ETV Bharat / entertainment

'ಪರಿಣಿತಿ ಚೋಪ್ರಾರನ್ನು ನನಗಾಗಿ ಕೊಟ್ಟಿದ್ದಕ್ಕೆ ದೇವರಿಗೆ ಧನ್ಯವಾದ': ಸಂಸದ ರಾಘವ್​ ಚಡ್ಡಾ - ರಾಘವ್​ ಪರಿಣಿತಿ ಡೇಟಿಂಗ್​

Raghav Chadha Parineeti Chopra: ಸಂಸದ ರಾಘವ್​ ಚಡ್ಡಾ ಭಾವಿ ಪತ್ನಿ ಪರಿಣಿತಿ ಚೋಪ್ರಾ ಕುರಿತು ಮಾತನಾಡಿದ್ದಾರೆ.

Raghav Chadha Parineeti Chopra
ರಾಘವ್​ ಚಡ್ಡಾ ಪರಿಣಿತಿ ಚೋಪ್ರಾ
author img

By ETV Bharat Karnataka Team

Published : Sep 8, 2023, 7:45 PM IST

ಬಾಲಿವುಡ್​ ಮತ್ತೊಂದು ಅದ್ಧೂರಿ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಲಿದೆ. ನಟಿ ಪರಿಣಿತಿ ಚೋಪ್ರಾ ಮತ್ತು ಆಮ್​ ಆದ್ಮಿ ಪಕ್ಷದ ಯುವ ನಾಯಕ ರಾಘವ್​ ಚಡ್ಡಾ ಮದುವೆಗೆ ದಿನ ನಿಗದಿ ಆಗಿರೋದು ನಿಮಗೆ ತಿಳಿದಿರುವ ವಿಚಾರ. ಇದೇ ಸೆಪ್ಟೆಂಬರ್​ 23 ಮತ್ತು 24 ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಹೋಟೆಲ್​ ಲೀಲಾ ಪ್ಯಾಲೆಸ್​ ಮತ್ತು ಉದಯವಿಲಾಸ್​ನಲ್ಲಿ ವಿವಾಹ ಶಾಸ್ತ್ರಗಳು ನಡೆಯಲಿದೆ. ಮದುವೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಗ್ಗೆ ಸಂಸದ ರಾಘವ್​ ಚಡ್ಡಾ ಅವರಿಗೆ ಪ್ರಶ್ನೆ ಎದುರಾಗಿದ್ದು, 'ಬಹಳ ಸಂತೋಷವಾಗಿದ್ದೇನೆ' ಎಂದು ತಿಳಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಆಮ್​ ಆದ್ಮಿ ಪಕ್ಷದ ಸಂಸದ ರಾಘವ್​ ಚಡ್ಡಾ ತಮ್ಮ ಪ್ರೀತಿ, ಮದುವೆ ಬಗ್ಗೆ ಮಾತನಾಡಿದರು. ತಮ್ಮಿಬ್ಬರ ನಡುವೆ ಒಂದು ವಿಶೇಷವಾದ, ಅದ್ಭುತ ಸಂಬಂಧ ಬೆಳೆದಿದೆ ಎಂದು ತಿಳಿಸಿದರು. ಜೀವನದಲ್ಲಿ ಪರಿಣಿತಿ ಚೋಪ್ರಾ ಸಿಕ್ಕಿರುವುದನ್ನು ಒಂದು ದೈವಿಕ ಕೊಡುಗೆ ಎಂದು ವರ್ಣಿಸಿದರು.

''ನಾವು ಭೇಟಿಯಾದೆವು. ಅದೊಂದು ಮ್ಯಾಜಿಕಲ್​ ಕ್ಷಣ. ಆ ಮೀಟಿಂಗ್​ ಬಹಳ ನ್ಯಾಚುರಲ್​ ಆಗೇ ಇತ್ತು. ನನ್ನ ಜೀವನಕ್ಕೆ ಪರಿಣಿತಿ ಅವರನ್ನು ಕೊಟ್ಟಿದ್ದಕ್ಕಾಗಿ ಆ ಭಗವಂತನಿಗೆ ಸದಾ ಧನ್ಯವಾದ ತಿಳಿಸುತ್ತೇನೆ. ನನಗೆ ಇದೊಂದು ದೊಡ್ಡ ಆಶೀರ್ವಾದ. ನಾನು ಪರಿಣಿತಿ ಅವರನ್ನು ಜೀವನ ಸಂಗಾತಿಯಾಗಿ ಹೊಂದಿರುವುದಕ್ಕೆ ಬಹಳ ಖುಷಿಯಾಗಿದ್ದೇನೆ. ಈ ಮೊದಲೇ ತಿಳಿಸಿದಂತೆ ಅವರನ್ನು ನನಗಾಗಿ ಕೊಟ್ಟಿದ್ದಕ್ಕೆ ಆ ದೇವರಲ್ಲಿ ಧನ್ಯವಾದ ತಿಳಿಸುತ್ತೇನೆ'' - ಸಂಸದ ರಾಘವ್​ ಚಡ್ಡಾ.

ಸಂದರ್ಶನದಲ್ಲಿ ಸಂಸದರಿಗೆ ಮದುವೆ ಸಿದ್ಧತೆ ಬಗ್ಗೆ ಕೇಳಲಾಯಿತು. ಈ ಬಗ್ಗೆ ರಾಘವ್​ ಸಂತಸ ವ್ಯಕ್ತಪಡಿಸಿದರು. ಇಡೀ ದೇಶಕ್ಕಿಂತ ಹೆಚ್ಚು ಖುಷಿಯಾಗಿದ್ದೇನೆ ಎಂದು ತಿಳಿಸಿದರು. ಮದುವೆ ಇದೇ ಸೆಪ್ಟೆಂಬರ್​ 23 ಮತ್ತು 24 ರಂದು ರಾಜಸ್ಥಾನದಲ್ಲಿ ನೆರವೇರಲಿದೆ. ಅದ್ಧೂರಿ ವಿವಾಹದಲ್ಲಿ ಭಾಗಿಯಾಗಲು ರಾಜಕೀಯ ಮತ್ತು ಬಾಲಿವುಡ್​ ವಲಯದ ಗಣ್ಯರು ಉದಯಪುರಕ್ಕೆ ಆಗಮಿಸಲಿದ್ದಾರೆ. ಸಿದ್ಧತೆಗಳು ಜೋರಾಗೇ ನಡೆಯುತ್ತಿದೆ. ಗಣ್ಯಾತಿಗಣ್ಯರು ಆಗಮಿಸುವ ಹಿನ್ನೆಲೆ, ಹೋಟೆಲ್​ ಲೀಲಾ ಪ್ಯಾಲೆಸ್​ ಮತ್ತು ಉದಯವಿಲಾಸ್​ ಸುತ್ತಮುತ್ತ ಬಿಗಿ ಭದ್ರತೆ ವಹಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: Parineeti Raghav: ಈ ತಿಂಗಳಲ್ಲೇ ಹಸೆಮಣೆ ಏರಲಿದ್ದಾರೆ ರಾಘವ್ ಚಡ್ಡಾ - ಪರಿಣಿತಿ ಚೋಪ್ರಾ; ಮದುವೆ ಡೀಟೆಲ್ಸ್​ ಇಲ್ಲಿದೆ!

ರಾಘವ್​ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಬಹುಸಮಯದ ಗೆಳೆಯರು. ಸದ್ಯ ಪ್ರೀತಿಯಲ್ಲಿರುವ ಈ ಜೋಡಿ ಶೀಘ್ರದಲ್ಲೇ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಲಿದ್ದಾರೆ. ಮಾರ್ಚ್​​ ತಿಂಗಳಲ್ಲಿ ಈ ಜೋಡಿಯ ಡೇಟಿಂಗ್​ ವಿಚಾರ ಬೆಳಕಿಗೆ ಬಂತು. ಮೇ. 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದೇ 23 ಮತ್ತು 24 ರಂದು ಮದುವೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ: ಕಂಗನಾ ರಣಾವತ್​ಗೆ ಕಪಾಳಮೋಕ್ಷ ಮಾಡಬೇಕೆಂದ ಪಾಕಿಸ್ತಾನಿ ನಟಿ ನೌಶೀನ್​ ಶಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.