ಮುಂಬೈ (ಮಹಾರಾಷ್ಟ್ರ): ಕಳೆದ ಹಲವು ದಿನಗಳಿಂದ ಕೆಲ ವಿಷಯವಾಗಿ ನಟಿ ರಾಖಿ ಸಾವಂತ್ ಸುದ್ದಿಯಲ್ಲಿದ್ದಾರೆ. ವೈವಾಹಿಕ ಜೀವನದ ಏರುಪೇರು ಒಂದು ಕಡೆ ಆದರೆ, ತಾಯಿ ನಿಧನ ಮತ್ತೊಂದು ಕಡೆ. ಇದೀಗ ತಮ್ಮ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ. ಈಗಾಗಲೇ ರಾಖಿ ಸಾವಂತ್ ದೂರಿನ ಮೇರೆಗೆ ಪತಿ ಆದಿಲ್ ಖಾನ್ ದುರಾನಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಪತಿ ಆದಿಲ್ ಮೇಲೆ ರಾಖಿ ಹಲ್ಲೆ ಆರೋಪ ಹೊರಿಸಿದ್ದಾರೆ. ಪತಿ ಆದಿಲ್ ಖಾನ್ ದುರಾನಿ ಅವರ ವಿವಾಹೇತರ ಸಂಬಂಧವನ್ನೂ ಕೂಡ ರಾಖಿ ಬಹಿರಂಗಪಡಿಸಿದ್ದಾರೆ.
- " class="align-text-top noRightClick twitterSection" data="
">
ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸಾವಂತ್: ಇದೀಗ ರಾಖಿ ಸಾವಂತ್ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ನಿನ್ನೆ (ಫೆಬ್ರವರಿ 7, ಮಂಗಳವಾರ) ರಾತ್ರಿ ಪಾಪರಾಜಿಗಳಿಗೆ ತನ್ನ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡುತ್ತಿದ್ದ ವೇಳೆ ರಾಖಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ರಾಖಿ ಸಾವಂತ್ ಮೂರ್ಛೆ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಾಪರಾಜಿಗಳ ಗುಂಪಿನ ನಡುವೆ ನಟಿ ರಾಖಿ ಸಾವಂತ್ ಹೋದ ವೇಳೆ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಮಳೆ ಸುರಿಸಲಾಯಿತು. ರಾಖಿ ಸಾವಂತ್ ಮಾಹಿತಿ ನೀಡುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ರಾಖಿ ಸಾವಂತ್ ಮೂರ್ಛೆ ಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
- " class="align-text-top noRightClick twitterSection" data="
">
ನೆಟ್ಟಿಗರು ಹೇಳಿದ್ದು ಹೀಗೆ: ರಾಖಿ ಸಾವಂತ್ ಮೂರ್ಛೆ ಹೋದ ವಿಡಿಯೋ ಗಮನಿಸಿದ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಬಹಳ ಧೈರ್ಯವಂತರು, ಕೈಯಿಂದ ಫೋನ್ ಬೀಳಲು ಬಿಡಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಸೋಷಿಯಲ್ ಮೀಡಿಯಾ ಬಳಕೆದಾದರರು ಕೂಡ 'ಅವರಿಗೆ ತಲೆಸುತ್ತು ಬಂದರೂ ಕೂಡ ಫೋನ್ ಬಿಡಲಿಲ್ಲ' ಎಂದು ಬರೆದಿದ್ದಾರೆ. ಇನ್ನೊಬ್ಬರು, 'ಯಾರು ಸರಿ ಮತ್ತು ಯಾರು ತಪ್ಪು ಎಂದು ದೇವರಿಗೆ ಮಾತ್ರ ತಿಳಿದಿದೆ' ಎಂದಿದ್ದಾರೆ.
ಇದನ್ನೂ ಓದಿ: ಪತಿ ವಿರುದ್ಧ ದೂರು ಕೊಟ್ಟ ನಟಿ ರಾಖಿ ಸಾವಂತ್: ಆದಿಲ್ ಖಾನ್ ಅರೆಸ್ಟ್!
ರಾಖಿ ಸಾವಂತ್ ಹೇಳಿದ್ದೇನು?: ಮೂರ್ಛೆ ಹೋಗುವುದಕ್ಕೂ ಮುನ್ನ ಪಾಪರಾಜಿಗಳೊಂದಿಗೆ ಕೆಲ ಮಾಹಿತಿ ಹಂಚಿಕೊಂಡಿದ್ದರು. 'ತಾಯಿ ಮತ್ತು ಚಿಕ್ಕಮ್ಮ ಬಹಳಷ್ಟು ಹೇಳಿದ್ದರು, ಆದರೆ ನಾನು ಅವರ ಮಾತು ಕೇಳಲಿಲ್ಲ. ಆದಿಲ್ ವಿರುದ್ಧ ಅನೇಕ ಕ್ರಿಮಿನಲ್ ದಾಖಲೆಗಳಿವೆ. ಮೊದಲೇ ಗೊತ್ತಿದ್ದರೆ ಅವರನ್ನು ಮದುವೆಯಾಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ರಾಖಿಯ ಸಹೋದರ, ಆದಿಲ್ ರಾಖಿಯ ಮೇಲೆ ಹಲ್ಲೆ ನಡೆಸಿರುವ ಕೆಲ ಫೋಟೋಗಳು ಮತ್ತು ವಿಡಿಯೋಗಳನ್ನು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆ ಓಶಿವಾರ ಪೊಲೀಸರು ಆದಿಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಆದಿಲ್ ತನ್ನ ಗೆಳತಿಯೊಂದಿಗೆ ಇರಲು ಬಯಸಿದ್ದಾರೆ ಎಂಬ ವಿಚಾರವನ್ನು ರಾಖಿ ಬಹಿರಂಗಪಡಿಸಿದ್ದಾರೆ. ಅಲ್ಲದೇ ತನ್ನ ತಾಯಿಯ ಚಿಕಿತ್ಸೆ ಮಾಡಿಸಿಲ್ಲ, ಆ ಚಿಕಿತ್ಸೆಗೆ ನಾನು ಕೊಟ್ಟ ಹಣ ಬಳಸಿಲ್ಲ, ಹಾಗಾಗಿಯೇ ತಾಯಿ ಮೃತಪಟ್ಟರೆಂಬ ಗಂಭೀರ ಆರೋಪವನ್ನು ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ಮಾಡಿದ್ದಾರೆ.
ಇದನ್ನೂ ಓದಿ: ಸಿದ್ಧಾರ್ಥ್ ಕಿಯಾರಾ ಮದುವೆ: ರಾಮ್ಚರಣ್, ಕತ್ರಿನಾ ಸೇರಿ ಸೂಪರ್ ಸ್ಟಾರ್ಗಳಿಂದ ಶುಭಾಶಯ