ವಿಜ್ಞಾನ ಮತ್ತು ಪುರಾಣ ಮಿಶ್ರಣದ ಧ್ರುವ 369 ಸಿನಿಮಾದ ಮುಹೂರ್ತ ಸಮಾರಂಭ ವಿಜಯನಗರದ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ರಮೇಶ್ ಭಟ್ ಕ್ಲಾಪ್ ಮಾಡಿದರೆ, 'ಟಕ್ಕರ್' ಖ್ಯಾತಿಯ ನಟ ಮನೋಜ್‌ಕುಮಾರ್ ಕ್ಯಾಮರ ಆನ್ ಮಾಡಿದರು.
ಯುವ ನಿರ್ದೇಶಕ ಶಂಕರ್‌ನಾಗ್.ಎಸ್.ಎಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪ್ರಥಮ ಬಾರಿ ರಾಘವೇಂದ್ರ ರಾಜ್‌ಕುಮಾರ್ ರಾಜ್ಯಪಾಲರಾಗಿ ಅಭಿನಯಿಸುತ್ತಿದ್ದಾರೆ. ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದರಿಂದ ಶುಭ ಸಂದೇಶವನ್ನು ವಿಡಿಯೋ ಮೂಲಕ ರವಾನಿಸಿದ್ದರು.
ಭೂಮಿಯಿಂದ ತುಂಬಾ ಚೆನ್ನಾಗಿ ಪರಿಪೂರ್ಣವಾಗಿ ಕಾಣಿಸುವುದು ಧ್ರುವ ನಕ್ಷತ್ರ. 369 ಸಂಖ್ಯೆ ಎಂಬುದು ಸಾರ್ವತ್ರಿಕವಾಗಿದೆ. ಅದಕ್ಕೆ ಅದರದ್ದೇ ಆಯಾಮವಿದೆ. ಮತ್ತೊಂದು ಕಡೆ ಮ್ಯಾಜಿಕ್ ನಂಬರ್ ಅಂತಲೂ ಕರೆಯಬಹುದು. ಕಥೆಯಲ್ಲಿ ಇವರೆಡು ಸೇರಿದರೆ ಏನು ಆಗುತ್ತದೆ ಎಂಬುದನ್ನು ಹೇಳಲಾಗುತ್ತಿದೆ. ಸಾಧನೆ ಮಾಡಬೇಕು ಅಂದುಕೊಂಡರೆ ಏನು ಬೇಕಾದರೂ ಮಾಡಬಹುದು. ದೂರದ ಲೋಕಕ್ಕೆ ಹೋಗಿ ಹನುಮಂತ ಹಣ್ಣು ತೆಗೆದುಕೊಂಡು ಬಂದಿದ್ದ ಅಂತಾ ಹೇಳಲಾಗಿದೆ. ಅದೇ ರೀತಿ ಚಿತ್ರವು ಫ್ಯಾಂಟಸಿ ತರಹ ಸಾಗುತ್ತದೆ.
ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅಲ್ಲದೇ ರಮೇಶ್ ಭಟ್, ಪ್ರತಿಭಾ, ಅತೀಶ್.ಎಸ್.ಶೆಟ್ಟಿ, ಪ್ರೇಮ್ ಕನ್ನಡ ರಾಜು, ಅರವಿಂದ್ ಸಾಗರ್, ರೋಹನ್ ಮೂಡಬಿದ್ರೆ, ದೀಪಕ್‌ಶೆಟ್ಟಿ, ಕೆ.ಸುಬ್ಬಣ್ಣಭಟ್, ಚಂದನ, ರಮ್ಯಾ, ಚಂದ್ರಿಕಾ, ಭಾಸ್ಕರ್ ಮಣಿಪಾಲ್ ನಟಿಸುತ್ತಿದ್ದಾರೆ.
ಮೂರು ಹಾಡುಗಳಿಗೆ ಸತೀಶ್ ಬಾಬು ಸಂಗೀತ ಸಂಯೋಜಿಸುತ್ತಿದ್ದಾರೆ. ಹರ್ಷ ಪದ್ಯಾಣ ಛಾಯಾಗ್ರಹಣ ಚಿತ್ರಕ್ಕಿದೆ. ಶೇ. 40ರಷ್ಟು ಸಿಜಿ ಕೆಲಸ ಇರಲಿದೆ. ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮಂಗಳೂರಿನ ಶ್ರೀಕೃಷ್ಣ ಕಾಂತಿಲ ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಉಡುಪಿ, ಮುಡೆಶ್ವರ, ಕೋಲಾರ, ಚಿಕ್ಕಬಳ್ಳಾಪುರ ಕಡೆಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜಿಸಿದೆ.
ಇದನ್ನೂ ಓದಿ: ಮೊಟ್ಟಮೊದಲ ಬಾರಿಗೆ ಕಿರುತೆರೆಗೆ ಬಂದ್ರು ರಾಘವೇಂದ್ರ ರಾಜ್‌ಕುಮಾರ್