ETV Bharat / entertainment

ಫೇಸ್​ ಮಾಸ್ಕ್​​ಗೆ ಗುಡ್​ ಬೈ: ಸಾರ್ವಜನಿಕರಿಗೆ ದರ್ಶನ ಕೊಟ್ಟ ರಾಜ್​​ ಕುಂದ್ರಾ.. ಶಿಲ್ಪಾ ಶೆಟ್ಟಿ ಪತಿಯ ವಿಡಿಯೋ ವೈರಲ್​ - UT 69 trailer

ಉದ್ಯಮಿ ರಾಜ್ ಕುಂದ್ರಾ ಈಗ ಫೇಸ್​ ಮಾಸ್ಕ್ ಇಲ್ಲದೇ ಓಡಾಡಲು ಪ್ರಾರಂಭಿಸಿದ್ದಾರೆ.

Raj Kundra - Shilpa shetty
ರಾಜ್​ ಕುಂದ್ರಾ - ಶಿಲ್ಪಾ ಶೆಟ್ಟಿ
author img

By ETV Bharat Karnataka Team

Published : Oct 19, 2023, 12:41 PM IST

ಹಿಂದಿ ಚಿತ್ರರಂಗದ ಸುಂದರ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಪ್ರಕರಣದಲ್ಲಿ ಸಿಲುಕಿದ್ದ ರಾಜ್​​ ಕುಂದ್ರಾ ಜೈಲಿನಿಂದ ಹೊರಬಂದ ನಂತರ ಕಂಪ್ಲೀಟ್​​ ಫೇಸ್ ಮಾಸ್ಕ್ ಧರಿಸಿಯೇ ಓಡಾಡುತ್ತಿದ್ದರು. ಇದೇ ಮೊದಲ ಬಾರಿಗೆ ರಾಜ್ ಕುಂದ್ರಾ ಮಾಸ್ಕ್ ಇಲ್ಲದೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ದೃಶ್ಯವೂ ಕಂಡುಬಂತು.

ಉದ್ಯಮಿ ರಾಜ್ ಕುಂದ್ರಾ ಅವರು ತಮ್ಮ ಚೊಚ್ಚಲ ಸಿನಿಮಾ 'UT 69'ನ ಟ್ರೇಲರ್ ಅನ್ನು ಬುಧವಾರ ಅನಾವರಣಗೊಳಿಸಿದ್ದಾರೆ. ಟ್ರೇಲರ್ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದೆ. ಟ್ರೇಲರ್ ಬಿಡುಗಡೆಯಾದ ಮರುದಿನ, ಅಂದರೆ ಗುರುವಾರ, ರಾಜ್ ಕುಂದ್ರಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳು ಕ್ಯಾಮರಾ ಕಣ್ಣಲ್ಲಿ ಖ್ಯಾತ ಉದ್ಯಮಿ ಸೆರೆಯಾಗಿದ್ದು, ಫೇಸ್​ ಮಾಸ್ಕ್ ಇಲ್ಲದೇ ಕಾಣಿಸಿಕೊಂಡಿದ್ದಾರೆ. ಪಾಪರಾಜಿಯೋರ್ವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ, ರಾಜ್ ಕುಂದ್ರಾ ಅವರ 'ವಿದೌಟ್ ಮಾಸ್ಕ್' ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ, ರಾಜ್ ಕುಂದ್ರಾ ಬ್ಲ್ಯಾಕ್ ಟೀ ಶರ್ಟ್ ಆ್ಯಂಡ್ ಬ್ಲ್ಯೂ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸನ್‌ಗ್ಲಾಸ್, ಬ್ಯಾಗ್‌ನೊಂದಿಗೆ ರಾಜ್ ತಮ್ಮ ಹ್ಯಾಂಡ್​ಸಮ್​​ ಲುಕ್ ಅನ್ನು ಪೂರ್ಣಗೊಳಿಸಿದ್ದಾರೆ. ವಿಡಿಯೋ ವೈರಲ್​​ ಆಗುತ್ತಿದ್ದಂತೆ, ಸೋಷಿಯಲ್​ ಮೀಡಿಯಾ ಯೂಸರ್ಸ್ ರಿಯಾಕ್ಷನ್ ಕೊಡಲು ಪ್ರಾರಂಭಿಸಿದ್ದಾರೆ. 'ಪ್ರತೀ ಮನುಷ್ಯನು ತಪ್ಪು ಮಾಡುತ್ತಾನೆ, ಆದ್ರೆ ಆ ಮನುಷ್ಯನೇ ತಪ್ಪು ಎಂದು ಅರ್ಥವಲ್ಲ' ಎಂದು ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತೆರೆಗಪ್ಪಳಿಸಿದ 'ಲಿಯೋ': ಮಿಶ್ರ ಪ್ರತಿಕ್ರಿಯೆ ವ್ಯಕ್ತ - ಆರಂಭಿಕ ಟ್ವಿಟರ್ ವಿಮರ್ಶೆ ಇಲ್ಲಿದೆ

'UT 69' 2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪ ಕೇಸ್​ನಲ್ಲಿ ಉದ್ಯಮಿ ರಾಜ್ ಕುಂದ್ರಾ ಸಿಲುಕಿದ್ದು ನಿಮಗೆ ತಿಳಿದೇ ಇದೆ. 2021ರಲ್ಲಿ ಎರಡು ತಿಂಗಳು ಜೈಲುವಾಸ ಅನುಭವಿಸಿದ್ದ ರಾಜ್​ ಕುಂದ್ರಾ ಅವರ ಕಥೆಯನ್ನು 'ಯುಟಿ 69' ಚಿತ್ರ ಹೇಳಲಿದೆ. ಉದ್ಯಮಿ ರಾಜ್​ ಕುಂದ್ರಾ ನಟನೆಯ ಚೊಚ್ಚಲ ಚಿತ್ರ ಇದಾಗಿದ್ದು, ನಿನ್ನೆ ಟ್ರೇಲರ್​ ಅನಾವರಣಗೊಂಡಿದೆ.

ಇದನ್ನೂ ಓದಿ: 'UT 69' ಟ್ರೇಲರ್​​​ ಲಾಂಚ್​ ಈವೆಂಟ್​ನಲ್ಲಿ ಕಣ್ಣೀರಿಟ್ಟ ಶಿಲ್ಪಾ ಶೆಟ್ಟಿ ಪತಿ - ಮೊದಲ ಬಾರಿ ಫೇಸ್ ಮಾಸ್ಕ್ ತೆಗೆದ ರಾಜ್ ಕುಂದ್ರಾ

ಯುಟಿ 69 ಟ್ರೇಲರ್​ ರಿಲೀಸ್​ ಈವೆಂಟ್​​ನಲ್ಲಿ, ರಾಜ್ ಕುಂದ್ರಾ ಭಾವುಕರಾಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಅವರ ಎಮೋಶನಲ್​ ವಿಡಿಯೋಗಳು ವೈರಲ್​ ಆಗಿವೆ. ಪ್ರಕರಣ ತಮ್ಮ ಕುಟುಂಬಸ್ಥರ ಮೇಲೆ ಪರಿಣಾಮ ಬೀರಿತೆಂದು ಹೇಳಿಕೊಂಡು, ಎಮೋಶನಲ್​ ಆಗಿದ್ದಾರೆ. ಜೊತೆಗೆ ನಿನ್ನೆಯ ಈವೆಂಟ್​ನಲ್ಲಿ ಮೊದಲ ಬಾರಿ ಫೇಸ್ ಮಾಸ್ಕ್ ಅನ್ನು ಸಂಪೂರ್ಣ ತೆರೆದಿದ್ದರು. ಇಂದು ವಿಮಾನ ನಿಲ್ದಾಣದಲ್ಲಿ ಮಾಸ್ಕ್ ಇಲ್ಲದೇ ಕಾಣಿಸಿಕೊಂಡಿದ್ದಾರೆ. ವಿಡಿಯೋಗಳು ವೈರಲ್​ ಆಗುತ್ತಿದೆ. ಯುಟಿ 69 ನವೆಂಬರ್ 3 ರಂದು ತೆರೆಗಪ್ಪಳಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.