ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕರಾಗಿ ವಿಶೇಷ ರೀತಿಯಲ್ಲಿ ಗುರುತಿಸಿಕೊಂಡವರು ರಾಜ್ ಬಿ ಶೆಟ್ಟಿ. ಕೊಂಚ ಭಿನ್ನ ಕಥೆಯನ್ನೇ ಪ್ರತಿ ಬಾರಿಯೂ ಆಯ್ದುಕೊಂಡು, ಸಿನಿಮಾ ಮಾಡುತ್ತ ಬಣ್ಣದ ಲೋಕದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇದೀಗ 'ಟೋಬಿ' ಎಂಬ ಹೊಸ ಕಥೆಗೆ ಜೀವ ತುಂಬಲು ಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಶೀರ್ಷಿಕೆ ಮತ್ತು ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
'ಟೋಬಿ- ಮಾರಿ ಮಾರಿ, ಮಾರಿಗೆ ದಾರಿ' ಎಂಬ ವಿಭಿನ್ನ ಟೈಟಲ್ ಹೊಂದಿರುವ ಈ ಚಿತ್ರವನ್ನು ರಾಜ್ ಅವರೇ ಬರೆದಿದ್ದು, ನಾಯಕನಾಗಿಯೂ ನಟಿಸಲಿದ್ದಾರೆ. ಈಗಾಗಲೇ 'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ'ದಂತಹ ಸೂಪರ್ ಹಿಟ್ ಸಿನಿಮಾ ನೀಡಿರುವ ರಾಜ್ ಇದೀಗ 'ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು' ಎನ್ನುತ್ತಾ ನಿಮ್ಮ ಮುಂದೆ ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದೀಗ ಸದ್ದಿಲ್ಲದೇ ಚಿತ್ರದ ಶೂಟಿಂಗ್ ಕೂಡ ಮುಗಿಸಿದ್ದು, ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.
-
Time to halt your clocks and... feel the fever!! Lifting the drape on the fiery rendition of #𝐓𝐨𝐛𝐲𝐅𝐢𝐫𝐬𝐭𝐋𝐨𝐨𝐤 🤗❤️🔥
— Raj B Shetty (@RajbShettyOMK) June 29, 2023 " class="align-text-top noRightClick twitterSection" data="
𝐈𝐍 𝐂𝐈𝐍𝐄𝐌𝐀𝐒 𝟐𝟓 𝐀𝐔𝐆𝐔𝐒𝐓, 𝟐𝟎𝟐𝟑 #TobyOnAug25 @rajbshettyOMK #BasilALChalakkal @Chaithra_Achar_ @samyuktahornad #PraveenShriyan pic.twitter.com/sJlJVCMejU
">Time to halt your clocks and... feel the fever!! Lifting the drape on the fiery rendition of #𝐓𝐨𝐛𝐲𝐅𝐢𝐫𝐬𝐭𝐋𝐨𝐨𝐤 🤗❤️🔥
— Raj B Shetty (@RajbShettyOMK) June 29, 2023
𝐈𝐍 𝐂𝐈𝐍𝐄𝐌𝐀𝐒 𝟐𝟓 𝐀𝐔𝐆𝐔𝐒𝐓, 𝟐𝟎𝟐𝟑 #TobyOnAug25 @rajbshettyOMK #BasilALChalakkal @Chaithra_Achar_ @samyuktahornad #PraveenShriyan pic.twitter.com/sJlJVCMejUTime to halt your clocks and... feel the fever!! Lifting the drape on the fiery rendition of #𝐓𝐨𝐛𝐲𝐅𝐢𝐫𝐬𝐭𝐋𝐨𝐨𝐤 🤗❤️🔥
— Raj B Shetty (@RajbShettyOMK) June 29, 2023
𝐈𝐍 𝐂𝐈𝐍𝐄𝐌𝐀𝐒 𝟐𝟓 𝐀𝐔𝐆𝐔𝐒𝐓, 𝟐𝟎𝟐𝟑 #TobyOnAug25 @rajbshettyOMK #BasilALChalakkal @Chaithra_Achar_ @samyuktahornad #PraveenShriyan pic.twitter.com/sJlJVCMejU
ಹೀಗಿದೆ ಮೊದಲ ನೋಟ.. 'ಟೋಬಿ' ಚಿತ್ರದ ಮೋಷನ್ ಪೋಸ್ಟರ್ನಲ್ಲಿ ಕುರಿಯ ಮೂಗಿಗೆ ದೊಡ್ಡದಾದ ಮೂಗುತಿ ಹಾಕಿ ತೋರಿಸಲಾಗಿತ್ತು. ಇದೀಗ ಬಿಡುಗಡೆಯಾದ ಫಸ್ಟ್ ಲುಕ್ನಲ್ಲಿ ರಾಜ್ ಬಿ ಶೆಟ್ಟಿ ಮೂಗಿನಲ್ಲಿ ಅದೇ ಮೂಗುತಿ ಇರುವುದನ್ನು ಕಾಣಬಹುದು. ಮುಖದೆಲ್ಲೆಲ್ಲಾ ರಕ್ತ, ಸೀಳಿರುವ ಗುರುತುಗಳು, ಒಟ್ಟಾರೆಯಾಗಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಿನಿಮಾ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ.
ಶೀಘ್ರದಲ್ಲೇ 'ಟೋಬಿ' ರಿಲೀಸ್ : 'ಟೋಬಿ' ಸಿನಿಮಾ ಇದೇ ಆಗಸ್ಟ್ 25 ರಂದು ತೆರೆ ಕಾಣಲಿದೆ. ಟೋಬಿ ಮೂಲ ಕಥೆ ಟಿ.ಕೆ ದಯಾನಂದ್ ಅವರದ್ದು. ಈ ಸಿನಿಮಾವನ್ನು ಬಾಸಿಲ್ ನಿರ್ದೇಶಿಸುತ್ತಿದ್ದಾರೆ. 'ಲೈಟರ್ ಬುದ್ಧ ಫಿಲ್ಮ್ಸ್'ನಡಿ 'ಗರುಡ ಗಮನ ವೃಷಭ ವಾಹನ' ಮೂಡಿಬಂದಿತ್ತು. ಅದೇ ಬ್ಯಾನರ್ನಲ್ಲಿ ರವಿ ರೈ ಕಳಸ 'ಟೋಬಿ'ಯನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಜೊತೆಗೆ 'ಅಗಸ್ತ್ಯ ಫಿಲ್ಮ್ಸ್' ಕೂಡ ಇದಕ್ಕೆ ಸಾಥ್ ನೀಡಿದೆ. ಪ್ರತಿಷ್ಠಿತ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದೆ. ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ ಮತ್ತು ಸಂಕಲನ ಹಾಗೂ ಅರ್ಜುನ್ ರಾಜ್ ಮತ್ತು ರಾಜಶೇಖರ್ ಸಾಹಸ ನಿರ್ದೇಶನ ಇರಲಿದೆ. ಅಲ್ಲದೇ 'ಟೋಬಿ' ಬಿಗ್ ಬಜೆಟ್ ಚಿತ್ರವಾಗಿದ್ದು, ರಾಜ್ ಬಿ ಶೆಟ್ಟಿ ತಂಡ ಕೋಟಿಗಟ್ಟಲೆ ದುಡ್ಡು ಹಾಕಿ ಚಿತ್ರ ಸಿದ್ಧಪಡಿಸುತ್ತಿದ್ದಾರೆ.
ಇದೊಂದು ಪಕ್ಕಾ ಮಾಸ್ ಸಿನಿಮಾವಾಗಿರಲಿದೆ. ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಕೂಡ ಈ ಮಾತನ್ನು ಸಾಬೀತು ಪಡಿಸಿದೆ. ಚಿತ್ರದಲ್ಲಿ ರಾಜ್ ಜೊತೆ ಸಂಯುಕ್ತಾ ಹೊರನಾಡು ಮತ್ತು ಚೈತ್ರಾ ಆಚಾರ್ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಕೂಡ ಇದ್ದಾರೆ.
ಇದನ್ನೂ ಓದಿ: Satyaprem Ki Katha: ಎಲ್ಲೇ ಹೋದರೂ ಪತ್ನಿಯೊಂದಿಗೆ ಸಿದ್ದಾರ್ಥ್; ನೆಟ್ಟಿಗರ ಗಮನ ಸೆಳೆದ ಜೋಡಿ