ETV Bharat / entertainment

ವಿವಾಹದ ನಂತರ ರಣಬೀರ್ ಬದಲಾಗಿದ್ದಾನೆ.. ಬದಲಾವಣೆ ಒಳ್ಳೆಯದು: ನೀತು ಕಪೂರ್ - ಆಲಿಯಾ ಭಟ್ ಲೇಟೆಸ್ಟ್​​ ನ್ಯೂಸ್​​

ಆಲಿಯಾ ಭಟ್ ಮದುವೆಯಾದ ನಂತರ ತಮ್ಮ ಮಗ ರಣಬೀರ್ ಕಪೂರ್ ಬದಲಾಗಿದ್ದಾರೆ ಎಂದು ನೀತು ಕಪೂರ್ ಹೇಳಿದ್ದಾರೆ.

neetu kapoor
ಆಲಿಯಾ ಭಟ್, ರಣಬೀರ್ ಕಪೂರ್ ಹಾಗೂ ನೀತು ಕಪೂರ್
author img

By

Published : Jun 18, 2022, 11:57 AM IST

ಹೈದರಾಬಾದ್ (ತೆಲಂಗಾಣ): ಆಲಿಯಾ ಭಟ್ ಜೊತೆಗೆ ಮದುವೆಯಾದ ನಂತರ ತಮ್ಮ ಮಗ ರಣಬೀರ್ ಕಪೂರ್ ಅವರಲ್ಲಿ ಆಗಿರುವ ಬದಲಾವಣೆ ಬಗ್ಗೆ ನಟಿ ನೀತು ಕಪೂರ್ ತೆರೆದಿಟ್ಟಿದ್ದಾರೆ. ತಮ್ಮ ಪತಿ, ಹಿರಿಯ ನಟ ರಿಷಿ ಕಪೂರ್ ಅವರ ನಿಧನದ ನಂತರ ಮತ್ತೆ ಚಿತ್ರರಂಗಕ್ಕೆ ಮರಳುತ್ತಿರುವ ನೀತು, ರಣಬೀರ್ ಮತ್ತು ಆಲಿಯಾ ಅವರ ವಿವಾಹದ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ನೀತು ಕಪೂರ್, ರಣಬೀರ್ ಮತ್ತು ಆಲಿಯಾ ಮದುವೆಯ ಬಗ್ಗೆ ನಾನು ಮತ್ತು ರಿಷಿ ತುಂಬಾ ಉತ್ಸುಕರಾಗಿದ್ದೆವು. ಆದರೆ, ದುರದೃಷ್ಟವಶಾತ್, ತನ್ನ ಮಗನ ಮದುವೆಯನ್ನು ನೋಡಲು ರಿಷಿ ಇರಲಿಲ್ಲ. ಆಲಿಯಾಳನ್ನು ಮದುವೆಯಾದ ನಂತರ ರಣಬೀರ್ ಬದಲಾಗಿದ್ದಾನೆ. ಬದಲಾವಣೆ ಒಳ್ಳೆಯದು. ನನ್ನ ಸೊಸೆ ರಣಬೀರ್‌ಗೆ ಸಾಕಷ್ಟು ಪ್ರೀತಿಯನ್ನು ನೀಡಿದ್ದರಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿದರು.

ನಾನು ಅವನಲ್ಲಿ ಬದಲಾವಣೆಯನ್ನು ಗಮನಿಸಿದ್ದೇನೆ. ಅವರು ಒಟ್ಟಿಗೆ ಚೆನ್ನಾಗಿ ಇರಲಿ. ಆಲಿಯಾ ನಮ್ಮ ಕುಟುಂಬಕ್ಕೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ಅದೃಷ್ಟಶಾಲಿಯಾಗಿದ್ದೇನೆ. ಹಾಗಾಗಿ ಜೀವನವು ನಿಜವಾಗಿಯೂ ಬದಲಾಗಿದೆ ಮತ್ತು ನಾನು ತುಂಬಾ ತೃಪ್ತಿ ಹೊಂದಿದ್ದೇನೆ ಎಂದಿದ್ದಾರೆ.

ನೀತು 'ಜಗ್ ಜಗ್ ಜೀಯೋ' ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಅನಿಲ್ ಕಪೂರ್ ಅವರ ಪತ್ನಿ ಮತ್ತು ವರುಣ್ ಧವನ್ ಅವರ ತಾಯಿಯಾಗಿ ಬಣ್ಣ ಹಚ್ಚಿದ್ದಾರೆ. ರಾಜ್ ಮೆಹ್ತಾ ನಿರ್ದೇಶನದ ಈ ಚಿತ್ರ ಜೂ. 24 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ರಣಬೀರ್​-ಅಲಿಯಾ ಮದುವೆ ಮುನ್ನ 43 ವರ್ಷ ಹಿಂದಿನ ಫೋಟೋ ಹಂಚಿಕೊಂಡ ನೀತು ಕಪೂರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.