95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರತಿಷ್ಟಿತ ಪ್ರಶಸ್ತಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿಶ್ವದ ಚಿತ್ರರಂಗ ಬಹಳ ಉತ್ಸುಕವಾಗಿದೆ.
ಮೀಟ್ ಆ್ಯಂಡ್ ಗ್ರೀಟ್ ಈವೆಂಟ್ನಲ್ಲಿ ರಾಮ್ಚರಣ್: ನಟ ರಾಮ್ ಚರಣ್ ಲಾಸ್ ಏಂಜಲೀಸ್‌ನಲ್ಲಿ ಮೀಟ್ ಆ್ಯಂಡ್ ಗ್ರೀಟ್ ಈವೆಂಟ್ನಲ್ಲಿ ಭಾಗವಹಿಸಿ ಅಭಿಮಾನಿಗಳೊಂದಿಗೆ ಸಮಯ ಕಳೆದರು. ಜನಸಾಮಾನ್ಯರು, ಅಭಿಮಾನಿಗಳು, ಹಿತೈಷಿಗಳೊಂದಿಗೆ 2 ಗಂಟೆಗೂ ಹೆಚ್ಚು ಸಮಯ ಕಾಲ ಕಳೆದರು. ಅವರೊಂದಿಗೆ ಮನಬಿಚ್ಚಿ ಮಾತನಾಡಿದರು ಎಂದು ವರದಿಯಾಗಿದೆ.
-
#GlobalStarRamCharan speaks about his fans love towards him and overwhelming response @AlwaysRamCharan ❤️#ManOfMassesRamCharan#RamcharanAtOscars #RamCharan𓃵 #RamCharan 🦁👑 pic.twitter.com/uv3ZOGlSkJ
— SivaCherry (@sivacherry9) March 12, 2023 " class="align-text-top noRightClick twitterSection" data="
">#GlobalStarRamCharan speaks about his fans love towards him and overwhelming response @AlwaysRamCharan ❤️#ManOfMassesRamCharan#RamcharanAtOscars #RamCharan𓃵 #RamCharan 🦁👑 pic.twitter.com/uv3ZOGlSkJ
— SivaCherry (@sivacherry9) March 12, 2023#GlobalStarRamCharan speaks about his fans love towards him and overwhelming response @AlwaysRamCharan ❤️#ManOfMassesRamCharan#RamcharanAtOscars #RamCharan𓃵 #RamCharan 🦁👑 pic.twitter.com/uv3ZOGlSkJ
— SivaCherry (@sivacherry9) March 12, 2023
ಆರ್‌ಆರ್‌ಆರ್ ಪ್ರಚಾರದಲ್ಲಿ ರಾಮ್ಚರಣ್: ಆರ್‌ಆರ್‌ಆರ್ ಖ್ಯಾತಿಯ ನಟ ರಾಮ್ಚರಣ್ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಲು ಸದ್ಯ ಯುಎಸ್‌ನಲ್ಲಿದ್ದಾರೆ. ಆರ್‌ಆರ್‌ಆರ್‌ನ ನಾಟು ನಾಟು ಹಾಡು 'ಅತ್ಯುತ್ತಮ ಮೂಲ ಗೀತೆ' ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಈ ಹಿನ್ನೆಲೆ ಅಲ್ಲಿನ ಹಲವು ಟಿವಿ ಸಂದರ್ಶನಗಳಲ್ಲಿ ಭಾಗಿಯಾಗಿ ಚಿತ್ರದ ಪ್ರಚಾರ ಮಾಡಿರುವ ನಟ ರಾಮ್ಚರಣ್, ಮೀಟ್ ಆ್ಯಂಡ್ ಗ್ರೀಟ್ ಈವೆಂಟ್ನಲ್ಲೂ ಭಾಗಿಯಾದರು.
ಅಮೆರಿಕ ಅಭಿಮಾನಿಗಳೊಂದಿಗೆ ರಾಮ್ಚರಣ್: ವೈಟ್ ಶರ್ಟ್, ಗ್ರೀನ್ ಪ್ಯಾಂಟ್, ವೈಟ್ ಶೂ, ಬ್ಲ್ಯಾಕ್ ಫ್ರೇಮ್ನ ಗ್ಲ್ಯಾಸ್ ಧರಿಸಿ ಕ್ಯಾಶುಯಲ್ ಆಗಿ ಕಾಣಿಸಿಕೊಂಡರು. ಜಾಗತಿಕ ತಾರೆ ತಮ್ಮ ಅಮೆರಿಕ ಅಭಿಮಾನಿಗಳೊಂದಿಗೆ ಸಮಯ ಕಳೆದರು ಮತ್ತು ಅವರೊಂದಿಗೆ ತೆಲುಗು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾಡಿದರು.
-
"నేను ఇక్కడ కూర్చొని మాట్లాడడం కాదు. I Want to Give My Time to You & Meet You All Personally. I Will Come to Your Tables" ❤️#GlobalStar @AlwaysRamCharan garu’s Love towards his fans 🙏🏻👍
— SivaCherry (@sivacherry9) March 12, 2023 " class="align-text-top noRightClick twitterSection" data="
Charan garu spent two and half hours with Fans & mark a life time spl moments to them ❤️ pic.twitter.com/DHFq3B5XD6
">"నేను ఇక్కడ కూర్చొని మాట్లాడడం కాదు. I Want to Give My Time to You & Meet You All Personally. I Will Come to Your Tables" ❤️#GlobalStar @AlwaysRamCharan garu’s Love towards his fans 🙏🏻👍
— SivaCherry (@sivacherry9) March 12, 2023
Charan garu spent two and half hours with Fans & mark a life time spl moments to them ❤️ pic.twitter.com/DHFq3B5XD6"నేను ఇక్కడ కూర్చొని మాట్లాడడం కాదు. I Want to Give My Time to You & Meet You All Personally. I Will Come to Your Tables" ❤️#GlobalStar @AlwaysRamCharan garu’s Love towards his fans 🙏🏻👍
— SivaCherry (@sivacherry9) March 12, 2023
Charan garu spent two and half hours with Fans & mark a life time spl moments to them ❤️ pic.twitter.com/DHFq3B5XD6
ನಾಟು ನಾಟು ಹಾಡು ಅಕಾಡೆಮಿ ಪ್ರಶಸ್ತಿಗೆ ನಾಮಿನೇಟ್ ಅದ ನಂತರ ಆಗಾಗ್ಗೆ ಯುಎಸ್‌ಗೆ ಭೇಟಿ ಕೊಟ್ಟರು. ಆರ್‌ಆರ್‌ಆರ್ ಪ್ರಚಾರಕ್ಕಾಗಿ ಅಲ್ಲಿನ ಸ್ಥಳೀಯ ಮಾಧ್ಯಮಗಳೊಂದಿಗೆ ಸಂವಹನ ನಡೆಸಿದರು ಮತ್ತು ವಿವಿಧ ಟಾಕ್ ಶೋಗಳಲ್ಲಿ ಕಾಣಿಸಿಕೊಂಡರು. ಕೆಲವೇ ಕ್ಷಣಗಳಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಆಸ್ಕರ್ ಗೆಲ್ಲುವ ವಿಶ್ವಾಸದಲ್ಲಿ ಭಾರತ: ಆಸ್ಕರ್ ನಾಮನಿರ್ದೇಶನಗಳ ಪಟ್ಟಿಯಲ್ಲಿ ಮೂರು ಭಾರತೀಯ ಚಲನಚಿತ್ರಗಳ ಹೆಸರುಗಳು ಇವೆ. ನಾಮಿನೇಶನ್ ಪಟ್ಟಿ ಬಿಡುಗಡೆ ಆದಾಗಿನಿಂದ ಭಾರತ ತೋರಿದ ವಿಶ್ವಾಸ ಅವರ್ಣನೀಯ. ಪ್ರತಿಷ್ಟಿತ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿ ದೇಶವಿದ್ದು, ಸಾಕಷ್ಟು ಸಕಾರಾತ್ಮಕ ನಿರೀಕ್ಷೆಗಳು ಹುಟ್ಟಿಕೊಂಡಿವೆ. ನಾಮನಿರ್ದೇಶನಗೊಂಡ ಮೂರು ಚಿತ್ರಗಳಿಗೆ ಸಂಬಂಧಿಸಿದ ನಟರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಸಿನಿ ಗಣ್ಯರು ಸಮಾರಂಭಕ್ಕೆ ಸಜ್ಜಾಗುತ್ತಿದ್ದಾರೆ.
-
It was a festival for the fans in LA!🥳🥳
— SivaCherry (@sivacherry9) March 12, 2023 " class="align-text-top noRightClick twitterSection" data="
The meet & greet of Global Star @AlwaysRamCharan with the fans in Los Angeles couldn't have been any more amazing! 🤩#RamCharan #GlobalStarRamCharan#RRRForOscars #NaatuNaatu #NaatuNaatuForOscars #ManOfMassesBdayMonth #RamCharan pic.twitter.com/hXdSG7tAJ1
">It was a festival for the fans in LA!🥳🥳
— SivaCherry (@sivacherry9) March 12, 2023
The meet & greet of Global Star @AlwaysRamCharan with the fans in Los Angeles couldn't have been any more amazing! 🤩#RamCharan #GlobalStarRamCharan#RRRForOscars #NaatuNaatu #NaatuNaatuForOscars #ManOfMassesBdayMonth #RamCharan pic.twitter.com/hXdSG7tAJ1It was a festival for the fans in LA!🥳🥳
— SivaCherry (@sivacherry9) March 12, 2023
The meet & greet of Global Star @AlwaysRamCharan with the fans in Los Angeles couldn't have been any more amazing! 🤩#RamCharan #GlobalStarRamCharan#RRRForOscars #NaatuNaatu #NaatuNaatuForOscars #ManOfMassesBdayMonth #RamCharan pic.twitter.com/hXdSG7tAJ1
ಇದನ್ನೂ ಓದಿ: ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಕ್ಷಣಗಣನೆ: ಆಸ್ಕರ್ ವೇದಿಕೆ ಏರಲಿದ್ದಾರೆ ಭಾರತೀಯರು
ನಾಮನಿರ್ದೇಶನಗಳ ಪಟ್ಟಿ: ಪ್ರತಿಷ್ಠಿತ ಪ್ರಶಸ್ತಿಗೆ ಭಾರತದಿಂದ ಮೂರು ಚಿತ್ರಗಳು ನಾಮಿನೇಟ್ ಆಗಿವೆ. ನಮ್ಮ ದೇಶದಿಂದ 4 ಚಿತ್ರಗಳು ಆಯ್ಕೆ ಆಗಬಹುದೆಂದು ನಿರೀಕ್ಷೆ ಹೊಂದಲಾಗಿತ್ತು. ಆದ್ರೆ 300 ಚಿತ್ರಗಳ ನಡುವಿನ ಹೋರಾಟದಲ್ಲಿ ಅಂತಿಮವಾಗಿ 3 ಚಿತ್ರಗಳು ನಾಮಿನೇಟ್ ಆಗಿದೆ. ಎಸ್‌ಎಸ್ ರಾಜಮೌಳಿ ಅವರ ಸೂಪರ್ ಹಿಟ್ ಸಿನಿಮಾ, ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ ಚಿತ್ರ 'ಆರ್‌ಆರ್‌ಆರ್', 'ಆಲ್ ದಟ್ ಬ್ರೀಥ್ಸ್', 'ದಿ ಎಲಿಫೆಂಟ್ ವಿಸ್ಪರ್ಸ್' ನಾಮ ನಿರ್ದೇಶನಗೊಂಡಿದೆ. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ಮತ್ತು ಕಿರುಚಿತ್ರ, ಸಾಕ್ಷ್ಯಚಿತ್ರ ವಿಭಾಗದಲ್ಲಿ , 'ಆಲ್ ದಟ್ ಬ್ರೀಥ್ಸ್', 'ದಿ ಎಲಿಫೆಂಟ್ ವಿಸ್ಪರ್ಸ್' ನಾಮಿನೇಟ್ ಆಗಿದೆ.
ಇದನ್ನೂ ಓದಿ: 'ನಾಟು ನಾಟು' ಸಂಗೀತ ಸಂಯೋಜಕ ಎಂಎಂ ಕೀರವಾಣಿ ಕುರಿತ ಆಸಕ್ತಿದಾಯಕ ವಿಚಾರಗಳು ಗೊತ್ತಾ?