ETV Bharat / entertainment

ಭಾವನೆಗಳ ಜೊತೆ ಸುಂದರ ಪಯಣವಿದು.. ಭಾವಪೂರ್ಣ ಸಿನಿಮಾದಲ್ಲಿ ನಟ ರಮೇಶ್ ಪಂಡಿತ್ - Ramesh Pandit upcoming movie

Bhavapoorna movie: ಭಾವಪೂರ್ಣ ಶೀರ್ಷಿಕೆಯ ಚಿತ್ರತಂಡ ತಮ್ಮ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದೆ.

Bhavapoorna movie
ಭಾವಪೂರ್ಣ ಸಿನಿಮಾ
author img

By ETV Bharat Karnataka Team

Published : Sep 1, 2023, 1:13 PM IST

ವಿಭಿನ್ನ ಮ್ಯಾನರಿಸಂ ಹಾಗೂ ಉತ್ತಮ ಅಭಿನಯದ ಮೂಲಕ ಕನ್ನಡದ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಛಾಪು‌ ಮೂಡಿಸಿರುವ ನಟ‌ ರಮೇಶ್ ಪಂಡಿತ್. ಇದೀಗ 'ಭಾವಪೂರ್ಣ' ಎಂಬ ಶೀರ್ಷಿಕೆಯುಳ್ಳ ಸಿನಿಮಾದಲ್ಲಿ ರಮೇಶ್ ಪಂಡಿತ್ ನಾಯಕ‌‌ ನಟನಾಗಿ ಅಭಿನಯಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ನಿರ್ದೇಶಕ ಚೇತನ್ ಮುಂಡಾಡಿ ಆ್ಯಕ್ಷನ್​ ಕಟ್​ ಹೇಳಿರುವ ಭಾವಪೂರ್ಣ‌ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿ ಸಿನಿ ಪ್ರೇಮಿಗಳ ಮೆಚ್ಚುಗೆ ಗಳಿಸುತ್ತಿದೆ.

  • " class="align-text-top noRightClick twitterSection" data="">

ನಿರ್ದೇಶಕ ಚೇತನ್ ಮುಂಡಾಡಿ ಮಾತನಾಡಿ, ಭಾವಪೂರ್ಣ ಸಿನಿಮಾ ಮಧ್ಯ ವಯಸ್ಸು ಮೀರಿದ ಓರ್ವ ಮುಗ್ಧನ ಭಾವ ತೀರ ಯಾನ. ಸಾವಿನಾಚೆಗೂ ತಾನು ಈ ಭೂಮಿ ಮೇಲೆ ಬದುಕಿದ್ದೆ ಅನ್ನೋ ಕುರುಹನ್ನು ಬಿಟ್ಟು ಹೋಗುವ ಪ್ರಯತ್ನ ಎಂದು ಕೊಂಡು ಪ್ರತಿ ಹೆಜ್ಜೆಯಲ್ಲೂ ಪಡುವ ಬವಣೆ, ಆಗುವ ಒದ್ದಾಟ, ಅವಘಡ ಮತ್ತು ಮನತಟ್ಟುವ ಮುಗ್ಧ ತಮಾಷೆಗಳು. ಇನ್ನೋರ್ವ ಯುವಕನದ್ದು, ಕನಸುಗಳಿಗೆ ಬಣ್ಣ ಹಚ್ಚಿ ಬದುಕನ್ನು ಬಲೂನ್​ನಂತೆ ಹಾರಿ ಬಿಡುವೆ ಎನ್ನುವ ಹುಮ್ಮಸ್ಸಿನ ಪ್ರೀತಿಯ ಪಯಣ. ತನಗೆ ಬೇಕಾದಂತೆ ತನ್ನ ಬದುಕು ರೂಪಿಸಿಕೊಳ್ಳಬಹುದು ಎನ್ನುವ ಕಿಚ್ಚಿನಿಂದ ಹೊರಟವನು. ಇವರು ತಾವು ಅಂದುಕೊಂಡಿದ್ದನ್ನು ಸಾಧ್ಯವಾಗಿಸುವರೇ? ಎನ್ನುವ ಕಥೆಯನ್ನೊಳಗೊಂಡಿರುವುದೇ " ಭಾವಪೂರ್ಣ " ಎಂದು ತಿಳಿಸಿದರು.

ಇನ್ನು ನಿರ್ಮಾಪಕ ಪ್ರಶಾಂತ್ ಆಂಜನಪ್ಪ ಮಾತನಾಡಿ, ನನಗೆ ಸುಮಾರು ವರ್ಷಗಳಿಂದ ಚಿತ್ರರಂಗದವರೊಂದಿಗೆ ಒಡನಾಟವಿದೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಚೇತನ್ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಎಲ್ಲ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ‌. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ದುಬೈನ​ ಬುರ್ಜ್​ ಖಲೀಫಾದಲ್ಲಿ ಜವಾನ್​ ಟ್ರೇಲರ್​ ಅನಾವರಣ: 'ನನ್ನ ಬೋಳುತಲೆ ನೋಟ ಇದೇ ಮೊದಲು ಮತ್ತು ಕೊನೆ' ಎಂದ ಶಾರುಖ್​​

ಭಾವಪೂರ್ಣ ಚಿತ್ರದಲ್ಲಿ ರಮೇಶ್ ಪಂಡಿತ್ ಅಲ್ಲದೇ ಶೈಲಶ್ರೀ ಧರ್ಮೇಂದ್ರ ಅರಸ್, ಅಥರ್ವ ಪ್ರಕಾಶ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರಸನ್ನ ಅವರ ಛಾಯಾಗ್ರಾಹಣವಿದ್ದು, ಅಕ್ಷಯ್ ಈ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಡಿ ಕೀರ್ತಿರಾಜ್ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತಿದ್ದರೆ. ಸದ್ಯ ಟ್ರೇಲರ್​ನಿಂದ‌ ಗಮನ ಸೆಳೆಯುತ್ತಿರೋ ಭಾವಪೂರ್ಣ ಚಿತ್ರ ಶೀರ್ಘದಲ್ಲೇ ತೆರೆಗೆ ಬರಲಿದೆ. ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್​ ಆಧಾರಿತ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಪ್ರೇಕ್ಷಕರನ್ನು ರಂಜಿಸುವಲ್ಲಿ ಹಲವು ಸಿನಿಮಾಗಳು ಯಶಸ್ಸು ಕಂಡಿವೆ. ಸುಂದರ ಶೀರ್ಷಿಕೆಯುಳ್ಳ ಈ ಸಿನಿಮಾ ಮೇಲೆ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದು, ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎನ್ನೋವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 'ಪ್ರೀತಿ ಮಾಡೋದು ತಪ್ಪಲ್ಲ' ಎಂಬ ಸಂದೇಶ ಹೊತ್ತು ಬರುತ್ತಿದೆ 'ಒಲವೇ ಮಂದಾರ 2' ಸಿನಿಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.