ETV Bharat / entertainment

'ಉತ್ತರಕಾಂಡ'ದಲ್ಲಿ ಡಾಲಿ ಜೊತೆ ಮೋಹಕ ತಾರೆ ರಮ್ಯಾ ರೊಮ್ಯಾನ್ಸ್ - dolly dhananjay

ನಟ ರಾಕ್ಷಸ ಡಾಲಿ ಧನಂಜಯ್​ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ramya with dolly dhananjay in uttarakanda movie
ಡಾಲಿ ಜೊತೆ ಮೋಹಕ ತಾರೆ ರಮ್ಯಾ
author img

By

Published : Nov 4, 2022, 5:34 PM IST

ಬಹು ದಿನಗಳಿಂದ ಚಿತ್ರ ರಂಗದಿಂದ ದೂರ ಉಳಿದಿದ್ದ ನಟಿ ರಮ್ಯಾ ಅವರನ್ನು ಮತ್ತೆ ಸ್ಕ್ರೀನ್​ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಸ್ವಾತಿ ಮುತ್ತಿನ ಮಳೆ ಹನಿ ಮೂಲಕ ನಿರ್ಮಾಪಕಿ ಆಗುವ ಭರವಸೆಯನ್ನು ನೀಡಿದ್ದ ರಮ್ಯಾ ಈಗ ಚಿತ್ರ ತಂಡದಿಂದ ದೂರವಿದ್ದಾರೆ.

ramya with dolly dhananjay in uttarakanda movie
ಡಾಲಿ ಜೊತೆ ಮೋಹಕ ತಾರೆ ರಮ್ಯಾ

ಕಾರಣ ಏನೆಂದು ರಮ್ಯಾ ಆಪ್ತರನ್ನು ಸಂಪರ್ಕಿಸಿದಾಗ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಿಂದ ರಮ್ಯಾ ಹೊರ ಬಂದಿಲ್ಲ, ಈ ಚಿತ್ರದ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಹೊರ ನಡೆದಿದ್ದಾರೆ. ಮಲೆಯಾಳಂ ಸ್ಟಾರ್ ನಟರ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಉತ್ತಮ ಆಫರ್ ಬಂದಿರೋ ಕಾರಣ ಈ ಚಿತ್ರದಿಂದ ರಾಜ್ ಬಿ ಶೆಟ್ಟಿ ಹೊರ ನಡೆದಿದ್ದಾರೆ ಅನ್ನೋದು ರಮ್ಯಾರ ಆಪ್ತರ ಮಾತು.

ಇದೆಲ್ಲದರ ನಡುವೆ ನಟ ರಾಕ್ಷಸ ಡಾಲಿ ಧನಂಜಯ್​ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಹೌದು, ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರದ ಮೂಲಕ ರಮ್ಯಾ ಬಣ್ಣದ ಪ್ರಪಂಚಕ್ಕೆ ಮತ್ತೆ ಕಾಲಿಡಲಿದ್ದಾರೆ ಎನ್ನುವ ಮಾಹಿತಿ ಇದೆ.

ಉತ್ತರಕಾಂಡ ಸಿನಿಮಾ ಪೋಸ್ಟರ್

ಕೆಲ ತಿಂಗಳ ಹಿಂದೆ ಧನಂಜಯ್ ಅವರ ಹೊಯ್ಸಳ ಸಿನಿಮಾದ ಚಿತ್ರೀಕರಣದ ಸ್ಥಳಕ್ಕೆ ರಮ್ಯಾ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದರು. ಇದರ ಜೊತೆಗೆ ಧನಂಜಯ್ ನಟಿಸಿದ್ದ ಹೆಡ್ ಬುಷ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ರಮ್ಯಾ ಗಮನ ಸೆಳೆದಿದ್ದರು. ಈ ಒಡನಾಟದಿಂದ ಈಗ ಧನಂಜಯ್ ಜೊತೆ ರಮ್ಯಾ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: 'ಹೆಡ್ ಬುಷ್' ಬೆನ್ನಲ್ಲೇ ಸೆಟ್ಟೇರುತ್ತಿದೆ ಡಾಲಿ ಧನಂಜಯ್​ ಹೊಸ ಸಿನಿಮಾ

ಅಷ್ಟೇ ಅಲ್ಲ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ ಆದ್ದರಿಂದ ಪಾತ್ರಕ್ಕಾಗಿ ರಮ್ಯಾ ಸಣ್ಣ ಆಗಬೇಕಿದೆ. ಈ ಕಾರಣಕ್ಕೆ ಮೋಹಕ ತಾರೆ ಡಯಟ್ ಹಾಗು ವರ್ಕ್ ಔಟ್ ಶುರು ಮಾಡಿದ್ದಾರೆ. ವಿಜಯ್ ಕಿರಗಂದೂರು ಪ್ರಸ್ತುತ ಪಡಿಸುತ್ತಿರುವ ಚಿತ್ರ ಉತ್ತರಕಾಂಡವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅದ್ಧೂರಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರಕ್ಕೆ ನಟಿ ರಮ್ಯಾ ಸಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.