾ. ಹೋಟೆಲ್​ನಲ್ಲಿ ಅಡುಗೆ ಮಾಡುವ ಭಟ್ಟನಾಗಿ ರಂಗಾಯಣ ರಘು ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಇದ್ದಾರೆ. ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ, ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಸೇರಿದಂತೆ ಹಲವರು ಸಿನಿಮಾದ ಭಾಗವಾಗಿದ್ದಾರೆ.

ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ ಜತೆಗೂಡಿ 'ಕೀಳಂಬಿ ಮೀಡಿಯಾ ಲ್ಯಾಬ್' ಸಂಸ್ಥೆ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ಚಿತ್ರಕ್ಕಿದೆ. ಆಶಿಕ್ ಕುಸುಗೊಳ್ಳಿ ಗ್ರೇಡಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಶೂಟಿಂಗ್​​ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗಿವೆ. ಮಲೆನಾಡಿನಲ್ಲೇ ಸಂಪೂರ್ಣ ಚಿತ್ರೀಕರಣವಾಗಿರುವ ಶಾಖಾಹಾರಿ ಸಿನಿಮಾದಲ್ಲಿ ಮಲೆನಾಡಿನ ಅನೇಕರು ಕೆಲಸ ಮಾಡಿದ್ದಾರೆ ಎಂಬುದಿಲ್ಲಿ ವಿಶೇಷ.

ಇದನ್ನೂ ಓದಿ: ಬಿಗ್​ ಬಾಸ್​: ನಾನಾ-ಅವಳಾ! ಸಂಗೀತಾರನ್ನು ಬಿಟ್ಟುಕೊಡ್ತಾರಾ ಕಾರ್ತಿಕ್?

ರಂಗಾಯಣ ರಘು ಅವರ ಮತ್ತೊಂದು ಸಿನಿಮಾ 'ಟಗರು ಪಲ್ಯ'. ಡಾಲಿ ಧನಂಜಯ್​​ ನಿರ್ಮಾಣದ ಈ ಸಿನಿಮಾದಲ್ಲಿ ನಾಗಭೂಷಣ್​​ ಹಾಗೂ ಅಮೃತಾ ಪ್ರೇಮ್​​ ಮುಖ್ಯಭೂಮಿಕೆಯಲ್ಲಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಕ್ಟೋಬರ್​ 27ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಹಾರರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ... 60 ಅಡಿ ಎತ್ತರದ ಕಟೌಟ್ ನಿಲ್ಲಿಸಿ​ 'ಕ್ಯಾಪ್ಚರ್' ಪೋಸ್ಟರ್ ಅನಾವರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.