ETV Bharat / entertainment

Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ 'ಹೋರಾಟ' ಸಾಂಗ್​ ರಿಲೀಸ್​.. ನೀವು ಕೇಳಿದ್ರಾ? - ಪರಂವಃ ಪಿಕ್ಚರ್ಸ್

ರಕ್ಷಿತ್​ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ 'ಹೋರಾಟ' ಸಾಂಗ್​ ರಿಲೀಸ್ ಆಗಿದೆ.

saptha sagaradaache ello
ಸಪ್ತ ಸಾಗರದಾಚೆ ಎಲ್ಲೋ
author img

By

Published : Jul 20, 2023, 7:39 PM IST

ಕನ್ನಡ ಚಿತ್ರರಂಗಕ್ಕೆ ಸಿಂಪಲ್ಲಾಗಿ ಎಂಟ್ರಿ ಕೊಟ್ಟು ಸಿಂಪಲ್​ ಸ್ಟಾರ್​ ಆದ ನಟ ರಕ್ಷಿತ್​ ಶೆಟ್ಟಿ. ಸ್ಯಾಂಡಲ್​ವುಡ್​​​​​ನಲ್ಲಿ​ ಹೊಸತನ ತರುವುದಕ್ಕಾಗಿ ವಿಭಿನ್ನ ಕಥೆಗಳನ್ನು ಕಟ್ಟಿ ಕೊಟ್ಟು, ನಟ - ನಿರ್ದೇಶಕ, ನಿರ್ಮಾಪಕರಾಗಿ ಮಿಂಚುತ್ತಿದ್ದಾರೆ. ಸಿಂಪಲ್​ ಆಗಿರುವ ಸ್ಟೋರಿಯನ್ನು ಪ್ರೇಕ್ಷಕರ ಮನಮುಟ್ಟುವಂತೆ ತೋರಿಸುವ ರಕ್ಷಿತ್​ ಸ್ಟೈಲ್​ಗೆ ಜನರು ಫಿದಾ ಆಗಿದ್ದಾರೆ. ಚಾರ್ಲಿ 777 ಅದಕ್ಕೊಂದು ಉತ್ತಮ ಉದಾಹರಣೆ. ಇದೀಗ ಶೆಟ್ರು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ.

  • " class="align-text-top noRightClick twitterSection" data="">

ಈ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಹೈ ಲೆವೆಲ್​ನಲ್ಲಿದೆ. ಏಕೆಂದರೆ ಇದುವರೆಗೆ ಯಾರೂ ಮಾಡದೇ ಇರುವಂತಹ ಹೊಸ ಪ್ರಯೋಗವನ್ನು ಚಿತ್ರತಂಡ ಮಾಡೋಕೆ ಹೊರಟಿದೆ. ಸಿನಿಮಾದ ಸೈಡ್​ ಎ ಸೆಪ್ಟೆಂಬರ್​ 1ರಂದು ತೆರೆಗೆ ಬಂದರೆ, ಸೈಡ್​ B ಒಂದು ತಿಂಗಳ ಅಂತರದಲ್ಲಿ ಅಂದರೆ ಅಕ್ಟೋಬರ್​ 20 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅತ್ಯಂತ ಸಣ್ಣ ಅಂತರದಲ್ಲಿ ಸೀಕ್ವೆಲ್​ ರಿಲೀಸ್​ ಮಾಡುತ್ತಿರುವುದು ಇದೇ ಮೊದಲು.

ಈಗಾಗಲೇ ನ್ನಡ ಚಿತ್ರರಂಗದಲ್ಲಿ ಹೈಪ್ ಕ್ರಿಯೇಟ್ ಆಗಿರುವ ಈ ಚಿತ್ರ ಬಹುತೇಕ ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ದೇಶನ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿ ವಲಯ ಕಾತರದಿಂದ ಕಾಯುತ್ತಿದೆ. ಇದೀಗ ಚಿತ್ರತಂಡ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.

ಎಂ.ಸಿ.ಬಿಜ್ಜು ಹಾಗೂ ಕಿರಣ್ ಕಾವೇರಪ್ಪ ಬರೆದಿರುವ 'ಹೋರಾಟ' ಎಂಬ ಹಾಡಿನ ಲಿರಿಕಲ್ ವಿಡಿಯೋ ಪರಂವಃ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಎಂ.ಸಿ.ಬಿಜ್ಜು(ರಾಪರ್) ಹಾಗೂ ಕೀರ್ತನ್ ಹೊಳ್ಳ ಹಾಡಿರುವ ಈ ಹಾಡು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚರಣ್ ರಾಜ್ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.

ರಕ್ಷಿತ್​ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್​ ಬಂಡವಾಳ ಹೂಡಿದ್ದು, ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಮತ್ತು ವಿತರಣೆ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ. ಕೆವಿಎನ್​ ಸಂಸ್ಥೆ ಸಿನಿಮಾ ರಿಲೀಸ್​ ಡೇಟ್​ ಕುರಿತು ಎರಡು ಪೋಸ್ಟರ್​ಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ‌ಈ‌ ಚಿತ್ರ ಎರಡು ಕಾಲಘಟ್ಟಗಳಲ್ಲಿ ಕಥೆ ನಡೆಯಲಿದೆ. ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ಇಬ್ಬರು ‌ನಾಯಕಿಯರು ಜೋಡಿಯಾಗಿದ್ದಾರೆ.

ಎರಡು ವಿಭಿನ್ನ ಪೋಸ್ಟರ್​ಗಳಲ್ಲಿ ಮೊದಲ ಭಾಗದಲ್ಲಿ ರಕ್ಷಿತ್​ ಶೆಟ್ಟಿ ಹಾಗೂ ನಾಯಕಿ ರುಕ್ಮಿಣಿ ವಸಂತ್​ ಕಾಣಿಸಿಕೊಂಡಿದ್ದು, ಎರಡನೇ ಭಾಗದಲ್ಲಿ ಇಬ್ಬರು ನಾಯಕಿಯರಿದ್ದಾರೆ. ರುಕ್ಮಿಣಿ ವಸಂತ್​ ಅವರ ಜೊತೆಗೆ ನಟಿ ಚೈತ್ರಾ ಜೆ ಆಚಾರ್​ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ ಮುಂತಾದವರು ನಟಿಸಿದ್ದಾರೆ. ಹೇಮಂತ್ ರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಛಾಯಾ ಗ್ರಹಣವಿದೆ.

ಇದನ್ನೂ ಓದಿ: ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ.. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಬಿಗ್ ರಿಲೀಫ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.