ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾ ಬಿಡುಗಡೆ ದಿನ ಸಮೀಪಿಸುತ್ತಿದೆ. ಇದೀಗ ದೇಶದಲ್ಲೂ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಬಹುನಿರೀಕ್ಷಿತ ಸಿನಿಮಾ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಿನ್ನೆ ಕರ್ನಾಟಕದಲ್ಲಿ 'ಸಲಾರ್' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿತ್ತು. ಇಂದು ತೆಲಂಗಾಣದಲ್ಲಿ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ತೆಲುಗು ರಾಜ್ಯದಲ್ಲಿ ಮೊದಲ ಟಿಕೆಟ್ ಅನ್ನು ರಾಜಮೌಳಿ ಅವರು ಖರೀದಿಸಿದ್ದಾರೆ.
-
Legendary Director @ssrajamouli garu buys the first ticket for #SalaarCeaseFire in Nizam 🎟️
— Hombale Films (@hombalefilms) December 16, 2023 " class="align-text-top noRightClick twitterSection" data="
Nizam grand release by @MythriOfficial 💥#Salaar #Prabhas #PrashanthNeel @PrithviOfficial @shrutihaasan @VKiragandur @ChaluveG @hombalefilms #HombaleMusic @IamJagguBhai @sriyareddy… pic.twitter.com/2de2BNWBqQ
">Legendary Director @ssrajamouli garu buys the first ticket for #SalaarCeaseFire in Nizam 🎟️
— Hombale Films (@hombalefilms) December 16, 2023
Nizam grand release by @MythriOfficial 💥#Salaar #Prabhas #PrashanthNeel @PrithviOfficial @shrutihaasan @VKiragandur @ChaluveG @hombalefilms #HombaleMusic @IamJagguBhai @sriyareddy… pic.twitter.com/2de2BNWBqQLegendary Director @ssrajamouli garu buys the first ticket for #SalaarCeaseFire in Nizam 🎟️
— Hombale Films (@hombalefilms) December 16, 2023
Nizam grand release by @MythriOfficial 💥#Salaar #Prabhas #PrashanthNeel @PrithviOfficial @shrutihaasan @VKiragandur @ChaluveG @hombalefilms #HombaleMusic @IamJagguBhai @sriyareddy… pic.twitter.com/2de2BNWBqQ
ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ದೊಡ್ಡ ಮಟ್ಟಿಗೇ ಇದೆ. ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಬಹಳ ಸಮಯದಿಂದಲೇ ಕಾತರರಾಗಿದ್ದಾರೆ. ಹಲವು ಬಾರಿ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದ್ದು, ಅಂತಿಮವಾಗಿ ''ಸಲಾರ್ ಭಾಗ 1'' 2023ರ ಕ್ರಿಸ್ಮಸ್ ಸಂದರ್ಭ ರಿಲೀಸ್ ಆಗಲಿದೆ.
ತೆಲಂಗಾಣದಲ್ಲಿ ಫಸ್ಟ್ ಟಿಕೆಟ್ ಸೋಲ್ಡ್ ಔಟ್: ಇದೀಗ ತೆಲುಗು ರಾಜ್ಯದಲ್ಲಿ ಸಲಾರ್ ಚಿತ್ರದ ಮೊದಲ ಟಿಕೆಟ್ ಮಾರಾಟವಾಗಿದೆ. ಈ ಬಹುನಿರೀಕ್ಷಿತ ಚಿತ್ರದ ಮೊದಲ ಟಿಕೆಟ್ ಅನ್ನು ಖರೀದಿಸಿದ್ದು ಬೇರೆ ಯಾರೂ ಅಲ್ಲ, ಬಾಹುಬಲಿ ಖ್ಯಾತಿಯ ಹಿರಿಯ ನಿರ್ದೇಶಕ ಎಸ್.ಎಸ್ ರಾಜಮೌಳಿ. ಹೌದು, ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳಿದ್ದ ಲೆಜೆಂಡರಿ ನಿರ್ದೇಶಕರು ಸಲಾರ್ ಚಿತ್ರದ ಮೊದಲ ಟಿಕೆಟ್ ಖರೀದಿಸಿ ಗಮನ ಸೆಳೆದಿದ್ದಾರೆ. ಈ ವಿಚಾರವನ್ನು ಸ್ವತಃ ಸಲಾರ್ ಸಿನಿಮಾ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ.
-
A cinematic air salute to #Prabhas by Canada Rebel Star Fans 🚁#SalaarCeaseFire in cinemas worldwide from December 22nd! 💥#PrashanthNeel @PrithviOfficial @shrutihaasan @VKiragandur @hombalefilms #HombaleMusic @IamJagguBhai @sriyareddy @RaviBasrur @bhuvangowda84… pic.twitter.com/3C0AmwpN1Q
— Hombale Films (@hombalefilms) December 15, 2023 " class="align-text-top noRightClick twitterSection" data="
">A cinematic air salute to #Prabhas by Canada Rebel Star Fans 🚁#SalaarCeaseFire in cinemas worldwide from December 22nd! 💥#PrashanthNeel @PrithviOfficial @shrutihaasan @VKiragandur @hombalefilms #HombaleMusic @IamJagguBhai @sriyareddy @RaviBasrur @bhuvangowda84… pic.twitter.com/3C0AmwpN1Q
— Hombale Films (@hombalefilms) December 15, 2023A cinematic air salute to #Prabhas by Canada Rebel Star Fans 🚁#SalaarCeaseFire in cinemas worldwide from December 22nd! 💥#PrashanthNeel @PrithviOfficial @shrutihaasan @VKiragandur @hombalefilms #HombaleMusic @IamJagguBhai @sriyareddy @RaviBasrur @bhuvangowda84… pic.twitter.com/3C0AmwpN1Q
— Hombale Films (@hombalefilms) December 15, 2023
ಖ್ಯಾತ ತೆಲುಗು ಚಲನಚಿತ್ರ ವಿತರಣಾ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದೆ. ಎಸ್ಎಸ್ ರಾಜಮೌಳಿ ಅವರು ನಿಜಾಮ್ ಪ್ರದೇಶದಲ್ಲಿ (ತೆಲಂಗಾಣ, ಹೈದರಾಬಾದ್) ಸಿನಿಮಾ ವೀಕ್ಷಿಸಲು ನಮ್ಮಿಂದ ಸಲಾರ್‌ನ ಉದ್ಘಾಟನಾ ಟಿಕೆಟ್ ಅನ್ನು ಖರೀದಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ರಾಜಮೌಳಿ ಅವರು ಸಲಾರ್‌ನ ಮೊದಲ ಶೋಗಾಗಿ (7AM) ಟಿಕೆಟ್ ಪಡೆದಿರುವ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರಾಜಮೌಳಿ ಜೊತೆಗೆ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಪ್ರಶಾಂತ್ ನೀಲ್, ಮೈತ್ರಿ ಮೂವೀ ಮೇಕರ್ಸ್‌ನ ನವೀನ್ ಯೆರ್ನೇನಿ ಸೇರಿದಂತೆ ಇತರರು ಕಾಣಿಸಿಕೊಂಡಿದ್ದಾರೆ.
-
THE PRIDE OF INDIAN CINEMA @ssrajamouli buys the first ticket of INDIA'S BIGGEST ACTION FILM #Salaar in Nizam from the team and producer #NaveenYerneni ❤️🔥
— Mythri Movie Makers (@MythriOfficial) December 16, 2023 " class="align-text-top noRightClick twitterSection" data="
Nizam Release by @MythriOfficial 💥
Bookings open very soon in a grand manner with some Massive Celebrations 😎🔥… pic.twitter.com/d75n500YwS
">THE PRIDE OF INDIAN CINEMA @ssrajamouli buys the first ticket of INDIA'S BIGGEST ACTION FILM #Salaar in Nizam from the team and producer #NaveenYerneni ❤️🔥
— Mythri Movie Makers (@MythriOfficial) December 16, 2023
Nizam Release by @MythriOfficial 💥
Bookings open very soon in a grand manner with some Massive Celebrations 😎🔥… pic.twitter.com/d75n500YwSTHE PRIDE OF INDIAN CINEMA @ssrajamouli buys the first ticket of INDIA'S BIGGEST ACTION FILM #Salaar in Nizam from the team and producer #NaveenYerneni ❤️🔥
— Mythri Movie Makers (@MythriOfficial) December 16, 2023
Nizam Release by @MythriOfficial 💥
Bookings open very soon in a grand manner with some Massive Celebrations 😎🔥… pic.twitter.com/d75n500YwS
ಈ ಫೋಟೋದ ಜೊತೆಗೆ "ಭಾರತೀಯ ಸಿನಿಮಾದ ಹೆಮ್ಮೆ" ಎಂದು ರಾಜಮೌಳಿಯವರನ್ನು ಹೊಗಳುವ ಕ್ಯಾಪ್ಷನ್ ಕೂಡ ಇದೆ. ಚಿತ್ರತಂಡ ಮತ್ತು ನಿರ್ಮಾಪಕ ನವೀನ್ ಯರ್ನೇನಿ ಅವರಿಂದ ಸಲಾರ್‌ನ ಮೊದಲ ಟಿಕೆಟ್ ಖರೀದಿಸಿರುವುದಾಗಿ ಮಾಹಿತಿ ನೀಡಲಾಗಿದೆ. ಸಲಾರ್ ಅಡ್ವಾನ್ಸ್ ಟಿಕೆಟ್ ಬುಕಿಂಗ್ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂಬ ಸುಳಿವನ್ನೂ ವಿತರಕರು ನೀಡಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ರಾಜಮೌಳಿ ಅವರು ಮೊದಲ ಟಿಕೆಟ್ ಪಡೆದವರಾಗಿದ್ದಾರೆ.
ಇದನ್ನೂ ಓದಿ: ಮಕ್ಕಳ ಶಾಲಾ ಸಮಾರಂಭಕ್ಕೆ ಸಾಕ್ಷಿಯಾದ ಬಚ್ಚನ್, ಖಾನ್ ಕುಟುಂಬಸ್ಥರು: ವಿಡಿಯೋ ನೋಡಿ
ವರದಿಗಳ ಪ್ರಕಾರ, ಮೈತ್ರಿ ಮೂವಿ ಮೇಕರ್ಸ್ ನಿಜಾಮ್ ಪ್ರದೇಶದಲ್ಲಿ (ತೆಲಂಗಾಣ) 90.06 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿ ಸಲಾರ್ ಥಿಯೇಟ್ರಿಕಲ್ ರೈಟ್ಸ್ ಅನ್ನು ಪಡೆದುಕೊಂಡಿದೆ. ಈ ಮೊತ್ತದ ಪೈಕಿ 65 ಕೋಟಿ ರೂ. ನಾನ್-ಫಂಡೇಬಲರ್, ಉಳಿದ 25.6 ಕೋಟಿ ರೂ. ಫಂಡೇಬಲ್. ಈ ಒಪ್ಪಂದ ನಿಜಾಮ್ ಪ್ರಾಂತ್ಯದಲ್ಲಾದ ಅತ್ಯಂತ ಮಹತ್ವದ ಒಪ್ಪಂದಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: 'ಸಲಾರ್'ಗೆ ಸಿನಿಮ್ಯಾಟಿಕ್ ಏರ್ ಸೆಲ್ಯೂಟ್: ಕೆನಡಾ ಅಭಿಮಾನಿಗಳ ಅದ್ಭುತ ವಿಡಿಯೋ ನೋಡಿ
ನಿಜಾಮ್ ಪ್ರದೇಶ ಅವಳಿ ನಗರಗಳಾದ ಹೈದರಾಬಾದ್ ಮತ್ತು ಸಿಕಂದರಾಬಾದ್ ಜೊತೆಗೆ ಆದಿಲಾಬಾದ್, ಖಮ್ಮಮ್, ಮಹೆಬೂಬ್ನಗರ್, ಕರೀಂನಗರ್, ನಲ್ಗೊಂಡ, ಮೇಡಕ್, ನಿಜಾಮಾಬಾದ್, ರಂಗಾರೆಡ್ಡಿ ಮತ್ತು ವಾರಂಗಲ್ ಸೇರಿದಂತೆ ಹಲವು ಪ್ರದೇಶಗಳನ್ನು ಒಳಗೊಂಡಿದೆ. ಈ ಪ್ರದೇಶವು ಕರ್ನಾಟಕದ ಮೂರು ಜಿಲ್ಲೆಗಳಾದ ಕಲಬುರಗಿ, ಬೀದರ್ ಮತ್ತು ರಾಯಚೂರು ಅನ್ನು ಒಳಗೊಳ್ಳುತ್ತದೆ. ಮಹಾರಾಷ್ಟ್ರದ ಔರಂಗಾಬಾದ್, ಲಾತೂರ್, ನಾಂದೇಡ್, ಪರ್ಭಾನಿ, ಭೀಡ್, ಜಲ್ನಾ ಮತ್ತು ಉಸ್ಮಾನಾಬಾದ್ ಅವುಗಳನ್ನೂ ಒಳಗೊಂಡಿದೆ. ತೆಲುಗು ಚಲನಚಿತ್ರೋದ್ಯಮದಲ್ಲಿ ಶೇ. 50ಕ್ಕಿಂತ ಹೆಚ್ಚಿನ ಆದಾಯ ಈ ಪ್ರದೇಶದಿಂದ ಬರುತ್ತದೆ ಅನ್ನೋದು ಗಮನಾರ್ಹ. ನಿಜಾಮ್ ಪ್ರದೇಶ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.