ETV Bharat / entertainment

37 ವರ್ಷಗಳ ಬಳಿಕ B.Tech​ ಪದವಿ ಪ್ರಮಾಣ ಪತ್ರ ಪಡೆದ ರಾಮ್‌ಗೋಪಾಲ್ ವರ್ಮಾ

ರಾಮ್ ಗೋಪಾಲ್ ವರ್ಮಾ ಅವರು 37 ವರ್ಷಗಳ ಬಳಿಕ ತಮ್ಮ ಬಿ.ಟೆಕ್​ ಪದವಿ ಪ್ರಮಾಣ ಪತ್ರ ಪಡೆದಿದ್ದಾರೆ.

RGV  B tech degree
ಆರ್​ಜಿವಿ ಬಿ.ಟೆಕ್​ ಪದವಿ ಪ್ರಮಾಣ ಪತ್ರ
author img

By

Published : Mar 16, 2023, 2:17 PM IST

Updated : Mar 16, 2023, 2:55 PM IST

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಆಂಧ್ರಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ (B Tech) ಮುಗಿಸಿದ 37 ವರ್ಷಗಳ ನಂತರ ತಮ್ಮ ಎಂಜಿನಿಯರಿಂಗ್ ಪದವಿ ಪ್ರಮಾಣ ಪತ್ರ ಪಡೆದರು. ಆರ್​ಜಿವಿ ಎಂದೇ ಜನಪ್ರಿಯವಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಪದವಿ ಪ್ರಮಾಣಪತ್ರದ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಅಸಂಖ್ಯಾತ ಅಭಿಮಾನಿಗಳೊಂದಿಗೆ ಪದವಿ ಪಡೆದ ಹರ್ಷ ವ್ಯಕ್ತಪಡಿಸಿದರು.

  • Super thrilled to receive my B tech degree today 37 years after I passed , which I never took it in 1985 since I wasn’t interested in practicing civil engineering..Thank you #AcharyaNagarjunaUniversity 😘😘😘Mmmmmmuuaahh 😍😍😍 pic.twitter.com/qcmkZ9cWWb

    — Ram Gopal Varma (@RGVzoomin) March 15, 2023 " class="align-text-top noRightClick twitterSection" data=" ">

37 ವರ್ಷಗಳ ನಂತರ ಬಿ.ಟೆಕ್ ಪದವಿ ಪ್ರಮಾಣಪತ್ರ ಪಡೆದಿರುವುದಕ್ಕೆ ಸಂತಸಗೊಂಡಿದ್ದೇನೆ. ವಿಶ್ವವಿದ್ಯಾನಿಲಯಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ವರ್ಮಾ ಟ್ವಿಟ್ ಮೂಲಕ ತಿಳಿಸಿದ್ದಾರೆ. ಟ್ವಿಟರ್ ಖಾತೆಯಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಂದಿಗಿನ ಕೆಲವು ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.

ಆರ್​ಜಿವಿ ಟ್ವೀಟ್: "ನಾನು ಉತ್ತೀರ್ಣನಾದ 37 ವರ್ಷಗಳ ನಂತರ ಇಂದು ನನ್ನ ಬಿ.ಟೆಕ್ ಪದವಿ ಪ್ರಮಾಣ ಪತ್ರ ಸ್ವೀಕರಿಸುತ್ತಿರುವುದಕ್ಕೆ ತುಂಬಾ ಥ್ರಿಲ್ ಆಗಿದ್ದೇನೆ. 1985ರಲ್ಲಿ ಸಿವಿಲ್ ಇಂಜಿನಿಯರಿಂಗ್ ಅಭ್ಯಾಸ ಮಾಡಲು ಆಸಕ್ತಿ ಇಲ್ಲದ ಕಾರಣ ಬಿ.ಟೆಕ್ ಪದವಿ ಪ್ರಮಾಣಪತ್ರವನ್ನು ಎಂದಿಗೂ ತೆಗೆದುಕೊಳ್ಳಲಿಲ್ಲ" ಎಂದು ಹೇಳಿದ್ದಾರೆ. ವರ್ಮಾ 1985ರ ಜುಲೈನಲ್ಲಿ ಬಿ.ಟೆಕ್ (ಸಿವಿಲ್ ಇಂಜಿನಿಯರಿಂಗ್) ಪರೀಕ್ಷೆಯಲ್ಲಿ ಎರಡನೇ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು.

ನೆಟ್ಟಿಗರ ಪ್ರತಿಕ್ರಿಯೆ...: ಆರ್​ಜಿವಿ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, "ಅದ್ಭುತ, ನಾವು ಸಿವಿಲ್ ಎಂಜಿನಿಯರ್‌ಗಳು ಪ್ರಮಾಣಪತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಜಗತ್ತನ್ನು ನಿರ್ಮಿಸುತ್ತೇವೆ" ಎಂದು ಹೇಳಿದ್ದಾರೆ. ಆದರೆ ನಾನು ವಿದ್ಯಾಭ್ಯಾಸ ಪೂರ್ಣಗೊಂಡ ಕೂಡಲೇ ನನ್ನ ಸಿವಿಲ್ ಎಂಜಿನಿಯರ್‌ ಪ್ರಮಾಣ ಪತ್ರವನ್ನು ಸಂಗ್ರಹಿಸಿದೆ ಎಂದು ಕೂಡ ಬರೆದಿದ್ದಾರೆ.

ಇದನ್ನೂ ಓದಿ: ಶಿವಾಜಿ ಸುರತ್ಕಲ್ 2 ಚಿತ್ರದ 'ಟ್ವಿಂಕಲ್ ಟ್ವಿಂಕಲ್' ಹಾಡು ಬಿಡುಗಡೆ

"ಸಿವಿಲ್ ಇಂಜಿನಿಯರಿಂಗ್! ನಿಮ್ಮ ಹಿಂದಿನ ಕೆಲವು ಚಲನಚಿತ್ರಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಬಳಸಿರುವ ಕಾರಣ ಇದು" ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ಪೋಸ್ಟ್​​ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ತರಹೇವಾರಿ ಕಾಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾಳೆ 4,000 ಥಿಯೇಟರ್‌ಗಳಲ್ಲಿ 'ಕಬ್ಜ' ಬಿಡುಗಡೆ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪ್ಪಿ ಟೀಂ

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತೆಲುಗು ಚಿತ್ರರಂಗದಲ್ಲಿ 1989ರಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ತಮ್ಮ ಚೊಚ್ಚಲ ಚಿತ್ರ 'ಶಿವ' ಮೂಲಕ ಚಿತ್ರರಂಗದಲ್ಲಿ ಗಮನಾರ್ಹ ಪ್ರಭಾವ ಬೀರಿದರು. ಹಿಂದಿ ಚಿತ್ರರಂಗದಲ್ಲಿ ಅವರ ಮೊದಲ ದೊಡ್ಡ ಹಿಟ್ ಚಿತ್ರ ರಂಗೀಲಾ. ನಟ ಅಮೀರ್ ಖಾನ್ ಮತ್ತು ನಟಿ ಊರ್ಮಿಳಾ ಮಾತೋಂಡ್ಕರ್ ನಟಿಸಿದ ಸೂಪರ್​ ಹಿಟ್ ಸಿನಿಮಾ ಇದು. ಸತ್ಯ, ಸರ್ಕಾರ್, ಸರ್ಕಾರ್ ರಾಜ್, ಕಂಪನಿ, ರಂಗೀಲಾ, ನಿಶಬ್ದ್, ಆಗ್, ಡಿಪಾರ್ಟ್ಮೆಂಟ್, ನಾಚ್ ಸೇರಿದಂತೆ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಚಿತ್ರೀಕರಣದ ವೇಳೆ ದಿವ್ಯಾ ಖೋಸ್ಲಾ ಕುಮಾರ್​​ಗೆ ತೀವ್ರ ಗಾಯ, ಇನ್​ಸ್ಟಾಗ್ರಾಂ ಫೋಟೊ ಹಂಚಿಕೊಂಡ ನಟಿ

Last Updated : Mar 16, 2023, 2:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.