ETV Bharat / entertainment

ಅರಸಯ್ಯ ಪ್ರೇಮಪ್ರಸಂಗ ಚಿತ್ರದ ಪೋಸ್ಟರ್ ಬಿಡುಗಡೆ.. ಶುಭ ಕೋರಿದ ರಾಘಣ್ಣ - etv bharat kannada

ಪ್ರೆಂಚ್ ಬಿರಿಯಾನಿ ಖ್ಯಾತಿಯ ಮಹಂತೇಶ್ ಹಿರೇಮಠ ಮುಖ್ಯಪಾತ್ರದಲ್ಲಿ ನಟಿಸಿರುವ ಅರಸಯ್ಯ ಪ್ರೇಮಪ್ರಸಂಗ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದೆ. ರಾಘವೇಂದ್ರ ರಾಜ್ ಕುಮಾರ್ ಮತ್ತು ಮಂಗಳ ರಾಘವೇಂದ್ರ ರಾಜ್ ಕುಮಾರ್ ಬಿಡುಗಡೆಗೊಳಿಸಿದ್ದು, ತಂಡಕ್ಕೆ ಶುಭಹಾರೈಸಿದ್ದಾರೆ.

the poster of Arasayya Premaprasanga
ಅರಸಯ್ಯ ಪ್ರೇಮಪ್ರಸಂಗ ಚಿತ್ರದ ಪೋಸ್ಟರ್
author img

By

Published : Nov 7, 2022, 3:34 PM IST

ಮಹಂತೇಶ್ ಹಿರೇಮಠ ಮುಖ್ಯ ಪಾತ್ರದಲ್ಲಿ ನಟಿಸಿರುವ ಅರಸಯ್ಯ ಪ್ರೇಮಪ್ರಸಂಗ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದೆ. ರಾಘವೇಂದ್ರ ರಾಜ್ ಕುಮಾರ್ ಮತ್ತು ಮಂಗಳ ರಾಘವೇಂದ್ರ ರಾಜ್ ಕುಮಾರ್ ಬಿಡುಗಡೆಗೊಳಿಸಿದ್ದು, ತಂಡಕ್ಕೆ ಶುಭಹಾರೈಸಿದ್ದಾರೆ.

ಪ್ರೆಂಚ್ ಬಿರಿಯಾನಿ, ಗುರುಶಿಷ್ಯರು ಚಿತ್ರದ ಮೂಲಕ ಎಲ್ಲರ ಮನ ಸೆಳೆದಿರುವ ಮಹಂತೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ತಾರಾ ಬಳಗದಲ್ಲಿ ರಶ್ಮಿತಾ ಗೌಡ, ವಿಜಯ್ ಚೆಂಡೂರ್, ಪಿ.ಡಿ ಸತೀಶ್, ರಘು ರಮಣಕೊಪ್ಪ, ಜಹಂಗೀರ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರದ ಐದು ಹಾಡುಗಳಿಗೆ ಪ್ರವೀಣ್ - ಪ್ರದೀಪ್ ಸಂಗೀತ ನೀಡಿದ್ದಾರೆ.

Raghana released the poster of Arasayya Premaprasanga
ಅರಸಯ್ಯ ಪ್ರೇಮಪ್ರಸಂಗ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ರಾಘಣ್ಣ

ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನವಿದೆ. ಹರೀಶ್ ಹಾಗೂ ಜಿ.ವಿ. ಆರ್ ದೀಪು ಸಂಭಾಷಣೆ ಬರೆದಿದ್ದಾರೆ. ಮೇಘಶ್ರೀ ರಾಜೇಶ್ ಅವರು ಚಿತ್ರವನ್ನು ಕಮಲ ಪಿಕ್ಚರ್ಸ್​ ಅಡಿ ನಿರ್ಮಾಣ ಮಾಡಿದ್ದಾರೆ. ಮೇಘಶ್ರೀ ಮೊದಲ ಚಿತ್ರ ನಿರ್ಮಾಣ ಇದಾಗಿದ್ದು, ಪತಿ ರಾಜೇಶ್ ಸಾಥ್ ನೀಡಿದ್ದಾರೆ.

ಹಾಸನ, ಗೋಗೂರಿನ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಇದೀಗ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಚಿತ್ರದ ಟ್ರೈಟಲ್ ನಿಂದಲೇ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಕಾಂತಾರ ರೀತಿ 'ರೇಮೊ' ಹಿಟ್​ ಆಗಲಿ.. ಟ್ರೇಲರ್​ ರಿಲೀಸ್​ ಮಾಡಿ ಶುಭ ಹಾರೈಸಿದ ಹ್ಯಾಟ್ರಿಕ್ ಹೀರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.