ಚೆನ್ನೈ (ತಮಿಳುನಾಡು): ನಿಯಮಿತವಾಗಿ ತೆರಿಗೆ ಪಾವತಿಸುತ್ತಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನು ಆದಾಯ ತೆರಿಗೆ ಇಲಾಖೆ ಚೆನ್ನೈನಲ್ಲಿ ಸನ್ಮಾನಿಸಿದೆ. ತಂದೆಯ ಪರವಾಗಿ ಪುತ್ರಿ ಐಶ್ವರ್ಯಾ ರಜನಿಕಾಂತ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ನಂತರ ಐಶ್ವರ್ಯ ಇನ್ಸ್ಟಾಗ್ರಾಂನಲ್ಲಿ ಪ್ರಶಸ್ತಿ ಸ್ವಿಕರಿಸಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಜುಲೈ 24 ರಂದು ಚೆನ್ನೈನಲ್ಲಿ ಆದಾಯ ತೆರಿಗೆ ದಿನವನ್ನು ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ರಜಿನಿಕಾಂತ್ ಅವರಿಗೆ ಸರಿಯಾದ ಸಮಯಕ್ಕೆ ಆದಾಯ ತೆರಿಗೆ ಸಲ್ಲಿಕೆ ಮಾಡುತ್ತಿರುವುದ್ದಕ್ಕೆ ಗೌರವಿಸಲಾಯಿತು, ಈ ಗೌರವವನ್ನು ರಜಿನಿಕಾಂತ್ ಅವರ ಮಗಳು ಸ್ವೀಕರಿಸಿದರು.
'ಹೆಚ್ಚಿನ ಮತ್ತು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟುವವರ ಮಗಳಾಗಿರುವುದಕ್ಕೆ ಹೆಮ್ಮೆ ಇದೆ. ಅಪ್ಪನನ್ನು ಗೌರವಿಸಿದ ತಮಿಳುನಾಡು ಮತ್ತು ಪುದುಚೇರಿಯ ಆದಾಯ ತೆರಿಗೆ ಇಲಾಖೆಗೆ ಧನ್ಯವಾದಗಳು' ಎಂದು ಶೀರ್ಷಿಕೆ ನೀಡಿ, ಪ್ರಮಾಣ ಪತ್ರ ಸ್ವೀಕರಿಸುತ್ತಿರುವ ಫೊಟೋವನ್ನು ಇನ್ಸ್ಟಾಗ್ರಾಂನಲ್ಲಿ ಐಶ್ವರ್ಯ ರಜನಿಕಾಂತ್ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಐಶ್ವರ್ಯಾ ಅವರು ಈ ಫೋಟೋ ಹಾಕಿದ ತಕ್ಷಣ, ಅಭಿಮಾನಿಗಳು ರಜಿನಿಕಾಂತ್ ಅವರನ್ನು ಅಭಿನಂದಿಸಿ ಕಾಮೆಂಟ್ ಮಾಡಿದ್ದಾರೆ. 'ತಲೈವ ಅವರ ಅಭಿಮಾನಿಯಾಗಲು ಹೆಮ್ಮೆಪಡುತ್ತೇನೆ' ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ತಲೈವ ಅವರಿಗೆ ಅಭಿನಂದನೆಗಳು. 'ರಜಿನಿಕಾಂತ್ ಸರ್ ಖಂಡಿತವಾಗಿಯೂ ಜವಾಬ್ದಾರಿಯುತ ನಾಗರಿಕ' ಮುಂತಾದ ಕಾಮೆಂಟ್ನ್ನು ಅಭಿಮಾನಿಗಳು ಬರೆದು ಅಭಿನಂದಿಸಿದ್ದಾರೆ.
ರಜಿನಿಕಾಂತ್ ಅವರ ಮುಂದಿನ ಸಿನಿಮಾಗಳನ್ನು ನೋಡುವುದಾದರೆ, ನೆಲ್ಸನ್ ದಿಲೀಪ್‌ಕುಮಾರ್ ಅವರೊಂದಿಗೆ ಜೈಲರ್ ಎಂಬ ಹೊಸ ಚಿತ್ರಕ್ಕೆ ಸಹಿಮಾಡಿದ್ದು, ಈ ಸಿನಿಮಾದಲ್ಲಿ ನಟ ಶಿವರಾಜ್ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ. ಈ ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದೆ. 2021ರ ಅಣ್ಣಾತೆ ನಂತರ ರಜಿನಿಕಾಂತ್ ಅವರ ಚಿತ್ರ ತೆರೆ ಕಂಡಿಲ್ಲ.
ಇದನ್ನೂ ಓದಿ : 22 ವರ್ಷಗಳಿಂದ ಕನ್ವರ್ ಯಾತ್ರಿಗಳ ಸೇವೆ: ಹಿಂದೂ - ಮುಸ್ಲಿಂ ಭಾವೈಕ್ಯತೆಯ ಸಂಕೇತ ಈ ಯಾಮೀನ್ ಖಾನ್