ಇತ್ತೀಚೆಗೆ ಬಿಡುಗಡೆಯಾದ ಫ್ಯಾಮಿಲಿ ಆಕ್ಷನ್ ಸೀರಿಸ್ 'ರಾಣಾ ನಾಯ್ಡು' ಟೀಕೆಗಳಿಗೆ ಗುರಿಯಾಗಿದೆ. ಕೌಟುಂಬಿಕ ಚಿತ್ರಗಳ ರೂವಾರಿಯಾಗಿದ್ದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ ಅಭಿನಯದ ಈ ಸೀರಿಸ್ ಅಭಿಮಾನಿಗಳಿಗೆ ಮುಜುಗರ ಉಂಟುಮಾಡಿದೆ. ರಾಣಾ ನಾಯ್ಡು ಸೀರಿಸ್ನಲ್ಲಿ ಬಳಸಲಾದ ಭಾಷೆ ಮತ್ತು ಕೆಲವು ದೃಶ್ಯಗಳು ಅಪಮಾನಕ್ಕೆ ಒಳಗಾಗಿದೆ. ರಾಣಾ ದಗ್ಗುಬಾಟಿ ಮತ್ತು ಅವರ ಚಿಕ್ಕಪ್ಪ ಟಾಲಿವುಡ್ ಹಿರಿಯ ನಟ ವೆಂಕಟೇಶ್ ದಗ್ಗುಬಾಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ ಸೀರಿಸ್ ಇದಾಗಿದ್ದು, ಫ್ಯಾನ್ಸ್ ನಿರೀಕ್ಷೆಯನ್ನು ಹುಸಿ ಮಾಡಿದೆ.
-
Not sure who needs to hear this but please do NOT try to watch Rana Naidu with your family 😰 pic.twitter.com/jR2xzC7wiV
— Netflix India (@NetflixIndia) March 10, 2023 " class="align-text-top noRightClick twitterSection" data="
">Not sure who needs to hear this but please do NOT try to watch Rana Naidu with your family 😰 pic.twitter.com/jR2xzC7wiV
— Netflix India (@NetflixIndia) March 10, 2023Not sure who needs to hear this but please do NOT try to watch Rana Naidu with your family 😰 pic.twitter.com/jR2xzC7wiV
— Netflix India (@NetflixIndia) March 10, 2023
ರಾಣಾ ದಗ್ಗುಬಾಟಿ ಮತ್ತು ವೆಂಕಟೇಶ್ ದಗ್ಗುಬಾಟಿ ಅಭಿನಯದ ರಾಣಾ ನಾಯ್ಡು ವೆಬ್ಸೀರಿಸ್ ಆಕ್ಷನ್ ಮತ್ತು ಕ್ರೈಮ್ ಕಥೆಯನ್ನಾಧಾರಿಸಿದೆ. ಅಮೆರಿಕನ್ ಕ್ರೈಮ್ ಸೀರಿಸ್ ಒಂದನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಕಥೆಯನ್ನು ಹೆಣೆಯಲಾಗಿದೆ. ಸುಪರ್ಣ್ ವರ್ಮ ಮತ್ತು ಕರಣ್ ಅಶುಮನ್ ಅವರು ಈ ಸೀರಿಸ್ ಅನ್ನು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ಅನ್ನು ಮುಖ್ಯವಾಗಿಟ್ಟುಕೊಂಡು ಈ ಕಾಲ್ಪನಿಕ ಕಥೆಯನ್ನು ಚಿತ್ರೀಕರಿಸಲಾಗಿದೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಈ ವೆಬ್ಸಿರೀಸ್ ಮಾರ್ಚ್ 10 ರಂದು ಬಿಡುಗಡೆ ಮಾಡಲಾಗಿದೆ.
-
#RanaNaidu pointless series.😴😴😴
— Dr Deepak Krishnamurthy (@DrDeepakKrishn1) March 12, 2023 " class="align-text-top noRightClick twitterSection" data="
Avoid. pic.twitter.com/PTC09gkLDB
">#RanaNaidu pointless series.😴😴😴
— Dr Deepak Krishnamurthy (@DrDeepakKrishn1) March 12, 2023
Avoid. pic.twitter.com/PTC09gkLDB#RanaNaidu pointless series.😴😴😴
— Dr Deepak Krishnamurthy (@DrDeepakKrishn1) March 12, 2023
Avoid. pic.twitter.com/PTC09gkLDB
ಆದರೆ, ಸೀರಿಸ್ ಟ್ರೇಲರ್ ನೋಡಿದ ಅನೇಕರು ರಾಣಾ ನಾಯ್ಡು ಮೆಚ್ಚಿಕೊಂಡಿದ್ದರು. ಜೊತೆಗೆ ಈ ವೆಬ್ಸೀರಿಸ್ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದಾಗ್ಯೂ, ರಾಣಾ ನಾಯ್ಡು ಸೀರಿಸ್ ಅನ್ನು ಸಿನಿ ಪ್ರೇಕ್ಷಕರು ಸ್ವೀಕರಿಸಿಲ್ಲ. ಫ್ಯಾಮಿಲಿ ಆಕ್ಷನ್ ಸೀರಿಸ್ ಎಂಬುದಾಗಿ ಹೇಳಲಾಗಿತ್ತಾದರೂ, ಅದರ ವಿರುದ್ಧವಾಗಿ ಸೀರಿಸ್ ಅನ್ನು ಚಿತ್ರೀಕರಿಸಲಾಗಿದೆ. ಕೆಳಮಟ್ಟದ ಶಬ್ದ ಮತ್ತು ಪದಗಳನ್ನು ಈ ಸೀರೀಸ್ನಲ್ಲಿ ಬಳಸಲಾಗಿದೆ. ಅಲ್ಲದೇ ಕೆಲವೊಂದು ದೃಶ್ಯಗಳು ಸಿರೀಸ್ನ ಮೇಲಿದ್ದ ನಿರೀಕ್ಷೆಯನ್ನು ಕೆಳಮಟ್ಟಕ್ಕೆ ಕೊಂಡೊಯ್ದಿದೆ ಎಂದು ನೆಟ್ಟಿಗರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: "RRR ಪ್ರತಿ ಭಾರತೀಯನ ಹೆಮ್ಮೆ": ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ಚಿತ್ರತಂಡ ಭಾವುಕ
ಇನ್ನು ಟಾಲಿವುಡ್ ಸೂಪರ್ಸ್ಟಾರ್ ಆಗಿರುವ ವೆಂಕಟೇಶ್ ದಗ್ಗುಬಾಟಿ ಈ ರೀತಿಯ ಸೀರಿಸ್ ಮಾಡುತ್ತಾರೆಂದು ಯಾರೂ ಊಹಿಸಿರಲಿಲ್ಲ. ಅವರು ಕೌಟುಂಬಿಕ ಸಿನಿಮಾಗಳಿಗೆ ಹೆಚ್ಚು ಖ್ಯಾತಿಯನ್ನು ಪಡೆದಿದ್ದರು. ಅನೇಕ ಫ್ಯಾಮಿಲಿ ಒರಿಯೆಂಟೆಡ್ ಹಿಟ್ ಸಿನಿಮಾಗಳನ್ನು ಕೂಡ ಮಾಡಿದ್ದರು. ಆದರೆ ಇದೀಗ ವೆಂಕಟೇಶ್ ಅವರು ಅತ್ಯಂತ ಹೀನಾಯವಾಗಿ ಸೋಲನ್ನು ಕಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ಗಳ ಸುರಿಮಳೆಯನ್ನೇ ಹರಿಸಲಾಗಿದೆ.
-
#RanaNaidu team: don't watch it with family it's an adult show.
— Vamsi🍥 (@Movies4LifeV) March 11, 2023 " class="align-text-top noRightClick twitterSection" data="
Media complaints & articles:
Rana Naidu is a disturbing and disgusting watch for family audiences. pic.twitter.com/CdR5R7KAZI
">#RanaNaidu team: don't watch it with family it's an adult show.
— Vamsi🍥 (@Movies4LifeV) March 11, 2023
Media complaints & articles:
Rana Naidu is a disturbing and disgusting watch for family audiences. pic.twitter.com/CdR5R7KAZI#RanaNaidu team: don't watch it with family it's an adult show.
— Vamsi🍥 (@Movies4LifeV) March 11, 2023
Media complaints & articles:
Rana Naidu is a disturbing and disgusting watch for family audiences. pic.twitter.com/CdR5R7KAZI
ಇದನ್ನೂ ಓದಿ: ಸ್ವರಾ ಮತ್ತು ಫಹಾದ್ ಮದುವೆ ಸಂಭ್ರಮ: ಅದ್ದೂರಿಯಾಗಿ ನಡೆದ ಮೆಹಂದಿ, ಸಂಗೀತ ಕಾರ್ಯಕ್ರಮ
ಅದರಲ್ಲೂ ತೆಲುಗು ಪ್ರೇಕ್ಷಕರಂತು ವೆಂಕಟೇಶ್ ಅವರನ್ನು ರೋಲ್ ಮಾಡೆಲ್ ಎಂದೇ ಪರಿಗಣಿಸಿದ್ದರು. ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ ಮತ್ತು ಕ್ಲೀನ್ ಇಮೇಜ್ ಹೊಂದಿದ್ದ ಫ್ಯಾಮಿಲಿ ಮ್ಯಾನ್ಗೆ 62 ವರ್ಷವಾದರೂ ಸಹ ಎಂದಿಗೂ ಇಂತಹ ಅಶ್ಲೀಲ ಪಾತ್ರಗಳಿಗೆ ಒಪ್ಪಿಕೊಂಡಿದ್ದೇ ಇಲ್ಲ. ಹೀಗಿರುವಾಗ ವೆಂಕಟೇಶ್ ಅವರು ಈ ರೀತಿಯ ಸೀರಿಸ್ನಲ್ಲಿ ನಟಿಸಿರುವುದು ಅಭಿಮಾನಿಗಳನ್ನು ಮುಜುಗರಕ್ಕೀಡು ಮಾಡಿದೆ. ಜೊತೆಗೆ ಫ್ಯಾನ್ಸ್ ರಾಣಾ ನಾಯ್ಡು ಸೀರಿಸ್ ವಿರುದ್ಧ ಧ್ವನಿ ಎತ್ತಿದ್ದಾರೆ.
-
From making leader lanti classics to making ultra shit scrap like rana naidu , where the only movie is to attrack audience by cuss words , 18+ content.! Drastic fall of Rana#RanaNaidu pic.twitter.com/y8uLQeiN9U
— Tonygaaaadu (@tonygaaaadu) March 11, 2023 " class="align-text-top noRightClick twitterSection" data="
">From making leader lanti classics to making ultra shit scrap like rana naidu , where the only movie is to attrack audience by cuss words , 18+ content.! Drastic fall of Rana#RanaNaidu pic.twitter.com/y8uLQeiN9U
— Tonygaaaadu (@tonygaaaadu) March 11, 2023From making leader lanti classics to making ultra shit scrap like rana naidu , where the only movie is to attrack audience by cuss words , 18+ content.! Drastic fall of Rana#RanaNaidu pic.twitter.com/y8uLQeiN9U
— Tonygaaaadu (@tonygaaaadu) March 11, 2023
ಇದನ್ನೂ ಓದಿ: ಆಸ್ಕರ್ ವಿಜೇತ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್