ETV Bharat / entertainment

ವೇದಿಕೆಯಲ್ಲೇ ಪ್ಯಾಂಟ್​​ ಮೇಲೆ ಬಿಸಿ ಬಿಸಿ ಕಾಫಿ ಚೆಲ್ಲಿಕೊಂಡ ರಣ್​​ಬೀರ್​ ಕಪೂರ್​: ವಿಡಿಯೋ ವೈರಲ್​ - ರಣ್​​ಬೀರ್​ ಕಪೂರ್ ಲೇಟೆಸ್ಟ್ ನ್ಯೂಸ್

ಕಾರ್ಯಕ್ರಮವೊಂದರ ಸ್ಟೇಜ್​ನಲ್ಲೇ ಬಾಲಿವುಡ್ ನಟ ರಣ್​​ಬೀರ್ ಕಪೂರ್ ಕಾಫಿ ಚೆಲ್ಲಿಕೊಂಡಿದ್ದಾರೆ.

Ranbir Kapoor Spills coffee On His Pant
ಪ್ಯಾಂಟ್​​ ಮೇಲೆ ಕಾಫಿ ಚೆಲ್ಲಿಕೊಂಡ ರಣ್​​ಬೀರ್​ ಕಪೂರ್
author img

By

Published : Apr 29, 2023, 6:00 PM IST

ಬಾಲಿವುಡ್ ಸ್ಟಾರ್ ರಣ್​​ಬೀರ್ ಕಪೂರ್ ಕಾರ್ಯಕ್ರಮವೊಂದರಲ್ಲಿ ಬಿಸಿ ಬಿಸಿ ಕಾಫಿ ಚೆಲ್ಲಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಸ್ಟಾರ್​ ನಟ ಸ್ವತಃ ಕಾಫಿ ಚೆಲ್ಲಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

ಶುಕ್ರವಾರ ಸಂಜೆ ಬ್ರಹ್ಮಾಸ್ತ್ರ ಸ್ಟಾರ್ ರಣ್​ಬೀರ್​ ಕಪೂರ್​​ ತಾಯಿ ಮತ್ತು ಹಿರಿಯ ನಟಿ ನೀತು ಕಪೂರ್ ಅವರೊಂದಿಗೆ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಇದ್ದರು. ವೇದಿಕೆಯಲ್ಲಿ ರಣಬೀರ್ ಕಪೂರ್​​ ಉಪಸ್ಥಿತರಿದ್ದರು. ಕೈಯಲ್ಲಿ ಬಿಸಿ ಕಾಫಿ ಕಪ್ ಹಿಡಿದು ಗಣ್ಯರೊಂದಿಗೆ, ಪ್ರೇಕ್ಷಕರೊಂದಿಗೆ ಸಂವಾದ ನಡೆಸುತ್ತಿದ್ದರು. ಮಾತುಕತೆಯಲ್ಲಿ ತೊಡಗಿರುವಾಗ, ರಣ್​​ಬೀರ್ ಕಪೂರ್ ಒಂದು ಕೈಯಲ್ಲಿದ್ದ ಮೈಕ್​​​​ಅನ್ನು ಕಪ್​ಗೆ ತಾಗಿಸಿದ್ದಾರೆ. ಹೀಗಾಗಿ ಕಪ್​​ ಮೇಲಿನ ನಿಯಂತ್ರಣವನ್ನು ಕಳೆದುಕೊಂಡರು. ಆಗ ಕಾಫಿ ಅವರ ಪ್ಯಾಂಟ್ ಮೇಲೆ ಚೆಲ್ಲಿತು.

ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿರುವ ವಿಡಿಯೋದಲ್ಲಿ, ರಣ್​​ಬೀರ್ ತಮ್ಮ ಪ್ಯಾಂಟ್ ಮೇಲೆ ಬಿಸಿ ಕಾಫಿಯನ್ನು ಚೆಲ್ಲಿಕೊಂಡ ತಕ್ಷಣವೇ ಜಿಗಿಯುವುದನ್ನು ಕಾಣಬಹುದು. ಶೀಘ್ರದಲ್ಲೇ ಸಹಾಯಕ್ಕೆ ಕರೆಯಲಾಯಿತು. ಈವೆಂಟ್​ನಲ್ಲಿ ರಣ್​​​ಬೀರ್ ಸಂಪೂರ್ಣ ಬ್ಲ್ಯಾಕ್​ ಡ್ರೆಸ್​ನಲ್ಲಿ ಕಾಣಿಸಿಕೊಂಡರು. ಸ್ಕಿನ್​ಕೇರ್ ಬುಕ್​ ಒಂದನ್ನು ಪ್ರಚಾರ ಮಾಡಲು ರಣ್​ಬೀರ್​ ಮತ್ತು ನೀತು ಒಟ್ಟಿಗೆ ಬಂದಿದ್ದರು. ರಣ್​​ಬೀರ್ ಸಂಪೂರ್ಣ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರೆ, ನೀತು ಕಪೂರ್​​ ನೇರಳೆ ಬಣ್ಣದ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು.

ಇದನ್ನೂ ಓದಿ: 32 ಕೋಟಿ ರೂ. ಬಾಚಿಕೊಂಡ ಐಶ್ವರ್ಯಾ ರೈ ಸಿನಿಮಾ: 'ಪೊನ್ನಿಯಿನ್ ಸೆಲ್ವನ್ 2'ಕ್ಕೆ ಭಾರಿ ಮೆಚ್ಚುಗೆ

ಯೇ ಜವಾನಿ ಹೈ ದಿವಾನಿ ಚಿತ್ರದ ನಟ ಇದೀಗ ಅವರ ಮುಂಬರುವ ಬಹುನಿರೀಕ್ಷಿತ ಚಲನಚಿತ್ರ 'ಅನಿಮಲ್' ಶೂಟಿಂಗ್​ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಜನವರಿ 1 ರಂದು ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ರಣ್​​ಬೀರ್ ಕಪೂರ್ ಸಿಗರೇಟ್ ಸೇದುತ್ತಾ, ಯಾರನ್ನೋ ದಿಟ್ಟಿಸುತ್ತಿರುವುದನ್ನು ಈ ಪೋಸ್ಟರ್​ನಲ್ಲಿ ಕಾಣಬಹುದು. ರಕ್ತಸಿಕ್ತವಾದ ಕೊಡಲಿ ಹಿಡಿದಿದ್ದು, ಮಾಸ್​ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಪೋಸ್ಟರ್ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕ ಕೂಡ ಬಹಿರಂಗ ಪಡಿಸಿದ್ದಾರೆ. ಇದೇ ಸಾಲಿನ ಆಗಸ್ಟ್ 11ರಂದು ಸಿನಿಮಾ ಬಿಡುಗಡೆ ಆಗಲಿದೆ. 2022ರ ಏಪ್ರಿಲ್​ನಲ್ಲೇ ಚಿತ್ರ ಸೆಟ್ಟೇರಿತ್ತು. ಶೂಟಿಂಗ್​​ ಕೊನೆಯ ಹಂತದಲ್ಲಿದ್ದು, ಶೀಘ್ರವೇ ಪೋಸ್ಟ್ ಪ್ರೊಡಕ್ಷನ್​ ಹಂತ ತಲುಪಲಿದೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ತೃಪ್ತಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ರಣ್​​ಬೀರ್ ಕಪೂರ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜೂ. 1ರಂದು ಕಿಚ್ಚ ಸುದೀಪ್​​ ಸಿನಿಮಾ ಲಾಂಚ್: ಪ್ರಚಾರದ ನಡುವೆಯೇ ಅಭಿಮಾನಿಗಳಿಗೆ ಗುಡ್​ನ್ಯೂಸ್

2022ರ ಏಪ್ರಿಲ್​ನಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ರಣ್​ಬೀರ್​ ಕಪೂರ್​ ಮತ್ತು ಆಲಿಯಾ ಭಟ್ ಕಳೆದ ನವೆಂಬರ್​ನಲ್ಲಿ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಪುತ್ರಿ ಆರೈಕೆಯ ಜೊತೆ ಜೊತೆಗೆ ಸಿನಿಮಾ ಕೆಲಸಗಳನ್ನೂ ಪೂರ್ಣಗೊಳಿಸುತ್ತಿದ್ದಾರೆ ಈ ತಾರಾ ದಂಪತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.