ETV Bharat / entertainment

ಇಂಡಿಯನ್​ ಸೂಪರ್​ ಲೀಗ್​ನಲ್ಲಿ ರಣಬೀರ್​ - ಆಲಿಯಾ: ಫೋಟೋಗಳು ವೈರಲ್​ - ಫುಟ್ಬಾಲ್​ ಪ್ರೇಮದ ಮೂಲಕ ಮಗಳ ಹೆಸರು ಘೋಷಣೆ

ತಾಯ್ತನದ ಕಾಳಜಿ ನಡುವೆಯೇ ಫುಟ್ಬಾಲ್​ ಮ್ಯಾಚ್​ ವೀಕ್ಷಣೆ - ಸಾಮಾಜಿಕ ಜಾಲತಾಣದಲ್ಲಿ ರಾಲಿಯಾ ಸದ್ದು - ರಣಬೀರ್​ ತಂಡಕ್ಕೆ ಗೆಲುವು

ಇಂಡಿಯನ್​ ಸೂಪರ್​ ಲೀಗ್​ನಲ್ಲಿ ರಣಬೀರ್​- ಆಲಿಯಾ; ಫೋಟೋಗಳು ವೈರಲ್​
ranbir-alia-in-indian-super-league-the-photos-went-viral
author img

By

Published : Jan 9, 2023, 4:30 PM IST

ಮುಂಬೈ: ಬಾಲಿವುಡ್​ ಸೂಪರ್​ ಜೋಡಿಗಳಾದ ರಣಬೀರ್​ ಮತ್ತು ಆಲಿಯಾ ಭಟ್​​ ತಮ್ಮ ಪೋಷಕರ ಜವಾಬ್ದಾರಿಯಿಂದ ಕೊಂಚ ವಿರಾಮ ಪಡೆದು ಮುಂಬೈ ನಗರದ ಎಫ್​ಸಿ ಇಂಡಿಯನ್​ ಸೂಪರ್​ ಲೀಗ್​ನಲ್ಲಿ ಕಾಣಿಸಿಕೊಂಡರು. ಮುಂಬೈನಲ್ಲಿ ಕೇರಳಾ ಬ್ಲಾಸ್ಟರ್​​ ವಿರುದ್ಧದ ಪಂದ್ಯವನ್ನು ಎಂಜಾಯ್​ ಮಾಡಿದ ಅವರು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು. ರಣಬೀರ್​​ ಕಪೂರ್​ ಸಹ ಒಡೆತನದ ಮುಂಬೈ ಸಿಟಿ ಎಫ್​ಸಿ ತಂಡಕ್ಕೆ ಪ್ರೋತ್ಸಾಹಿಸಲು ನಟಿ ಆಲಿಯಾ ಗಂಡನೊಂದಿಗೆ ಸಂಪೂರ್ಣ ಪಂದ್ಯ ವೀಕ್ಷಿಸಿದ್ದು, ಇವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇದರಲ್ಲಿ ಒಂದು ಚಿತ್ರದಲ್ಲಿ ನಟ ರಣಬೀರ್​ ಮುದ್ದಿನ ಮಡದಿ ಜೊತೆ ಆಟದ ಕುರಿತು ಚರ್ಚಿಸುತ್ತಿರುವುದು ಕಾಣಬಹುದಾಗಿದೆ. ಬಹುದಿನಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಜೋಡಿ ಕೈ ಕೈ ಹಿಡಿದು ನಿಂತಿರುವ ದೃಶ್ಯಗಳು ವೈರಲ್​ ಆಗಿದೆ. ಅಲ್ಲದೇ, ಇಬ್ಬರು ತಮ್ಮ ಮುಂಬೈ ಸಿಟಿ ಎಫ್​ಸಿ ತಂಡದ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದು, ತಂಡದ ಆಟಗಾರರಿಗೆ ಪರಸ್ಪರ ಭೇಟಿಯಾಗಿ ಶುಭ ಕೋರಿದ್ದಾರೆ.

ಫುಟ್ಬಾಲ್​ ಪ್ರೇಮದ ಮೂಲಕ ಮಗಳ ಹೆಸರು ಘೋಷಣೆ: ಫುಟ್ಬಾಲ್​ ಬಗ್ಗೆ ನಟ ರಣಬೀರ್​​ ಅಪಾರ ಒಲವು ಹೊಂದಿದ್ದಾರೆ. ತಮ್ಮ ಮುದ್ದುಮಗಳಾದ ರಹಾ ಹೆಸರನ್ನು ಕೂಡ ಅವರ ಕ್ರೀಡಾ ಪ್ರೇಮವನ್ನು ಬಿಂಬಿಸುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಸ್ಫೋರ್ಟ್ಸ್​​ ಟೀ ಶರ್ಟ್ ಬಾರ್ಕಾ ಜರ್ಸಿಯ​​ ಮೇಲೆ ರಾಹಾ ಹೆಸರನ್ನು ಬರೆದು ಮಗಳ ಹೆಸರನ್ನು ತಿಳಿಸಲಾಗಿತ್ತು. ಈ ವೇಳೆ ರಾಹಾ ಅಪ್ಪ- ಅಮ್ಮನ ಅಪ್ಪುಗೆಯಲ್ಲಿದ್ದ ಫೋಟೋದಲ್ಲಿರುವುದನ್ನು ಕಾಣಬಹುದಾಗಿದೆ.

ಇದೇ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಎಫ್​ಸಿ ಬರ್ಸೆಲೋನ್​, ರಣಬೀರ್​ - ಆಲಿಯಾಗೆ ಅಭಿನಂದನೆಗಳನ್ನು ತಿಳಿಸಿದ್ದರು. ಅಲ್ಲದೇ, ಹೊಸ ಬಾರ್ಕಾ ಅಭಿಮಾನಿ ಹುಟ್ಟಿದ್ದಾನೆ. ಬರ್ಸೆಲೋನಾದಲ್ಲಿ ನಿನ್ನ ಭೇಟಿಯಾಗಲು ಕಾತುರದಿಂದ ಕಾಯುತ್ತಿರುವುದಾಗಿ ಟ್ವೀಟ್​ ಮೂಲಕ ತಿಳಿಸಿದ್ದರು.

2022ರ ಕಳೆದ ನವೆಂಬರ್​ 6ರಂದು ಆಲಿಯಾ ಮತ್ತು ರಣಬೀರ್​ ಚೊಚ್ಚಲ ಮಗುವಿನ ಪೋಷಕರಾಗಿ ಬಡ್ತಿ ಪಡೆದಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡ ನಟಿ, ನಮ್ಮ ಜೀವನದ ಉತ್ತಮ ಸುದ್ದಿ, ನಮ್ಮ ಮಗಳು ಇಲ್ಲಿದ್ದಾರೆ. ಆಕೆ ಜಾದುಗಾತಿ ಹುಡುಗಿ. ನಾವು ಪ್ರೀತಿಯಿಂದ ಒಡೆದು ಹೋಗಿದ್ದೇವೆ ಎಂದು ಅಭಿಮಾನಿಗಳಿಗೆ ಮಗಳ ಪರಿಚಯ ಮಾಡಿಸಿದ್ದರು. ಕಳೆದ ಏಪ್ರಿಲ್​ 14ರಂದು ಮದುವೆಯಾದ ಈ ಜೋಡಿ ಜೂನ್​ನಲ್ಲಿ ತಾವು ಪೋಷಕರಾಗುತ್ತಿರುವ ಕುರಿತು ತಿಳಿಸಿದ್ದರು.

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜೋಡಿ: ಏತನ್ಮಧ್ಯೆ, ಆಲಿಯಾ ಕರಣ್​ ಜೋಹರ್​ ನಿರ್ದೇಶನ ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿಯಲ್ಲಿ ರಣವೀರ್​​ ಸಿಂಗ್​ಗೆ ಜೊತೆಯಾಗಿ ನಟಿಸಲಿದ್ದಾರೆ. ಧರ್ಮೇಂದ್ರ ಜಯಾ ಬಚ್ಚನ್​ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರೆ. ಇತ್ತ ರಣಬೀರ್​ ಕೂಡ ಭರಪೂರ ಸಿನಿಮಾ ಆಫರ್​ಗಳನ್ನು ಹೊಂದಿದ್ದಾರೆ. ಲವ್​ ರಂಜನ್​ ಅವರ ರೋಮ್ಯಾಂಟಿಕ್​ ಕಾಮಿಡಿ ಫಿಲ್ಮ್​ ತೂ ಜೂಟಿ ಮೇ ಮಕ್ಕರ್​ ಜೊತೆ ಶ್ರದ್ಧಾ ಕಪೂರ್​ ಜೊತೆ ಚಿತ್ರದಲ್ಲಿ ನಟಿಸಲಿದ್ದಾರೆ. ಅಲ್ಲದೇ ರಶ್ಮಿಕಾ ಮಂದಣ್ಣ ಜೊತೆ ಅನಿಮಲ್​ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಶಾಕುಂತಲಂ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.. ವೇದಿಕೆ ಮೇಲೆಯೇ ಕಣ್ಣೀರಿಟ್ಟ ನಟಿ ಸಮಂತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.