ETV Bharat / entertainment

Adipurush: ರಣ್​ಬೀರ್ ಕಪೂರ್ ಬೆನ್ನಲ್ಲೇ ಮಕ್ಕಳಿಗಾಗಿ 10 ಸಾವಿರ ಟಿಕೆಟ್ ಖರೀದಿಸಿದ ​ರಾಮ್ ಚರಣ್ - ಆದಿಪುರುಷ್ ಸಿನಿಮಾ

ರಾಮ್ ಚರಣ್ ಹಿಂದುಳಿದ ಮಕ್ಕಳು ಮತ್ತು ಅಭಿಮಾನಿಗಳಿಗೆ 10,000 ಟಿಕೆಟ್‌ಗಳನ್ನು ವಿತರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

adipurush
ಆದಿಪುರುಷ್
author img

By

Published : Jun 10, 2023, 3:05 PM IST

ದಕ್ಷಿಣದ ಸೂಪರ್​ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್​ ಬಹುಬೇಡಿಕೆ ನಟಿ ಕೃತಿ ಸನೋನ್ ಅಭಿನಯದ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ಇನ್ನೈದು ದಿನಗಳು ಮಾತ್ರ ಬಾಕಿ ಉಳಿದಿವೆ. ಅಭಿಮಾನಿಗಳಲ್ಲಿ ಸಿನಿಮಾ ನೋಡುವ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಈ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಶಿಖರದಷ್ಟಿದೆ. ಸೆಲೆಬ್ರಿಟಿಗಳು ಸಹ ಓಂ ರಾವುತ್ ನಿರ್ದೇಶನದ ಪೌರಾಣಿಕ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ತೆಲಂಗಾಣದ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಸೇರಿದ ಸುಮಾರು 10,000ಕ್ಕೂ ಹೆಚ್ಚು ಮಂದಿಗೆ ಉಚಿತ ಟಿಕೆಟ್​ ವಿತರಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಬಾಲಿವುಡ್​ ಬಹುಬೇಡಿಕೆ ನಟ ರಣ್​ಬೀರ್ ಕಪೂರ್ ಬಡ ಮಕ್ಕಳಿಗೆ ಆದಿಪುರುಷ್​​ ಚಿತ್ರದ 10,000 ಟಿಕೆಟ್‌ಗಳನ್ನು ಕೊಡಿಸುವ ಕೆಲಸ ಮಾಡಿದ್ದಾರೆ ಎಂಬ ವರದಿಗಳು ಸದ್ದು ಮಾಡಿವೆ. ಇದರ ಬೆನ್ನಲ್ಲೇ ಆರ್​ಆರ್​ಆರ್​ ಸ್ಟಾರ್ ರಾಮ್ ಚರಣ್ ಅವರು ಸಹ ಹಿಂದುಳಿದ ಮಕ್ಕಳು ಮತ್ತು ಅಭಿಮಾನಿಗಳಿಗೆ 10,000 ಟಿಕೆಟ್‌ಗಳನ್ನು ವಿತರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಾರದ ಆರಂಭದಲ್ಲಿ, ಬ್ರಹ್ಮಾಸ್ತ್ರ ನಟ ರಣ್​​ಬೀರ್ ಕಪೂರ್​ 10,000 ಆದಿಪುರುಷ್​ ಟಿಕೆಟ್‌ಗಳನ್ನು ಖರೀದಿಸಲು ಸಿದ್ಧರಿದ್ದಾರೆ ಎಂಬ ವರದಿಗಳು ಹರಿದಾಡಿದವು. ಆದಾಗ್ಯೂ, ಅದರ ಬಗ್ಗೆ ನಟ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದರ ಬೆನ್ನಲ್ಲೇ ಸೌತ್​ ಸೂಪರ್​ ಸ್ಟಾರ್ ರಾಮ್ ಚರಣ್ ಹಿಂದುಳಿದ ಮಕ್ಕಳಿಗಾಗಿ 10,000 ಟಿಕೆಟ್‌ಗಳನ್ನು ವಿತರಿಸುತ್ತಿದ್ದಾರೆ ಎಂಬ ವಿಷಯ ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿದೆ. ಆದರೆ ಈ ನಟನ ತಂಡದಿಂದಲೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇತ್ತೀಚೆಗಷ್ಟೇ ದಿ ಕಾಶ್ಮೀರ್ ಫೈಲ್ಸ್‌ನ ಸಹ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು 10,000ಕ್ಕೂ ಹೆಚ್ಚು ಆದಿಪುರುಷ್​​ ಟಿಕೆಟ್‌ಗಳನ್ನು ಖರೀದಿಸುವುದಾಗಿ ಘೋಷಿಸಿದರು. ತೆಲಂಗಾಣದಾದ್ಯಂತ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಲ್ಲಿ ಆದಿಪುರುಷ್​ ಟಿಕೆಟ್‌ಗಳನ್ನು ವಿತರಿಸುವುದಾಗಿ ಅಗರ್ವಾಲ್ ತಮ್ಮ ಟ್ವೀಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: 'The Trial' ಸೀರಿಸ್​ನಲ್ಲಿ ಕಾಜೋಲ್​: ಪ್ರಚಾರಕ್ಕಾಗಿ 'ಸೋಷಿಯಲ್​ ಮೀಡಿಯಾದಿಂದ ಬ್ರೇಕ್​' ಗಿಮಿಕ್​​

ಇನ್ನೂ ತಿರುಪತಿಯಲ್ಲಿ ನಡೆದ ಆದಿಪುರುಷ್ ಈವೆಂಟ್‌ನಲ್ಲಿ, ಹನುಮಾನ್ ಗೌರವಾರ್ಥವಾಗಿ ಚಿತ್ರ ಪ್ರದರ್ಶನಗೊಳ್ಳುವ ಪ್ರತೀ ಥಿಯೇಟರ್‌ನಲ್ಲಿ ಒಂದು ಆಸನವನ್ನು ಕಾಯ್ದಿರಿಸುವಂತೆ ಓಂ ರಾವುತ್ ಅವರು ಚಿತ್ರದ ನಿರ್ಮಾಪಕರನ್ನು ವಿನಂತಿಸಿದರು. ರಾಮಾಯಣದ ವಿಚಾರ ಬಂದಾಗ ಭಗವಾನ್ ಹನುಮಂತನು ಅಲ್ಲಿ ಇರುತ್ತಾನೆ ಎಂಬ ವಿಚಾರದ ಮೇಲೆ ರಾವುತ್ ನಂಬಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: Adipurush: ಪ್ರಭಾಸ್​ ನಟನೆಯ 'ಆದಿಪುರುಷ್​' ಬಿಡುಗಡೆ ಜವಾಬ್ದಾರಿ ಹೊತ್ತ ಕನ್ನಡದ ಕೆಆರ್​​​ಜಿ ಸಂಸ್ಥೆ

ಆದಿಪುರುಷ್​ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಜೂನ್ 16ರಂದು ಬಿಡುಗಡೆ ಆಗಲಿದೆ. ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ದೇವದತ್ತ ಸಹ ನಟಿಸಿದ್ದಾರೆ. ಪೌರಾಣಿಕ ಕಥೆಯಾಧರಿಸಿದ ಸಿನಿಮಾ ರಾಷ್ಟ್ರವ್ಯಾಪಿ 6,200ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ ಆವೃತ್ತಿಯು 4,000ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನವಾಗುವ ನಿರೀಕ್ಷೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.