ETV Bharat / entertainment

ಮದುವೆಯಾಗಿ 10 ವರ್ಷಗಳ ಬಳಿಕ ಗರ್ಭಧಾರಣೆ: ಕಾರಣ ಬಹಿರಂಗಪಡಿಸಿದ ರಾಮ್​ ಚರಣ್ ಪತ್ನಿ - upasana pregnant

ಮದುವೆಯಾಗಿ 10 ವರ್ಷಗಳ ಬಳಿಕ ಗರ್ಭಿಣಿಯಾಗಿರುವುದರ ಬಗ್ಗೆ ರಾಮ್​ ಚರಣ್ ಪತ್ನಿ ಉಪಾಸನಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ram charan wife upasana late pregnancy
ರಾಮ್​ ಚರಣ್ ಪತ್ನಿ ಉಪಾಸನಾ ಗರ್ಭಿಣಿ
author img

By

Published : Apr 4, 2023, 4:12 PM IST

ಸೌತ್​ನ ಮೆಗಾ ದಂಪತಿ ರಾಮ್ ಚರಣ್ ಮತ್ತು ಉಪಾಸನಾ ಶೀಘ್ರದಲ್ಲೇ ಪೋಷಕರಾಗಿ ಭಡ್ತಿ ಪಡೆಯಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಉಪಾಸನಾ ತಮ್ಮ ಗರ್ಭಾವಸ್ಥೆಯ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮದುವೆಯಾದ ಹತ್ತು ವರ್ಷಗಳ ನಂತರ ಗರ್ಭಿಣಿಯಾಗಲು ಕಾರಣವನ್ನೂ ಬಹಿರಂಗಪಡಿಸಿದ್ದಾರೆ. ತಡವಾಗಿ ಗರ್ಭ ಧರಿಸಿದ್ದರ ಹಿನ್ನೆಲೆ ಸಮಾಜದಿಂದ ಎಂತಹ ಒತ್ತಡವನ್ನು ಎದುರಿಸಿದ್ದರು ಎಂಬುದನ್ನೂ ವಿವರಿಸಿದ್ದಾರೆ. ಜೊತೆಗೆ ಸದ್ಯ ಗರ್ಭಿಣಿಯಾಗಲು ಎಷ್ಟು ಹೆಮ್ಮೆ ಅನಿಸುತ್ತಿದೆ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.

ನಾನು ತಾಯಿಯಾಗಬೇಕೆಂದು ಬಯಸಿದ ಕ್ಷಣ ಗರ್ಭಿಣಿಯಾಗಿರುವುದು ಬಹಳ ರೋಮಾಂಚನ ಮತ್ತು ಹೆಮ್ಮೆಯ ವಿಷಯ, ಅದೇ ಸಮಾಜ ಬಯಸಿದಾಗ ಗರ್ಭಿಣಿ ಆಗಿದ್ದರೆ ಈ ಸಂತಸ ಸಿಗುತ್ತಿರಲಿಲ್ಲ. ಮದುವೆಯಾಗಿ 10 ವರ್ಷಗಳ ನಂತರ ನಾವು ಮಕ್ಕಳನ್ನು ಹೊಂದಲು ಬಯಸಿದ್ದೇವೆ. ಏಕೆಂದರೆ ಇದು ಸೂಕ್ತ ಸಮಯ. ನಾವಿಬ್ಬರೂ ನಮ್ಮ ಕ್ಷೇತ್ರಗಳಲ್ಲಿ ಬೆಳೆದಿದ್ದೇವೆ. ಆರ್ಥಿಕವಾಗಿ ಸಬಲರಾಗಿದ್ದೇವೆ. ನಮ್ಮ ಮಕ್ಕಳಿಗೆ ಏನು ಬೇಕೋ ಅದೆಲ್ಲವನ್ನೂ ಕೊಡುವ ಮಟ್ಟಕ್ಕೆ ತಲುಪಿದ್ದೇವೆ. ಇದು ನಮ್ಮ ಆಯ್ಕೆ ಎಂದು ಉಪಾಸನಾ ತಿಳಿಸಿದ್ದಾರೆ.

ಸಮಾಜ, ಕುಟುಂಬ, ಬಂಧುಗಳ ಒತ್ತಡಕ್ಕೆ ಮಣಿದಿಲ್ಲ. ಇದು ನಮ್ಮ ನಡುವಿನ ಬಲವಾದ ಬಾಂಧವ್ಯ ಮತ್ತು ಮಕ್ಕಳನ್ನು ಯಾವ ಸಮಯಕ್ಕೆ ಹೊಂದಬೇಕು ಎಂಬುದರ ಬಗ್ಗೆ ಇರುವ ಸ್ಪಷ್ಟತೆಗೆ ಸಾಕ್ಷಿಯಾಗಿದೆ ಎಂದು ಉಪಾಸನಾ ತಿಳಿಸಿದರು. ಕಳೆದ ಡಿಸೆಂಬರ್ 12 ರಂದು ರಾಮಚರಣ್-ಉಪಾಸನಾ ಪೋಷಕರಾಗಲಿದ್ದಾರೆ ಎಂದು ಎರಡೂ ಕುಟುಂಬಗಳು ಘೋಷಿಸಿವೆ. ಉಪಾಸನಾ ಅವರ ಡೆಲಿವರಿ ಭಾರತದಲ್ಲೇ ನಡೆಯಲಿದೆ ಎಂದು ಉಪಾಸನಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸದ್ಯ ಅವರು ಆರೂವರೆ ತಿಂಗಳ ಗರ್ಭಿಣಿ.

ಮತ್ತೊಂದೆಡೆ, ಉಪಾಸನಾ ಅವರು ಇತ್ತೀಚೆಗೆ ತಾನು ಬಾಡಿ ಶೇಮಿಂಗ್ ಎದುರಿಸಿದ್ದೇನೆ ಎಂಬುದನ್ನೂ ಬಹಿರಂಗಪಡಿಸಿದರು. "ಬಾಲ್ಯದಿಂದಲೂ ಎಲ್ಲರೂ ನನ್ನನ್ನು ಒಂದಲ್ಲ ಒಂದು ರೀತಿಯಲ್ಲಿ ಜಡ್ಜ್ ಮಾಡುತ್ತಿದ್ದರು. ಸಮಾಜದಲ್ಲಿ ಪ್ರತಿಯೊಬ್ಬರೂ ಇಂತಹ ವಿಷಯಗಳನ್ನು ಎದುರಿಸಿದ್ದಾರೆ. ಹಲವು ವಿಷಯಗಳಲ್ಲಿ ನಾವು ಟೀಕೆಗಳನ್ನು ಎದುರಿಸುತ್ತೇವೆ. ಮದುವೆಯಾದ ಸಂದರ್ಭದಲ್ಲೂ ನಾನು ಬಾಡಿ ಶೇಮಿಂಗ್ ಅನ್ನು ಎದುರಿಸಿದ್ದೇನೆ. ಸುಂದರವಾಗಿರಲಿಲ್ಲ, ನಾನು ತುಂಬಾ ದಪ್ಪಗಿದ್ದೆ, ಹಣಕ್ಕಾಗಿ ರಾಮ್​​ ಚರಣ್ ನನ್ನನ್ನು ಮದುವೆಯಾದರು ಎಂದೆಲ್ಲಾ ಟೀಕೆಗಳನ್ನು ಮಾಡಿದವರನ್ನು ನಾನು ದೂಷಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದರು.

ಇದನ್ನೂ ಓದಿ: 'ಆ ಹುಡುಗಿಯಾದರೂ ಸಂತೋಷವಾಗಿರಲಿ': ನಾಗ ಚೈತನ್ಯ - ಶೋಭಿತಾ ಡೇಟಿಂಗ್​ ವದಂತಿಗೆ ಸಮಂತಾ ಪ್ರತಿಕ್ರಿಯೆ

ಅವರಿಗೆ (ಟೀಕಾಕಾರರಿಗೆ) ನನ್ನ ಬಗ್ಗೆ ಏನೂ ತಿಳಿದಿರಲಿಕ್ಕಿಲ್ಲ. ಅದಕ್ಕೆ ಅವರು ಹಾಗೆ ಹೇಳಿರಬಹುದು. ಕಳೆದ ಹತ್ತು ವರ್ಷಗಳಲ್ಲಿ (ರಾಮ್​ಚರಣ್​ ಅವರೊಂದಿಗೆ ಮದುವೆಯಾದ ಬಳಿಕ) ಅವರು ನನ್ನನ್ನು ತಿಳಿದಿರಬಹುದು. ಹಾಗಾಗಿ ನನ್ನ ಬಗ್ಗೆ ಅವರ ಅಭಿಪ್ರಾಯವೂ ಈಗ ಬದಲಾಗಿದೆ. ಎಲ್ಲವೂ ನಾವು ಟೀಕೆಗಳನ್ನು ತೆಗೆದುಕೊಳ್ಳುವ ವಿಧಾನದಲ್ಲಿದೆ. ಟ್ರೋಲ್‌ಗಳು ಬಂದಿವೆ ಎಂದು ನನ್ನ ಆತ್ಮವಿಶ್ವಾಸ ಕಡಿಮೆ ಆಗಿಲ್ಲ, ನಾನು ಅವರನ್ನು ಗೆದ್ದಿದ್ದೇನೆ, ಈಗ ನನ್ನ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಇಂದು ನಾನು ಚಾಂಪಿಯನ್‌ನಂತೆ ಭಾವಿಸುತ್ತೇನೆ. ಏಕೆಂದರೆ ನಾನು ಆ ಟೀಕೆಗಳನ್ನು ಹೇಗೆ ಎದುರಿಸಿದೆ ಎನ್ನುವುದು ನನಗೆ ಮಾತ್ರ ತಿಳಿದಿದೆ. ತಾನು ಧೈರ್ಯಶಾಲಿಯಾಗಿದ್ದೇನೆ ಎಂಬುದನ್ನು ಸಹ ಉಪಾಸನಾ ವಿವರಿಸಿದರು.

ಇದನ್ನೂ ಓದಿ: 'ಪ್ರೀತಿಯಲ್ಲಿ ಬೀಳಬೇಡಿ, ಬೆಳೆಯಿರಿ': ರಾಮ್ ಚರಣ್ - ಉಪಾಸನಾ ಪ್ರೇಮಕಥೆಯಿದು

ತಮ್ಮ ಪ್ರೇಮಕಥೆಯ ಆರಂಭಿಕ ದಿನಗಳ ಬಗ್ಗೆಯೂ ಉಪಾಸನಾ ಮಾತನಾಡಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. "ನೀವು ಪ್ರೀತಿಯಲ್ಲಿ ಬೀಳಲು ಸಾಧ್ಯವಿಲ್ಲ, ಪ್ರೀತಿಯಲ್ಲಿ ಬೆಳೆಯಬೇಕು ಎಂದು ರಾಮ್ ಚರಣ್​​ ಹೇಳುತ್ತಾರೆ. ಮೊದಲು ಒಂದು ಡೈಲಾಗ್​ ಎಂದು ಭಾವಿಸಿದೆ. ನಂತರದ ದಿನಗಳಲ್ಲಿ ಅದು ಅರ್ಥವಾಗಲು ಪ್ರಾರಂಭಿಸಿತು. ಪ್ರತಿದಿನ ನೀವು ನಿಮ್ಮ ಸಂಗಾತಿಯ ಬಗ್ಗೆ ಏನನ್ನಾದರೂ ತಿಳಿಯುತ್ತೀರಿ ಮತ್ತು ನೀವು ಅವರೊಂದಿಗೆ ಬೆಳೆಯಲು ಪ್ರಾರಂಭಿಸುತ್ತೀರಿ'' ಎಂದು ಉಪಾಸನಾ ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.