ಕಾಲಿವುಡ್ ಸೂಪರ್ ಸ್ಟಾರ್ 'ತಲೈವಾ' ರಜನಿಕಾಂತ್ ಅವರ ಜೈಲರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ಸು ಕಂಡಿದೆ. ನಿನ್ನೆ (ಶನಿವಾರ) ರಜನಿಕಾಂತ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಲಕ್ನೋದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.
-
#WATCH | Actor Rajinikanth meets Uttar Pradesh CM Yogi Adityanath at his residence in Lucknow pic.twitter.com/KOWEyBxHVO
— ANI (@ANI) August 19, 2023 " class="align-text-top noRightClick twitterSection" data="
">#WATCH | Actor Rajinikanth meets Uttar Pradesh CM Yogi Adityanath at his residence in Lucknow pic.twitter.com/KOWEyBxHVO
— ANI (@ANI) August 19, 2023#WATCH | Actor Rajinikanth meets Uttar Pradesh CM Yogi Adityanath at his residence in Lucknow pic.twitter.com/KOWEyBxHVO
— ANI (@ANI) August 19, 2023
ಸಿಎಂ ಪಾದ ಸ್ಪರ್ಶಿಸಿದ ರಜನಿಕಾಂತ್: ಶುಕ್ರವಾರ ಲಕ್ನೋದಲ್ಲಿ ಜೈಲರ್ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸಲಾಗಿತ್ತು. ಈವೆಂಟ್ನಲ್ಲಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯು ಕೂಡಾ ಪಾಲ್ಗೊಂಡಿದ್ದರು. ಇದೀಗ ರಜನಿಕಾಂತ್ ಮತ್ತು ಯೋಗಿ ಆದಿತ್ಯನಾಥ್ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವೈರಲ್ ವಿಡಿಯೋದಲ್ಲಿ, ರಜನಿಕಾಂತ್ ಅವರು ಸಿಎಂ ಯೋಗಿ ಪಾದ ಸ್ಪರ್ಶಿಸುತ್ತಿರುವುದನ್ನು ನೋಡಬಹುದು.
-
प्रख्यात फिल्म अभिनेता श्री रजनीकांत जी से आज लखनऊ स्थित सरकारी आवास पर शिष्टाचार भेंट हुई।@rajinikanth pic.twitter.com/HIByc0aOO0
— Yogi Adityanath (@myogiadityanath) August 19, 2023 " class="align-text-top noRightClick twitterSection" data="
">प्रख्यात फिल्म अभिनेता श्री रजनीकांत जी से आज लखनऊ स्थित सरकारी आवास पर शिष्टाचार भेंट हुई।@rajinikanth pic.twitter.com/HIByc0aOO0
— Yogi Adityanath (@myogiadityanath) August 19, 2023प्रख्यात फिल्म अभिनेता श्री रजनीकांत जी से आज लखनऊ स्थित सरकारी आवास पर शिष्टाचार भेंट हुई।@rajinikanth pic.twitter.com/HIByc0aOO0
— Yogi Adityanath (@myogiadityanath) August 19, 2023
ಕೆಲವೇ ಕ್ಷಣಗಳಲ್ಲಿ ಆನ್ಲೈನ್ನಲ್ಲಿ ಭಾರಿ ವೀವ್ಸ್ ಪಡೆದಿರುವ ವಿಡಿಯೋದಲ್ಲಿ, ರಜನಿಕಾಂತ್ ಅವರು ಕಾರಿನಿಂದ ಇಳಿಯುವುದನ್ನು ಕಾಣಬಹುದು. ಜನರಿಗೆ, ಅಭಿಮಾನಿಗಳಿಗೆ ನಮಸ್ಕರಿಸುತ್ತಾ ಅವರು ಮುಂದೆ ಸಾಗುತ್ತಾರೆ. ಸೂಪರ್ ಸ್ಟಾರ್ ಸ್ವಾಗತಿಸಲು ಸಿಎಂ ಯೋಗಿ ಹೊರಗೆ ಆಗಮಿಸಿದ್ದರು. ಈ ವೇಳೆ ರಜನಿಕಾಂತ್ ಸಿಎಂ ಯೋಗಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಸೂಪರ್ ಸ್ಟಾರ್ ಸರಳತೆ ಜನರ ಹೃದಯ ಗೆದ್ದಿದೆ. ವಿಡಿಯೋಗೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದನ್ನೂ ಓದಿ: 'ಟೈಗರ್ ನಾಗೇಶ್ವರ ರಾವ್' ಚಿತ್ರದ ಟೀಸರ್ ರಿಲೀಸ್: ರಗಡ್ ಲುಕ್ನಲ್ಲಿ ಮಾಸ್ ಮಹಾರಾಜ
ನೆಟ್ಟಿಗರ ಪ್ರತಿಕ್ರಿಯೆ: ಸೂಪರ್ ಸ್ಟಾರ್ ರಜನಿ ಮತ್ತು ಸಿಎಂ ಯೋಗಿ ಭೇಟಿಯ ವಿಡಿಯೋ ಶೇರ್ ಮಾಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು, "ನಟ ರಜನಿಕಾಂತ್ ಅವರು ಲಕ್ನೋದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದು, ಅವರ ಪಾದ ಸ್ಪರ್ಶಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಆನ್ಲೈನ್ನಲ್ಲಿ ವೈರಲ್ ಅಗುತ್ತಿರುವ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, "ರಿಯಲ್ ಹೀರೋ ವಿತ್ ರೀಲ್ ಹೀರೋ' ಎಂದು ಗುಣಗಾನ ಮಾಡಿದ್ದಾರೆ. ಮತ್ತೋರ್ವ ನೆಟ್ಟಿಗ, "ಪೊಲಿಟಿಕಲ್ ಸೂಪರ್ ಸ್ಟಾರ್ ಜೊತೆ ಇಂಡಿಯನ್ ಸಿನಿಮಾ ಸೂಪರ್ ಸ್ಟಾರ್" ಎಂದು ಮೆಚ್ಚಿಕೊಂಡಿದ್ದಾರೆ. ಯೋಗಿ ಆದಿತ್ಯನಾಥ್ ಪಾದ ಸ್ಪರ್ಶಿಸಿ ಸಮಸ್ಕರಿಸಿರುವ ಹಿನ್ನೆಲೆಯಲ್ಲಿ ಕೆಲವರು ಇಬ್ಬರ ವಯಸ್ಸಿನ ಅಂತರದ ವಿಚಾರವೆತ್ತಿ ಆಕ್ಷೇಪಿಸಿದ್ದಾರೆ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರ 'ಸಿಕಾಡಾ' ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ ಮೇಘನಾ ರಾಜ್, ಪ್ರಜ್ವಲ್ ದೇವರಾಜ್
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ದೇಶೀಯ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂ. ಗಡಿ ದಾಟಿರುವ ಸಿನಿಮಾ ಜಾಗತಿಕವಾಗಿ 500 ಕೋಟಿ ರೂ. ಗಳಿಸುವಲ್ಲಿ ಯಶ ಕಂಡಿದೆ. ರಜನಿಕಾಂತ್ ಅವರು ಸಿನಿಮಾ ಬಿಡುಗಡೆಗೂ ಮುನ್ನ ಹಿಮಾಲಯ ಪ್ರವಾಸ ಕೈಗೊಂಡಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಇಂದು ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡುವ ಕಾರ್ಯಕ್ರಮವಿದೆ.