ETV Bharat / entertainment

ರಾಮ್​ ಚರಣ್​​ ಮುಡಿಗೇರಿದ 'ಗೋಲ್ಡನ್ ಬಾಲಿವುಡ್ ನಟ' ಪ್ರಶಸ್ತಿ - Golden Bollywood Actor

Ram Charan won Golden Bollywood Actor Award: 'ಆರ್​ಆರ್​ಆರ್' ಸಿನಿಮಾ​ ಜನಪ್ರಿಯತೆಯ ನಟ ರಾಮ್​ ಚರಣ್​ ಗೋಲ್ಡನ್ ಬಾಲಿವುಡ್ ನಟ ಪ್ರಶಸ್ತಿ ಗೆದ್ದಿದ್ದಾರೆ.

Ram charan won Golden Bollywood Actor Award
ರಾಮ್​ ಚರಣ್​​ ಮುಡಿಗೇರಿದ ಗೋಲ್ಡನ್ ಬಾಲಿವುಡ್ ನಟ ಪ್ರಶಸ್ತಿ
author img

By ETV Bharat Karnataka Team

Published : Dec 10, 2023, 10:13 AM IST

ದಕ್ಷಿಣ ಭಾರತದ ಹೆಸರಾಂತ ನಟ​ ರಾಮ್ ಚರಣ್ 'ಪಾಪ್ ಗೋಲ್ಡನ್ ಅವಾರ್ಡ್ಸ್​​ 2023'ರಲ್ಲಿ ಗೋಲ್ಡನ್ ಬಾಲಿವುಡ್ ನಟ ಪ್ರಶಸ್ತಿ ಪಡೆದರು. ಇವರ ಜೊತೆಗೆ ಬಾಲಿವುಡ್ ನಟರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರಾಶಿ ಖನ್ನಾ, ಅದಾ ಶರ್ಮಾ ಮತ್ತು ರಿದ್ಧಿ ಡೋಗ್ರಾ ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಆದರೆ ಈ ಸೂಪರ್​ ಸ್ಟಾರ್​ಗಳನ್ನು ಹಿಂದಿಕ್ಕಿ ಮೆಗಾ ಪವರ್‌ ಸ್ಟಾರ್ ರಾಮ್​ಚರಣ್​​​ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಪಾಪ್ ಗೋಲ್ಡನ್ ಪ್ರಶಸ್ತಿಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡಲಾಗುತ್ತದೆ. ಪ್ರತಿ ವರ್ಷ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಮೆರಿಕದಲ್ಲಿ ನಡೆಸಲಾಗುತ್ತದೆ. ಸಂಘಟಕರು ಈ ಪ್ರಶಸ್ತಿಗಳನ್ನು ನೀಡುವ ಮೂಲಕ ಭಾರತೀಯ ನಟರನ್ನು ಪ್ರೋತ್ಸಾಹಿಸುತ್ತಿದ್ದಾರೆ. 2023ನೇ ಸಾಲಿನ ಪ್ರಶಸ್ತಿಯನ್ನು ರಾಮ್​​ ಚರಣ್‌ ಅವರಿಗೆ ನೀಡಲಾಗಿದೆ. 'ಆರ್‌ಆರ್‌ಆರ್' ಚಿತ್ರದ ಮೂಲಕ ರಾಮ್​​ ಚರಣ್​ ಗ್ಲೋಬಲ್ ಸ್ಟಾರ್ ಆಗಿ ಜನಮನ್ನಣೆ ಗಳಿಸಿದ್ದಾರೆ.

ನೆಟ್‌ಫ್ಲಿಕ್ಸ್ ಸಿಇಒ-ರಾಮ್ ಚರಣ್ ಭೇಟಿ: ಒಟಿಟಿ ಪ್ಲಾಟ್‌ಫಾರ್ಮ್ ಕಂಪನಿ ನೆಟ್‌ಫ್ಲಿಕ್ಸ್‌ ಸಿಇಒ ಟೆಡ್ ಸರಂಡೋಸ್ ಹೈದರಾಬಾದ್​​ಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಗುರುವಾರ ಅವರು ರಾಮ್ ಚರಣ್ ನಿವಾಸಕ್ಕೆ ಭೇಟಿ ನೀಡಿದ್ದರು. ಟೆಡ್ ಸರಂಡೋಸ್, ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ, ಸಾಯಿಧರಮ್ ತೇಜ್, ವೈಷ್ಣವ್ ತೇಜ್ ಮತ್ತು ರಾಮಚರಣ್ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಾಮ್​ ಚರಣ್, ಚಿರಂಜೀವಿ ಮಾತ್ರವಲ್ಲದೇ ಜೂನಿಯರ್​ ಎನ್​ಟಿಆರ್​, ಮಹೇಶ್​ ಬಾಬು ಸೇರಿದಂತೆ ಹಲವರನ್ನು ಅವರು ಭೇಟಿಯಾಗಿದ್ದಾರೆ. ​​'ಗುಂಟೂರು ಕಾರಂ'ನಲ್ಲಿ ಬ್ಯುಸಿಯಾಗಿರುವ ಮಹೇಶ್​ ಬಾಬು ನೆಟ್‌ಫ್ಲಿಕ್ಸ್ ಸಿಇಒ ಜೊತೆಗಿನ ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಬಹುನಿರೀಕ್ಷಿತ 'ಗುಂಟೂರು ಖಾರಂ'ನ ಮತ್ತೊಂದು ಸಾಂಗ್​ ಯಾವಾಗ ರಿಲೀಸ್​ ಗೊತ್ತಾ?

ರಾಮ್ ಚರಣ್ ಮುಂದಿನ ಸಿನಿಮಾ: 'ಆರ್​ಆರ್​ಆರ್'​ ಬಳಿಕ ರಾಮ್ ಚರಣ್ ಸದ್ಯ 'ಗೇಮ್ ಚೇಂಜರ್' ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ನಿರ್ದೇಶನದ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಖ್ಯಾತ ನಿರ್ಮಾಪಕ ದಿಲ್ ರಾಜು ಚಿತ್ರ ನಿರ್ಮಿಸುತ್ತಿದ್ದಾರೆ. ಆರ್​ಆರ್​ಆರ್​ ಸ್ಟಾರ್​ಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಕಾರಣಾಂತರಗಳಿಂದ ಶೂಟಿಂಗ್ ಮುಂದೂಡಿಕೆಯಾಗುತ್ತಿದೆ.

ಇದನ್ನೂ ಓದಿ: ಚಿರಂಜೀವಿ, ರಾಮ್​ಚರಣ್​ ಬಳಿಕ ನೆಟ್‌ಫ್ಲಿಕ್ಸ್‌ ಸಿಇಒ ಭೇಟಿಯಾದ ಮಹೇಶ್ ಬಾಬು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.