ETV Bharat / entertainment

ಆರಕ್ಷಕರೊಂದಿಗೆ 'ರಾಣ' ಚಿತ್ರತಂಡ.. ಚಿತ್ರದುರ್ಗದಲ್ಲಿ ಸಿನಿಮಾ ಪ್ರಚಾರ ಜೋರು - ನಟ ಶ್ರೇಯಸ್ ಮಂಜು

ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿರುವ 'ರಾಣ' ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.

raana movie promotion
ರಾಣ ಸಿನಿಮಾ ಪ್ರಚಾರ
author img

By

Published : Nov 9, 2022, 7:56 PM IST

ಬಣ್ಣದ ಲೋಕದಲ್ಲಿ ಸಾಧಿಸಬೇಕು ಎಂಬ ಕನಸು ಹೊತ್ತು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಗಮನ ಸೆಳೆದಿರೋ ನಟ ಶ್ರೇಯಸ್ ಮಂಜು. ಪಡ್ಡೆಹುಲಿ ಎಂಬ ಚೊಚ್ಚಲ ಸಿನಿಮಾದಲ್ಲೇ ಸಿನಿ ಪ್ರಿಯರ ಹೃದಯ ಕದ್ದ ಶ್ರೇಯಸ್ ಅವರ ಮುಂದಿನ ಸಿನಿಮಾ 'ರಾಣ' ಬಿಡುಗಡೆಗೆ ಸಜ್ಜಾಗಿದೆ.

'ರಾಣ'..ಹೆಸರೇ ಹೇಳುವ ಹಾಗೆ ಇದೊಂದು ಔಟ್ ಅಂಡ್​ ಔಟ್ ಆ್ಯಕ್ಷನ್ ಸಿನಿಮಾ. ಇನ್ನೆರಡು ದಿನಗಳಲ್ಲಿ (ನವೆಂಬರ್ 11ರಂದು) ರಾಜ್ಯಾದ್ಯಂತ ತೆರೆ ಕಾಣಲಿರುವ ರಾಣ ಸಿನಿಮಾದ ಪ್ರಮೋಷನ್ ಅನ್ನು ನಟ ಶ್ರೇಯಸ್ ಮಂಜು ಬಹಳ ಡಿಫ್ರೆಂಟ್ ಆಗಿ ಮಾಡುತ್ತಿದ್ದಾರೆ.

ಆರಕ್ಷಕರೊಂದಿಗೆ 'ರಾಣ' ಚಿತ್ರತಂಡ

ಚಿತ್ರದುರ್ಗದ ಟ್ರೈನಿಂಗ್ ಪೊಲೀಸ್ ಕ್ಯಾಂಪ್​ನಲ್ಲಿ ಶ್ರೇಯಸ್ ಮಂಜು ಹಾಗೂ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಮೇಲಧಿಕಾರಿ ಗಣೇಶ್ ಅವರ ಸಹಾಯದೊಂದಿಗೆ ಶ್ರೇಯಸ್ ಟ್ರೈನಿಂಗ್ ಪೊಲೀಸರ ಜೊತೆ ಸಂವಾದ ಮಾಡಿ ಎಂಟರ್​ಟೈನ್ ಮಾಡಿದ್ದಾರೆ. ರಾಣ ಸಿನಿಮಾದಲ್ಲಿ ಪೊಲೀಸರ ಬಗ್ಗೆ ಒಂದು ಸಂದೇಶವಿದ್ದು, ಈ ರಿಯಲ್ ಪೊಲೀಸರ ಸಮ್ಮುಖದಲ್ಲಿ ತಮ್ಮ ಚಿತ್ರದ ಖಡಕ್ ಡೈಲಾಗ್ ಹೊಡೆದಿದ್ದಾರೆ. ನಮಗೊಸ್ಕರ ಇರೋ ರಕ್ಷಕರೇ ಕಣೋ ಈ ಆರಕ್ಷಕರು ಎಂದು ಒಂದು ಡೈಲಾಗ್​ ಹೇಳುವ ಮೂಲಕ ರಂಜಿಸಿದ್ದಾರೆ.

raana movie promotion
ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿರುವ 'ರಾಣ'

ಇನ್ನು ಶ್ರೇಯಸ್ ಜೋಡಿಯಾಗಿ ಮಿಂಚಿರುವ ಏಕ್ ಲವ್ ಯಾ ಚಿತ್ರದ ಸುಂದರಿ ರಿಷ್ಮಾ ನಾಣಯ್ಯ ಈ ಚಿತ್ರದಲ್ಲಿ ಕೂಡ ಬಹಳ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ಅಲ್ಲದೇ ರಜಿನಿ ಭಾರದ್ವಾಜ್, ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ಸಂಯುಕ್ತ ಹೆಗ್ಡೆ, ಕೋಟೆ ಪ್ರಭಾಕರ್ ಸೇರಿದಂತೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದೆ.

ಇದನ್ನೂ ಓದಿ: 'ಸ್ಪೂಕಿ ಕಾಲೇಜ್​​​'ನಲ್ಲಿ ಮೆಲ್ಲುಸಿರೆ ಸವಿಗಾನ ಅಂತಿದ್ದಾರೆ ರೀಷ್ಮಾ ನಾಣಯ್ಯ

ರನ್ನ, ಪೊಗರು ಅಂತಂಹ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ನಿರ್ದೇಶಕ ನಂದ ಕಿಶೋರ್ ಈ ರಾಣ ಸಿನಿಮಾದ ಸೂತ್ರಧಾರ. ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾಗುವ ಎಲ್ಲ ಎಲಿಮೆಂಟ್ಸ್ ರಾಣ ಚಿತ್ರದಲ್ಲಿದೆ. ಗುಜಾಲ್ ಟಾಕೀಸ್ ಮೂಲಕ ಗುಜಾಲ್ ಪುರುಷೋತ್ತಮ್ ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ , ಶೇಖರ್ ಚಂದ್ರ ಛಾಯಾಗ್ರಹಣವಿದ್ದು, ಪ್ರಶಾಂತ್ ರಾಜಪ್ಪ ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಸದ್ಯ ಸ್ಯಾಂಡಲ್ ವುಡ್​ನಲ್ಲಿ ಹಲವಾರು ವಿಶೇಷತೆಗಳಿಗೆ ಕ್ರೇಜ್ ಹುಟ್ಟಿಸಿರೋ ರಾಣ ಚಿತ್ರದ ಮೂಲಕ ಶ್ರೇಯಸ್ ಮಂಜು ಅಭಿಮಾನಿಗಳ ಹೃದಯ ಗೆಲ್ಲೋದು ಗ್ಯಾರಂಟಿ ಅಂತಿದೆ ಗಾಂಧಿನಗರ.

ಇದನ್ನೂ ಓದಿ: ಖಡಕ್ ಡೈಲಾಗ್​ಗಳಿಂದಲೇ ಸೌಂಡ್ ಮಾಡುತ್ತಿರೋ ಶ್ರೇಯಸ್ ಮಂಜು 'ರಾಣ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.