ETV Bharat / entertainment

'ರಾಮನ'ವಮಿಯಂದು 'ಅವತಾರ' ಎತ್ತಿದ ರಿಷಿ.. - ಈಟಿವಿ ಭಾರತ ಕನ್ನಡ

'ರಾಮನ ಅವತಾರ' ಸಿನಿಮಾದ ಮೊದಲ ನೋಟವನ್ನು ನಟ ರಿಷಿ ಹಂಚಿಕೊಂಡಿದ್ದಾರೆ.

movie
ರಾಮನ ಅವತಾರ
author img

By

Published : Mar 30, 2023, 3:53 PM IST

ಆಪರೇಷನ್ ಅಲಮೇಲಮ್ಮ, ಕವಲು ದಾರಿಯಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ರಿಷಿ ಇದೀಗ ರಾಮನ ಅವತಾರ ತಾಳಿದ್ದಾರೆ. ಹೌದು, ರಾಮ ನವಮಿ ಪ್ರಯುಕ್ತ ಹೊಸ ಚಿತ್ರದ ಮೊದಲ ನೋಟವನ್ನು ನಟ ಹಂಚಿಕೊಂಡಿದ್ದಾರೆ. ಥೇಟ್ ರಾಮನ ವೇಷ ಧರಿಸಿರುವ ರಿಷಿ ಮತ್ತೊಂದು ಪ್ರಯೋಗಾತ್ಮಕ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಅವರ ಮುಂದಿನ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ.

ಅಲ್ಲದೇ ಸದ್ಯದಲ್ಲೇ ಕೆಣಕು ನೋಟ (ಟೀಸರ್) ಬಿಡುಗಡೆ ಮಾಡುವ ಬಗ್ಗೆಯೂ ತಿಳಿಸಿದ್ದಾರೆ. ನಟ ಟ್ವಟರ್​ನಲ್ಲಿ "ಶ್ರೀರಾಮನ ಬೋಧನೆಗಳು ಮತ್ತು ಮೌಲ್ಯಗಳು ನಮ್ಮನ್ನು ತಲೆಮಾರುಗಳಿಂದ ಪ್ರಭಾವಿತಗೊಳಿಸಿವೆ ಹಾಗು ಸ್ಫೂರ್ತಿ ನೀಡಿವೆ. ಅವರ ಪರಂಪರೆಗೆ ಗೌರವ ಸಲ್ಲಿಸಲು ನಾವು ಹೆಮ್ಮೆ ಪಡುತ್ತೇವೆ. ಶೀಘ್ರದಲ್ಲೇ ಚಿತ್ರದ ಟೀಸರ್ ನಿಮ್ಮ ಮುಂದೆ ಬರಲಿದೆ. ಎಲ್ಲರಿಗೂ ಶ್ರೀ ರಾಮ ನವಮಿ ಹಬ್ಬದ ಶುಭಾಶಯಗಳು" ಎಂದು ಹಬ್ಬದ ಶುಭಾಶಯದ ಜೊತೆಗೆ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಇದನ್ನೂ ಓದಿ: IPL 2023: ನಾಳೆಯಿಂದ ಐಪಿಎಲ್‌ ಹಬ್ಬ; ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ, ತಮನ್ನಾ ನೃತ್ಯ ಝಲಕ್!

ಪುರಾಣ ರಾಮನಿಗೆ ಸೀತೆ ಮಾತ್ರ ನಾಯಕಿ. ಆದರೆ, ರಿಷಿಯ ರಾಮನ ಅವತಾರಕ್ಕೆ ಇಬ್ಬರು ನಾಯಕಿಯರಿದ್ದಾರೆ. ವಜ್ರಕಾಯ ಸಿನಿಮಾ ಖ್ಯಾತಿಯ ಶುಭ್ರ ಅಯ್ಯಪ್ಪ ಹಾಗೂ ಬಟ್ಟಲು ಕಣ್ಣಿನ ಚೆಲುವೆ ಪ್ರಣಿತ ಸುಭಾಷ್. ಅರುಣ್ ಸಾಗರ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರವಾಗಿರಲಿದ್ದಾರೆ. ಜೂಡೊ ಸ್ಯಾಂಡಿ ಅವರ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ. ಉಡುಪಿ, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್​ ನಡೆಸಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಜೂನ್​ ಮೊದಲ ವಾರ ಸಿನಿಮಾ ತೆರೆ ಕಾಣಲು ಚಿತ್ರತಂಡ ಯೋಜಿಸಿದೆ.

ಇದನ್ನೂ ಓದಿ: ಪೊನ್ನಿಯನ್​ ಸೆಲ್ವಂ-2 ಸಿನಿಮಾ ಟ್ರೇಲರ್​ ರಿಲೀಸ್​: ರಾಣಿಯರಾಗಿ ಮಿಂಚಿದ ಐಶ್ವರ್ಯಾ ರೈ, ತ್ರಿಶಾ

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ನಿರ್ದೇಶಕ ಪಂಚ್ ಡೈಲಾಗಳ ಸಿನಿಮಾ ಮಾಡುವ ಸುನಿ ಅವರ ಬಳಗದಲ್ಲಿ ಬರಹಗಾರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ವಿಕಾಸ್ ಪಂಪಾಪತಿ ತಮ್ಮ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಾಟಿ ಫ್ಯಾಕ್ಟರಿ ಎಂಬ ಯುಟ್ಯೂಬ್ ಚಾನಲ್ ನಲ್ಲಿ ವಿಭಿನ್ನ ಕಂಟೆಂಟ್ ಗಳ ಮೂಲಕ ವಿಕಾಸ್ ಸಣ್ಣ ಪರದೆಯಲ್ಲಿ ತಮ್ಮ ಅನುಭವವನ್ನು ಹೊಂದಿದ್ದು, ಈಗ ದೊಡ್ಡ ಪರದೆಯಲ್ಲಿ ಪ್ರಯೋಗಕ್ಕಿಳಿದಿದ್ದಾರೆ. ರೊಮ್ಯಾಂಟಿಕ್​ ಕಾಮಿಡಿ ಸಿನಿಮಾ ಇದಾಗಿದೆ.

ಧಾರಾವಾಹಿಯಲ್ಲಿ ಮೊದಲಿಗೆ ಬಣ್ಣ ಹಚ್ಚಿದ ನಟ ರಿಷಿ ಅದಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಇವರು ನಟಿಸಿರುವ ಆಪರೇಷನ್​ ಅಲಮೇಲಮ್ಮ ಸೂಪರ್​ ಹಿಟ್​ ಆಯಿತು. ಇವರ ಆ್ಯಕ್ಟಿಂಗ್​ ಅನ್ನು ಕನ್ನಡಿಗರು ಮೆಚ್ಚಿಕೊಂಡರು. ಬಳಿಕ ಕವಲು ದಾರಿ ಸಿನಿಮಾದಲ್ಲೂ ನಟಿಸಿದರು. ಇದು ಅವರಿಗೆ ಅವಕಾಶಗಳ ಬಾಗಿಲನ್ನು ತೆರೆಸಿತು. ಇದೀಗ ರಿಷಿ ರಾಮನ ಅವತಾರ ಎತ್ತಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ: ರವಿತೇಜ ಅಭಿನಯದ 'ಟೈಗರ್​​ ನಾಗೇಶ್ವರ ರಾವ್​' ಬಿಡುಗಡೆಗೆ ಮುಹೂರ್ತ ಫಿಕ್ಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.