ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಕಳೆದ ಮಾರ್ಚ್ನಲ್ಲಿ ಬಿಡುಗಡೆ ಕಂಡು ವಿಶ್ವಾದ್ಯಂತ ಧೂಳೆಬ್ಬಿಸಿದೆ. ಚಿತ್ರ ಬಿಡುಗಡೆ ಆಗಿ 11 ತಿಂಗಳುಗಳಾಗಿದ್ದರೂ ಅದರ ಕ್ರೇಜ್ ಕಡಿಮೆ ಆಗಿಲ್ಲ. ಚಿತ್ರದ ನಾಟು ನಾಟು ಹಾಡು ಈಗಲೂ ಎಲ್ಲರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಇದೇ ನಾಟು ನಾಟು ಹಾಡು ಆಸ್ಕರ್ ಅಂಗಳದಲ್ಲಿದ್ದು, ಸೂಪರ್ ಸ್ಟಾರ್ ರಾಮ್ ಚರಣ್ ಅಮೆರಿಕಕ್ಕೆ ತಲುಪಿದ್ದಾರೆ. ಖ್ಯಾತ ಟಿವಿ ಕಾರ್ಯಕ್ರಮ ಆದ 'ಗುಡ್ ಮಾರ್ನಿಂಗ್ ಅಮೆರಿಕ ಶೋ'ನಲ್ಲಿ ಭಾಗವಹಿಸಿದ್ದಾರೆ. ಶೋನಲ್ಲಿ ತೆಲುಗು ನಟ ರಾಮ್ ಚರಣ್ ನಿರೂಪಕರೊಂದಿಗೆ ತಮ್ಮ ಕುಟುಂಬ ಮತ್ತು ಚಿತ್ರದ ಬಗ್ಗೆ ಮಾತನಾಡಿದ್ದಾರೆ.
-
"RRR" star Ram Charan (@AlwaysRamCharan) dishes on "Naatu, Naatu" becoming the first song from an Indian film production to be Oscar-nominated for best original song. #GMA3 pic.twitter.com/tpfIPFqcDu
— GMA3: What You Need To Know (@ABCGMA3) February 22, 2023 " class="align-text-top noRightClick twitterSection" data="
">"RRR" star Ram Charan (@AlwaysRamCharan) dishes on "Naatu, Naatu" becoming the first song from an Indian film production to be Oscar-nominated for best original song. #GMA3 pic.twitter.com/tpfIPFqcDu
— GMA3: What You Need To Know (@ABCGMA3) February 22, 2023"RRR" star Ram Charan (@AlwaysRamCharan) dishes on "Naatu, Naatu" becoming the first song from an Indian film production to be Oscar-nominated for best original song. #GMA3 pic.twitter.com/tpfIPFqcDu
— GMA3: What You Need To Know (@ABCGMA3) February 22, 2023
ಆರ್‌ಆರ್‌ಆರ್ ಸಿನಿಮಾ ಸ್ನೇಹ ಮತ್ತು ಸಹೋದರತ್ವವನ್ನು ತೋರಿಸುತ್ತದೆ ಎಂದು ಶೋನಲ್ಲಿ ರಾಮ್ ಚರಣ್ ಹೇಳಿದರು. ಚಿತ್ರದ ನಿರ್ದೇಶಕ ರಾಜಮೌಳಿ ಅವರ ಬರವಣಿಗೆಯನ್ನು ಶ್ಲಾಘಿಸಿದರು. ಜೊತೆಗೆ ಅವರನ್ನು ಭಾರತದ ಸ್ಟೀವನ್ ಸ್ಪೀಲ್ಬರ್ಗ್ ( ವಿಶ್ವ ಖ್ಯಾತ ಹಾಲಿವುಡ್ ನಿರ್ದೇಶಕ) ಎಂದು ಕೂಡ ಕರೆದರು. ಇನ್ನೂ ರಾಮ್ ಚರಣ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಕಾರ್ಯಕ್ರಮದ ನಿರೂಪಕರು ಅಭಿನಂದನೆ ಸಲ್ಲಿಸಿದ್ದಾರೆ. 'ಗುಡ್ ಮಾರ್ನಿಂಗ್ ಅಮೆರಿಕ ಶೋ'ನಲ್ಲಿ ಕೆಲ ಕಾಲ ತಮಾಷೆ ಮಾಡುವ ಮೂಲಕ ರಂಜಿಸಿದ್ದಾರೆ. ಈ ದಿನಗಳಲ್ಲಿ ಪ್ಯಾಕಿಂಗ್ ಮತ್ತು ಅನ್ಪ್ಯಾಕ್ ಮಾಡುವಲ್ಲಿ ನಿರತರಾಗಿದ್ದೇನೆ ಎಂದು ರಾಮ್ ಚರಣ್ ತಿಳಿಸಿದರು.
ಈ ವರ್ಷ ಸೂಪರ್ ಸ್ಟಾರ್ ರಾಮ್ ಚರಣ್ ತಮ್ಮ ಜೀವನದ ಎರಡು ದೊಡ್ಡ ಸಂತೋಷಕರ ವಿಷಯಗಳಿಗೆ ಕಾತರದಿಂದ ಕಾಯುತ್ತಿದ್ದಾರೆ. ಮೊದಲನೆಯದು, ಅವರು ಮದುವೆಯಾಗಿ 10 ವರ್ಷಗಳ ನಂತರ ಮೊದಲ ಮಗುವಿನ ತಂದೆಯಾಗಲಿರುವ ಖುಷಿಯಲ್ಲಿದ್ದಾರೆ. ಎರಡನೆಯದು, ಅವರ 'ಆರ್‌ಆರ್‌ಆರ್' ಚಿತ್ರದ 'ನಾಟು - ನಾಟು' ಹಾಡು ಆಸ್ಕರ್‌ನಲ್ಲಿ ಅತ್ಯುತ್ತಮ ಗೀತೆ ವಿಭಾಗಕ್ಕೆ ನಾಮನಿರ್ದೇಶನ ಗೊಂಡಿದೆ. ಮಾರ್ಚ್ 12 ರಂದು ಅಕಾಡೆಮಿಯು ವಿಜೇತರ ಹೆಸರನ್ನು ಘೋಷಿಸಲಿದೆ.
ಇದನ್ನೂ ಓದಿ: 'ಪ್ರಭಾಸ್ - ಕೃತಿ ನಟನೆ ಪ್ರೇಕ್ಷಕರನ್ನು ತಲುಪಲಿದೆ': ಆದಿಪುರುಷ್ ಎಡಿಟರ್ ಆಶಿಶ್ ವಿಶ್ವಾಸ
ನಿರ್ಮಾಪಕರಾದ ಗುನೀತ್ ಮೊಂಗಾ ಮತ್ತು ಶೌನಕ್ ಸೇನ್ ಅವರ ನಂತರ ಫೆ. 21ರಂದು ರಾಮ್ ಚರಣ್ ಅವರು ಮಾರ್ಚ್ 12ರಂದು ನಡೆಯಲಿರುವ 95ನೇ ಅಕಾಡೆಮಿ ಪ್ರಶಸ್ತಿ ಸಲುವಾಗಿ ಯನೈಟೆಡ್ ಸ್ಟೇಟ್ಸ್ (ಯುಎಸ್)ಗೆ ತೆರಳಿದ್ದಾರೆ. ರಾಮ್ಚರಣ್ ಅಮೆರಿಕಕ್ಕೆ ಬರಿಗಾಲಲ್ಲೇ ಪ್ರಯಾಣಿಸಿದ್ದು, ವೈರಲ್ ಆಗಿರುವ ಫೋಟೋಗಳಲ್ಲಿ ರಾಮ್ ಚರಣ್ ವಿಮಾನ ನಿಲ್ದಾಣದಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುವುದನ್ನು ನೋಡಬಹುದು. ಇದನ್ನು ಕಂಡ ಅಭಿಮಾನಿಗಳು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಸ್ಕರ್ ರೇಸ್‌ನಲ್ಲಿ 'ಆರ್‌ಆರ್‌ಆರ್': ಬರಿಗಾಲಲ್ಲೇ ಅಮೆರಿಕಕ್ಕೆ ತೆರಳಿದ ರಾಮ್ ಚರಣ್
ಇತ್ತೀಚೆಗೆ ವಿಶ್ವ ಖ್ಯಾತ ಸಿನಿಮಾ ನಿರ್ದೇಶಕ ಜೇಮ್ಸ್ ಕ್ಯಾಮರಾನ್ (James Cameron) ಅವರು ನಟ ರಾಮ್ ಚರಣ್ ಅಭಿನಯದ ಬಗ್ಗೆ ಗುಣಗಾನ ಮಾಡಿದ್ದರು.'ಆರ್‌ಆರ್‌ಆರ್' ಚಿತ್ರದಲ್ಲಿ ನನಗೆ ನಟ ರಾಮ್ ಚರಣ್ ಅವರ ಪಾತ್ರ ಬಹಳ ಹಿಡಿಸಿತು. ಆ ಪಾತ್ರದಲ್ಲಿ ಹಲವು ವೈವಿಧ್ಯ (ಭಾವನಾತ್ಮಕ ವಿಷಯಗಳು)ಗಳಿವೆ. ಅಂತಹ ಪಾತ್ರಗಳನ್ನು ನಿರ್ವಹಿಸುವುದು ನಿಜವಾಗಿಯೂ ಕಷ್ಟ. ನಿರ್ದೇಶಕ ರಾಜಮೌಳಿ ಅವರು ನಟರ ಪಾತ್ರವನ್ನು ಅದ್ಭುತವಾಗಿ ಮೂಡಿ ಬರುವಂತೆ ಮಾಡಿದ್ದಾರೆ ಎಂದು ಜೇಮ್ಸ್ ಕ್ಯಾಮರಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.