ETV Bharat / entertainment

ಟ್ರೆಂಡಿಂಗ್‍ ಆ್ಯಕ್ಟರ್, ಐಕಾನಿಕ್ ಡೈರೆಕ್ಟರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ರಕ್ಷಿತ್ - ರಿಷಬ್

6ನೇ ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ವಿಶೇಷ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Rakshit and Rishab shetty won Trending Actor, Iconic Director Awards
ಟ್ರೆಂಡಿಂಗ್‍ ಆ್ಯಕ್ಟರ್, ಐಕಾನಿಕ್ ಡೈರೆಕ್ಟರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ರಕ್ಷಿತ್ - ರಿಷಬ್
author img

By ETV Bharat Karnataka Team

Published : Oct 14, 2023, 1:12 PM IST

Updated : Oct 14, 2023, 1:24 PM IST

ಕಳೆದ ವರ್ಷ ತಮ್ಮ ವಿನೂತನ ಪ್ರಯತ್ನದಿಂದ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರೀಗ 'ಐಕಾನಿಕ್‍ ಡೈರೆಕ್ಟರ್' ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ, '777 ಚಾರ್ಲಿ' ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರಕ್ಷಿತ್‍ ಶೆಟ್ಟಿ 'ಟ್ರೆಂಡಿಂಗ್‍ ಆ್ಯಕ್ಟರ್' ಆಗಿದ್ದಾರೆ. ಸ್ಯಾಂಡಲ್​ವುಡ್​ನ ಇಬ್ಬರು ಸೂಪರ್​ಸ್ಟಾರ್ಸ್ ಇಂಥದ್ದೊಂದು ಪ್ರಶಸ್ತಿಗೆ ಭಾಜನರಾಗಿದ್ದು ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ.

6th Innovative International Film Festival
6ನೇ ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ

6ನೇ ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಇನ್ನೋವೇಟೀವ್‍ ಫಿಲಂ ಅಕಾಡೆಮಿ, ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಸ್ಥಾಪಕ ಶರವಣ ಪ್ರಸಾದ್‍, ಮಾರತ್‍ಹಳ್ಳಿಯ ಇನ್ನೋವೇಟೀವ್‍ ಮಲ್ಟಿಪ್ಲೆಕ್ಸ್​​ನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ 6ನೇ ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಐ.ಎ.ಎಸ್‍ ಅಧಿಕಾರಿ ಅಪೂರ್ವ ಚಂದ್ರ ಭಾಗವಹಿಸಿ, ಚಿತ್ರೋತ್ಸವ ಉದ್ಘಾಟಿಸಿದರು. ಚಿತ್ರೋತ್ಸವದ ಅಧ್ಯಕ್ಷ ರಾಕ್‍ಲೈನ್‍ ವೆಂಕಟೇಶ್‍, ಫಿಲಂ ಫೆಡರೇಶನ್‍ ಆಫ್‍ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರ್ಕರ ಮತ್ತು ಹಲವು ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಕ್ಷಿತ್‍ ಶೆಟ್ಟಿ ಮತ್ತು ರಿಷಬ್​​ ಶೆಟ್ಟಿ ಅವರಿಗೆ ಈ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

'ಎಲ್ಲವೂ ಸಲ್ಲಬೇಕಾಗಿರುವುದು ಕನ್ನಡಿಗರಿಗೆ....' ಈ ಸಂದರ್ಭದಲ್ಲಿ ಮಾತನಾಡಿದ ನಟ ರಿಷಬ್​​ ಶೆಟ್ಟಿ, ಕಾಂತಾರ ಚಿತ್ರಕ್ಕೆ ಸಿಕ್ಕ ಪ್ರಶಸ್ತಿಗಳು ಮತ್ತು ಜನಪ್ರಿಯತೆ ಎಲ್ಲವೂ ಸಲ್ಲಬೇಕಾಗಿರುವುದು ಕನ್ನಡಿಗರಿಗೆ. ಅವರು ಈ ಚಿತ್ರಕ್ಕೆ ಅದ್ಭುತ ಯಶಸ್ಸು ಕೊಟ್ಟರು, ಬಳಿಕ ಅದು ಬೇರೆ-ಬೇರೆ ಭಾಷೆಗಳಿಗೆ ತಲುಪಿತು. ಹಾಗಾಗಿ, ಕನ್ನಡಿಗರಿಗೆ ನಾನು ಚಿರಋಣಿ. ಕನ್ನಡ ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಪಡೆಯುತ್ತಿವೆ. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಆದರೆ, ಆ ಚಿತ್ರಗಳಿಗೆ ಇಲ್ಲಿ ಚಿತ್ರಮಂದಿರಗಳು ಸಿಗುವುದಿಲ್ಲ. ಹಾಗೆಯೇ, ಓಟಿಟಿಗಳಲ್ಲೂ ಪ್ರಾಧಾನ್ಯತೆ ಸಿಗುವುದಿಲ್ಲ. ಎನ್‍.ಎಫ್‍.ಡಿ.ಸಿ ಮತ್ತು ಫಿಲಂ ಬಜಾರ್​ಗಳಿಗೆ ಆಯ್ಕೆಯಾಗುವ ಚಿತ್ರಗಳಿಗೆ ಪ್ರದರ್ಶನವಾಗುವಂತೆ ಒಂದು ವೇದಿಕೆ ಕಲ್ಪಿಸಬೇಕು ಎಂದು ಐ.ಎ.ಎಸ್‍ ಅಧಿಕಾರಿ ಅಪೂರ್ವ ಚಂದ್ರ ಅವರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ''ವಿಕಲತೆ ಮೆಟ್ಟಿ ನಿಂತು ಅದ್ಭುತ ಸಾಧನೆ ಮಾಡಿರುವ ನಿಮಗೆ ನಾವು ಚಿರಋಣಿ'': ಅಶ್ವಿನಿ ಪುನೀತ್ ರಾಜಕುಮಾರ್

ನಟ ರಕ್ಷಿತ್‍ ಶೆಟ್ಟಿ ಮಾತನಾಡಿ, 777 ಚಾರ್ಲಿ ನನ್ನ ವೃತ್ತಿಜೀವನದಲ್ಲಿ ಒಂದು ವಿಶೇಷ ಸಿನಿಮಾ. ಪರಂವಃ ಸ್ಟುಡಿಯೋಸ್‍ನಡಿ ನಿರ್ಮಾಣವಾದ ಮೊದಲ ಪ್ಯಾನ್‍ ಇಂಡಿಯಾ ಚಿತ್ರ ಅದು. ನಮ್ಮ ಚಲನಚಿತ್ರ ನಿರ್ಮಾಣ ಸಂಸ್ಥೆ ಇಂದ ನಾವು ಕಿರುಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದೆವು. ನಮ್ಮ ಬಳಿ ಬಜೆಟ್‍ ಇರಲಿಲ್ಲ. ಎರಡನೇ ಚಿತ್ರಕ್ಕೆ 20 ಸಾವಿರ ರೂ. ಬಜೆಟ್‍ ಇತ್ತು. ಹೀಗೆ ಮಾಡುತ್ತಾ ಮಾಡುತ್ತಾ ಇದೀಗ ನಮ್ಮ ಚಿತ್ರವೊಂದು ರಾಷ್ಟ್ರ ಪ್ರಶಸ್ತಿ ಪಡೆದಿದೆ. ಬಹಳ ಖುಷಿಯ ವಿಚಾರ ಇದು ಎಂದು ತಿಳಿಸಿದರು.

ಇನ್ನೂ, ಮನುಷ್ಯರ ಜೊತೆ ನಟನೆ ಮಾಡಬಹುದು. ಆದರೆ ಚಾರ್ಲಿ (ಶ್ವಾನ) ಜೊತೆಗೆ ಅಭಿನಯಿಸುವುದು ಸುಲಭದ ವಿಷಯವಾಗಿರಲಿಲ್ಲ. 170 ದಿನಗಳ ಚಿತ್ರೀಕರಣ, ಪ್ರತೀ ದೃಶ್ಯಕ್ಕೂ 40 ಟೇಕ್‍ಗಳು, ಪ್ರತೀ ಟೇಕ್‍ನಲ್ಲೂ ನಮ್ಮ ಅತ್ಯುತ್ತಮವಾದುದ್ದನ್ನೇ ಕೊಡಬೇಕು. ಹಾಗಾಗಿ, ಬಹಳ ಕಷ್ಟವಾದ ಸಿನಿಮಾ ಇದಾಗಿತ್ತು. ಚಿತ್ರೀಕರಣದ ಕೊನೆಯ ದಿನ ನಿರ್ದೇಶಕ ಕಿರಣ್‍ ರಾಜ್‍ ಬಂದು, ಚಾರ್ಲಿ 2 ಮಾಡುವುದಕ್ಕೆ ಒಳ್ಳೆಯ ಐಡಿಯಾ ಇದೆ ಎಂದರು. ಅದಕ್ಕೆ ನಾನು, ಚಾರ್ಲಿಯನ್ನು ಇಟ್ಟುಕೊಂಡು ಸಿನಿಮಾ ಮಾಡಿ, ನಾನು ಬರಲ್ಲ ಎಂದೆ. ಚಾರ್ಲಿ ಜೊತೆಗೆ ಕೆಲಸ ಮಾಡುವುದು ಕಷ್ಟ. ಆದರೆ, ಇಂತಹ ಪ್ರಶಸ್ತಿಗಳಿಂದ ಆ ಕಷ್ಟಗಳು ಮರೆತು ಹೋಗುತ್ತವೆ ಎಂದು ತಿಳಿಸಿದರು. ಟ್ರೆಂಡಿಂಗ್‍ ಆ್ಯಕ್ಟರ್ ಜೊತೆಗೆ ಎಂ.ಎಸ್‍.ಕೆ ಟ್ರಸ್ಟ್ ನೀಡುವ 'ದಾದಾ ಸಾಹೇಬ್‍ ಫಾಲ್ಕೆ - ಎಂ.ಎಸ್‍.ಕೆ ಟ್ರಸ್ಟ್' ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: 'ನಾನು BA ಮಾಡಿದ ಗಂಡು'... ನವಜೋಡಿಗಳು ಕೇಳಲೇಬೇಕಾದ ಹಾಡಿದು ಎಂದ ಅಭಿಷೇಕ್ ಅಂಬರೀಶ್

ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಭಾರತೀರಾಜ, ರಾಜೇಂದ್ರ ಸಿಂಗ್‍ ಬಾಬು, ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ನಟ ಸಾಯಿಕುಮಾರ್ ಸೇರಿದಂತೆ ಮೊದಲಾದವರನ್ನು ಸನ್ಮಾನಿಸಲಾಯಿತು. ತೆಲುಗು ನಟಿ ಮತ್ತು ಸಚಿವೆ ರೋಜಾ, ಹಿರಿಯ ನಟಿ ಅಂಬಿಕಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‍.ಎಂ. ಸುರೇಶ್‍ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Last Updated : Oct 14, 2023, 1:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.