ETV Bharat / entertainment

ಮಾಸ್ಕ್ ಕಪಲ್: ರಾಜ್​ ಕುಂದ್ರಾಗೆ ಪತ್ನಿ ಶಿಲ್ಪಾ ಶೆಟ್ಟಿ ಸಾಥ್ - ವಿಡಿಯೋ ವೈರಲ್! - ಶಿಲ್ಪಾ ಶೆಟ್ಟಿ ಮಾಸ್ಕ್ ವಿಡಿಯೋ

Raj Kundra Shilpa Shetty: ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ಕಂಪ್ಲೀಟ್​ ಫೇಸ್ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದಾರೆ.

Raj Kundra Shilpa Shetty wore a mask
ಮಾಸ್ಕ್ ಕಪಲ್: ರಾಜ್​ ಕುಂದ್ರಾಗೆ ಪತ್ನಿ ಶಿಲ್ಪಾ ಶೆಟ್ಟಿ ಸಾಥ್
author img

By ETV Bharat Karnataka Team

Published : Oct 15, 2023, 12:14 PM IST

ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ದಂಪತಿ ಶನಿವಾರ ರಾತ್ರಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಜೋಡಿ ಮ್ಯಾಚಿಂಗ್​​ ಫೇಸ್ ಮಾಸ್ಕ್ ಧರಿಸಿದ್ದರು. ಮಾಸ್ಕ್ ಕಪಲ್ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ದಂಪತಿಯನ್ನು, ಟೆಲಿವಿಶನ್​​ ಪಾಪುಲರ್​ ಶೋ ಪವರ್ ರೇಂಜರ್ಸ್‌ನೊಂದಿಗೆ ನೆಟ್ಟಿಗರು ಹೋಲಿಕೆ ಮಾಡಿದ್ದಾರೆ.

ಪ್ರಕರಣವೊಂದರಲ್ಲಿ ಸಿಲುಕಿ ಸಮಸ್ಯೆಗಳನ್ನು ಎದುರಿಸಿದ ಬಳಿಕ, ಉದ್ಯಮಿ ರಾಜ್ ಕುಂದ್ರಾ ಅವರು ಪಬ್ಲಿಕ್ ಪ್ಲೇಸ್​ನಲ್ಲಿ ಫೇಸ್​ ಮಾಸ್ಕ್ ಧರಿಸಿ ಓಡಾಡಲು ಪ್ರಾರಂಭಿಸಿದರು. ಪಾಪರಾಜಿಗಳಿಂದ ಅಂತರ ಕಾಯ್ದುಕೊಳ್ಳಲು ಇಚ್ಛಿಸುವ ರಾಜ್​​, ಹೆಚ್ಚಾಗಿ ಕಂಪ್ಲೀಟ್ ಫೇಸ್​ ಮಾಸ್ಕ್ ಧರಿಸಿಯೇ ಓಡಾಡುತ್ತಾರೆ. ಮಾಸ್ಕ್ ಮ್ಯಾನ್​ ಎಂದೇ ಫೇಮಸ್​ ನೋಡಿ. ಇತ್ತ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಕೂಡ ಪತಿ ರಾಜ್ ಕುಂದ್ರಾ ಅವರನ್ನು ಅನುಸರಿಸಿದ್ದಾರೆ. ಮೊದಲ ಬಾರಿ ನಟಿ, ಪತಿಯಂತೆ ಕಂಪ್ಲೀಟ್​​ ಎಲ್ಇಡಿ ಫೇಸ್ ಮಾಸ್ಕ್ ಧರಿಸಿ ಕಾಣಿಸಿಕೊಂಡರು.

ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ, ಅಪ್‌ಲೋಡ್ ಮಾಡಿದ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದಿರುವ ರಾಜ್ ಕುಂದ್ರಾ ಅವರು, ಮುಖವಾಡಗಳಿಂದ ತಮ್ಮ ಮುಖವನ್ನು ಮರೆಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಇತ್ತ ಪತ್ನಿ ಕೂಡ ಪತಿಗೆ ಸಾಥ್​ ನೀಡಿ, ಮಾಸ್ಕ್ ಧರಿಸಿ ಬಂದಿದ್ದಾರೆ. ನಿನ್ನೆ ಸಂಜೆ ಅಪರೂಪದ ದೃಶ್ಯ ಕಂಡುಬಂದಿದ್ದು, ದಂಪತಿಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ.

ಶನಿವಾರ ಸಂಜೆ ಇಬ್ಬರೂ ವೀಕೆಂಡ್​ ಡೇಟ್​ಗೆ ಹೊರಗೆ ಬಂದಿದ್ದಾರೆ. ಮ್ಯಾಚಿಂಗ್​ ಮಾಸ್ಕ್​​ನೊಂದಿಗೆ ಆಗಮಿಸಿದ ಜೋಡಿ, ಪಾಪರಾಜಿಗಳಿಗೆ ಪೋಸ್ ನೀಡಿದರು. ಬಾಲಿವುಡ್​ ಬ್ಯೂಟಿ ಶಿಲ್ಪಾ ಬ್ಲ್ಯಾಕ್​​ ಜಂಪ್‌ಸೂಟ್‌ನಲ್ಲಿ ಕಾಣಿಸಿಕೊಂಡರೆ, ರಾಜ್​​ ಬ್ಲ್ಯಾಕ್​​ ಸ್ವೆಟ್‌ಶರ್ಟ್ ಹಾಗೂ ಬ್ಲ್ಯಾಕ್​ ಪ್ಯಾಂಟ್‌ ಧರಿಸಿದ್ದರು.

ಇದನ್ನೂ ಓದಿ: ವಾರದ ಕಥೆ ಕಿಚ್ಚನ ಜೊತೆ: ''ದೇವರೇ ಕ್ಷಮೆ ಕೊಡಬೇಕಾದ್ರೆ ನಾವ್ಯಾರು, ನೀವ್ಯಾರು'' - ಹೇಗಿತ್ತು ಸುದೀಪ್​​ ಕ್ಲಾಸ್?

ಪಾಪರಾಜಿಗಳು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ದಂಪತಿ ರೆಸ್ಟೋರೆಂಟ್‌ಗೆ ಆಗಮಿಸಿದಾಗ ರಾಜ್​​, ಶಿಲ್ಪಾ ಅವರಿಗೆ ಸಹಾಯ ಮಾಡುವುದನ್ನು ಕಾಣಬಹುದು. ಕೈ ಕೈ ಹಿಡಿದು ಬಂದರು. ಜೋಡಿ ಬಹಳ ಆತ್ಮೀಯವಾಗಿ, ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದರು. ರೆಸ್ಟೋರೆಂಟ್ ಪ್ರವೇಶಿಸುವ ಮೊದಲು ಶಿಲ್ಪಾ ಶೆಟ್ಟಿ ತಮ್ಮ ಮಾಸ್ಕ್ ತೆಗೆದು, ಪಾಪರಾಜಿಗಳಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿ ಮುನ್ನಡೆದರು.

ಇದನ್ನೂ ಓದಿ: ಕಣ್ಣೋಟದಲ್ಲೇ ಕೊಲ್ಲುವ ಚೆಲುವೆ: ತಮನ್ನಾ ಭಾಟಿಯಾ ಸೌಂದರ್ಯ ಕಣ್ತುಂಬಿಕೊಂಡ ನೆಟ್ಟಿಗರು

ಮಾಸ್ಕ್ ಕಪಲ್​ ವಿಡಿಯೋ ವೈರಲ್​ ಆಗುತ್ತಿದ್ದು, ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು, ಶಿಲ್ಪಾ ತಮ್ಮ ಪತಿಯನ್ನು ಅನುಸರಿಸುತ್ತಿರುವಂತೆ ತೋರುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ತಮಾಷೆಯಾಗಿ ಅವರನ್ನು ಟಿವಿ ಶೋ ಪವರ್ ರೇಂಜರ್ಸ್‌ಗೆ ಹೋಲಿಸಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರ ಹೊಸ ನೋಟ, ರಾಜ್ ಕುಂದ್ರಾ ಅವರ ಮುಂಬರುವ ಚಿತ್ರದ ಪ್ರಚಾರದ ಭಾಗವಾಗಿರಬಹುದು ಎಂದು ಹಲವರು ಅಂದಾಜಿಸಿದ್ದಾರೆ. ಈ ಚಿತ್ರ ರಾಜ್ ಕುಂದ್ರಾ ಅವರ ಕಾನೂನು ಹೋರಾಟ ಮತ್ತು ಅವರು ಜೈಲಿನಲ್ಲಿದ್ದ ಸಮಯದ ಸುತ್ತ ಸುತ್ತುತ್ತದೆ. ನವೆಂಬರ್ 3 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ರಾಜ್​​​ ಘೋಷಿಸಿದ್ದಾರೆ. ಇನ್ನು ಶಿಲ್ಪಾ ಶೆಟ್ಟಿ ಕೊನೆಯದಾಗಿ ಸುಖಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.