ಮುಂಬೈ (ಮಹಾರಾಷ್ಟ್ರ): ತೆರೆಗೆ ಬರಲು ಸಜ್ಜಾಗಿರುವ 'ಶಂಶೇರಾ' ಚಿತ್ರದ ಹೊಸ ರಿಲೀಸ್ ಆಗಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ವಾಣಿ ಕಪೂರ್ ಅವರ ರೊಮ್ಯಾಂಟಿಕ್ ಕೆಮಿಸ್ಟ್ರಿಯ ಈ ಹಾಡು ಪ್ರೇಕ್ಷಕರಲ್ಲಿ ಕ್ರೇಜ್ ಹುಟ್ಟಿಸುವಂತೆ ಇದೆ.
- " class="align-text-top noRightClick twitterSection" data="">
'ಫಿತೂರ್' ಶೀರ್ಷಿಕೆಯ ಈ ಹಾಡನ್ನು ಅರಿಜಿತ್ ಸಿಂಗ್ ಮತ್ತು ನೀತಿ ಮೋಹನ್ ಕಂಠದಲ್ಲಿ ಮೂಡಿ ಬಂದಿದೆ. ರಣಬೀರ್ ಕಪೂರ್ ಮತ್ತು ನಟಿ ವಾಣಿ ಕಪೂರ್ ಪ್ರಣಯದ ಕ್ಷಣಗಳು ಹಾಡಿನಲ್ಲಿವೆ. ಈ ಹಾಡಿನ ಬಗ್ಗೆ ಮಾತನಾಡಿರುವ ರಣಬೀರ್, ನನಗೆ 'ಫಿತೂರ್ ಸಾಂಗ್ ತುಂಬಾ ಇಷ್ಟವಾಗಿದೆ. ಪ್ರೇಕ್ಷಕರು ಕೂಡ ಅದನ್ನು ಖಂಡಿತವಾಗಿ ಆನಂದಿಸುತ್ತಾರೆ. ಇದರಲ್ಲಿ ರೊಮ್ಯಾಂಟಿಕ್ ಟ್ರ್ಯಾಕ್ಗಳು ಇವೆ. ಬೆಳ್ಳಿ ಪರದೇ ಮೇಲೆ ಈ ಸಾಂಗ್ ಇನ್ನೂ ಭವ್ಯವಾಗಿ ಕಾಣಲಿದೆ ಎಂದು ಹೇಳಿದ್ದಾರೆ.
- " class="align-text-top noRightClick twitterSection" data="">
ಈ ಚಿತ್ರದಲ್ಲಿ ರಣಬೀರ್ ಕಪೂರ್ ನಾಯಕನಾಗಿ 'ಶಂಶೇರಾ' ಪಾತ್ರವನ್ನು ನಿರ್ವಹಿಸುತ್ತಾರೆ. ಹಿರಿಯ ನಟ ಸಂಜಯ್ ದತ್ ವಿಲನ್ ರೋಲ್ ಮಾಡಿದ್ದಾರೆ. ಇಬ್ಬರೂ ಕೂಡ ಹೊಸ ಮತ್ತು ಭಯಾನಕ ಗೆಟಪ್ನಲ್ಲಿ ತೆರೆ ಕಾಣಿಸಿಕೊಳ್ಳಲಿದ್ದಾರೆ. ಕರಣ್ ಮಲ್ಹೋತ್ರಾ ನಿರ್ದೇಶನದ ಈ ಸಾಹಸಮಯ ಸಿನಿಮಾವನ್ನು ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ. ಜುಲೈ 22ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 'ಶಂಶೇರಾ' ಚಿತ್ರ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಬಾಲಿವುಡ್ಗೆ ರಿಮೇಕ್ ಆಗಲಿದೆಯಂತೆ ರಂಗಿತರಂಗ ಸಿನಿಮಾ: ಹೀರೋ ಆಗ್ತಾರಾ ಅಕ್ಷಯ್ ?