ETV Bharat / entertainment

Toby: ರಾಜ್​ ಬಿ ಶೆಟ್ಟಿ 'ಟೋಬಿ' ಚಿತ್ರದ ಟ್ರೇಲರ್​ಗೆ ಮುಹೂರ್ತ ಫಿಕ್ಸ್​.. - ಟೋಬಿ ಸಿನಿಮಾದ ಟ್ರೇಲರ್

Toby trailer: 'ಟೋಬಿ' ಸಿನಿಮಾದ ಟ್ರೇಲರ್​ ಆಗಸ್ಟ್​ 4 ರಂದು ಸಂಜೆ 4 ಗಂಟೆ 5 ನಿಮಿಷಕ್ಕೆ ಬಿಡುಗಡೆಯಾಗಲಿದೆ.

toby
'ಟೋಬಿ'
author img

By

Published : Jul 30, 2023, 8:09 PM IST

ಸ್ಯಾಂಡಲ್​ವುಡ್​ನಲ್ಲಿ ನಟ ಮತ್ತು ನಿರ್ದೇಶಕನಾಗಿ ವಿಶೇಷ ರೀತಿಯಲ್ಲಿ ಗುರುತಿಸಿಕೊಂಡವರು ರಾಜ್​ ಬಿ ಶೆಟ್ಟಿ. ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಟೋಬಿ'. ಕುರುಚಲು ಗಡ್ಡ, ಮೂಗಿಗೆ ದೊಡ್ಡ ಮೂಗುತಿ, ತಲೆ ಹಾಗೂ ಮೂಗಿನಲ್ಲಿ ರಕ್ತದ ಕಲೆಯಿಂದ ಕೂಡಿರುವ ಗಾಯ.. ಇದುವೇ ಟೋಬಿ ಸಿನಿಮಾದ ಫಸ್ಟ್ ಲುಕ್​ ವಿಶೇಷ. ಇತ್ತೀಚೆಗಷ್ಟೇ ಸಿನಿಮಾದ ಶೀರ್ಷಿಕೆ, ಮೋಷನ್​ ಪೋಸ್ಟರ್​, ಫಸ್ಟ್​ ಲುಕ್​ ಬಿಡುಗಡೆಯಾಗಿತ್ತು. ಇದೀಗ 'ಟೋಬಿ' ಚಿತ್ರದ ಟ್ರೇಲರ್​ ದಿನಾಂಕ ಘೋಷಣೆಯಾಗಿದೆ.

ತಮ್ಮ ಸಹಜ ಅಭಿನಯದ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ ನಟನೆಯ 'ಟೋಬಿ' ಚಿತ್ರ ಸದ್ಯ ಗಾಂಧಿನಗರದಲ್ಲಿ ಟಾಕ್ ಆಫ್ ದಿ‌ ಟೌನ್ ಆಗಿದೆ‌. 'ಗರುಡ ಗಮನ ವೃಷಭ ವಾಹನ'ದಂತಹ ಸೂಪರ್​ ಹಿಟ್​ ಸಿನಿಮಾ ನೀಡಿರುವ ರಾಜ್​ ಇದೀಗ 'ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು' ಎನ್ನುತ್ತಾ ನಿಮ್ಮ ಮುಂದೆ ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಸದ್ದಿಲ್ಲದೇ ಚಿತ್ರದ ಶೂಟಿಂಗ್​ ಕೂಡ ಮುಕ್ತಾಯಗೊಂಡಿದೆ. ಸದ್ಯ ಚಿತ್ರತಂಡ ಟ್ರೇಲರ್​ಗೆ ಮುಹೂರ್ತ ಫಿಕ್ಸ್​ ಮಾಡಿದೆ.

ಆಗಸ್ಟ್​ 4 ರಂದು ಟ್ರೇಲರ್​.. ಟೋಬಿ ಸಿನಿಮಾದ ಟ್ರೇಲರ್​ ಆಗಸ್ಟ್​ 4 ರಂದು ಸಂಜೆ 4 ಗಂಟೆ 5 ನಿಮಿಷಕ್ಕೆ ಬಿಡುಗಡೆಯಾಗಲಿದೆ. ಈ ಬಗ್ಗೆ ರಾಜ್​ ಬಿ ಶೆಟ್ಟಿ ಸೋಷಿಯಲ್​ ಮೀಡಿಯಾ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ. ಅಂತೂ ಸಿನಿ ಪ್ರೇಕ್ಷಕರು ಕಾಯುತ್ತಿರುವ ಕ್ಷಣಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಪೋಸ್ಟರ್​ನಿಂದಲೇ ಕುತೂಹಲ ಹುಟ್ಟಿಸಿರುವ ಟೋಬಿ ಟ್ರೇಲರ್​ ಹೇಗಿರಬಹುದು? ಎಂಬ ಮುಗಿಲೆತ್ತರದ ನಿರೀಕ್ಷೆ ಜನರಲ್ಲಿದೆ.

'ಟೋಬಿ' ಸಿನಿಮಾ ಇದೇ ಆಗಸ್ಟ್​ 25 ರಂದು ತೆರೆ ಕಾಣಲಿದೆ. ಟೋಬಿ ಮೂಲ ಕಥೆ ಟಿ.ಕೆ ದಯಾನಂದ್ ಅವರದ್ದು. ಈ ಸಿನಿಮಾವನ್ನು ಬಾಸಿಲ್​ ನಿರ್ದೇಶಿಸುತ್ತಿದ್ದಾರೆ. 'ಲೈಟರ್​ ಬುದ್ಧ ಫಿಲ್ಮ್ಸ್'​ನಡಿ 'ಗರುಡ ಗಮನ ವೃಷಭ ವಾಹನ' ಮೂಡಿಬಂದಿತ್ತು. ಅದೇ ಬ್ಯಾನರ್​ನಲ್ಲಿ ರವಿ ರೈ ಕಳಸ 'ಟೋಬಿ'ಯನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಜೊತೆಗೆ 'ಅಗಸ್ತ್ಯ ಫಿಲ್ಮ್ಸ್'​ ಕೂಡ ಇದಕ್ಕೆ ಸಾಥ್​ ನೀಡಿದೆ. ಪ್ರತಿಷ್ಠಿತ ಕೆ. ವಿ. ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದೆ. ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ ಮತ್ತು ಸಂಕಲನ ಹಾಗೂ ಅರ್ಜುನ್ ರಾಜ್ ಮತ್ತು ರಾಜಶೇಖರ್ ಸಾಹಸ ನಿರ್ದೇಶನ ಇರಲಿದೆ. ಅಲ್ಲದೇ 'ಟೋಬಿ' ಬಿಗ್​ ಬಜೆಟ್​ ಚಿತ್ರವಾಗಿದ್ದು, ರಾಜ್​ ಬಿ ಶೆಟ್ಟಿ ತಂಡ ಕೋಟಿಗಟ್ಟಲೆ ದುಡ್ಡು ಹಾಕಿ ಚಿತ್ರ ಸಿದ್ಧಪಡಿಸುತ್ತಿದ್ದಾರೆ.

ಇದೊಂದು ಪಕ್ಕಾ ಮಾಸ್​ ಸಿನಿಮಾವಾಗಿರಲಿದೆ. ಮೋಷನ್​ ಪೋಸ್ಟರ್​ ಮತ್ತು ಫಸ್ಟ್​ ಲುಕ್​ ಪೋಸ್ಟರ್​ ಕೂಡ ಈ ಮಾತನ್ನು ಸಾಬೀತು ಪಡಿಸಿದೆ. ಚಿತ್ರದಲ್ಲಿ ರಾಜ್​ ಜೊತೆ ಸಂಯುಕ್ತಾ ಹೊರನಾಡು ಮತ್ತು ಚೈತ್ರಾ ಆಚಾರ್​ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಕೂಡ ಇದ್ದಾರೆ.

ಇದನ್ನೂ ಓದಿ: ದಾಖಲೆ ಬರೆದ 'ವೀರ ಸಿಂಹ ರೆಡ್ಡಿ'.. ಒಂದೇ ಥಿಯೇಟರ್​ನಲ್ಲಿ 200 ದಿನ ಪ್ರದರ್ಶನ ಕಂಡ ಬಾಲಯ್ಯ ಸಿನಿಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.