ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW)ವು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸೋಮವಾರ ಮತ್ತೆ ಸಮನ್ಸ್ ಜಾರಿ ಮಾಡಿತ್ತು. ಆರೋಪಿ ಸುಕೇಶ್ ಚಂದ್ರಶೇಖರ್ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಆಗಿರುವ ಜಾಕ್ವೆಲಿನ್‌ಗೆ ಸೆಪ್ಟೆಂಬರ್ 14ರ ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಫರ್ನಾಂಡಿಸ್‌ಗಾಗಿ ದೊಡ್ಡ ಪ್ರಶ್ನೆ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ನಾಳೆ ಬೆಳಗ್ಗೆ 11 ಗಂಟೆ ಸುಮಾರಿಗೆ ಮಂದಿರ ಮಾರ್ಗದಲ್ಲಿರುವ ಇಒಡಬ್ಲ್ಯು ಕಚೇರಿಯಲ್ಲಿ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಜಾಕ್ವೆಲಿನ್ ಉತ್ತರಿಸಬೇಕಾದ ಪ್ರಶ್ನೆಗಳ ಪಟ್ಟಿಯನ್ನು ನಾವು ಸಿದ್ಧಪಡಿಸಿದ್ದೇವೆ ಎಂದು ಖಚಿತಪಡಿಸಿದ್ದಾರೆ. ಆ ಪ್ರಶ್ನೆಗಳು ಆರೋಪಿ ಸುಕೇಶ್ನೊಂದಿಗಿನ ನಟಿ ಹೊಂದಿರುವ ಸಂಬಂಧ ಮತ್ತು ಅವನಿಂದ ಪಡೆದ ಉಡುಗೊರೆಗಳನ್ನು ಆಧರಿಸಿವೆ. ಸುಕೇಶ್‌ನನ್ನು ಎಷ್ಟು ಬಾರಿ ಭೇಟಿಯಾಗಿದ್ದರು, ಫೋನ್‌ನಲ್ಲಿ ಎಷ್ಟು ಬಾರಿ ಸಂಪರ್ಕಿಸಿದ್ದರು ಎಂಬ ಬಗ್ಗೆಯೂ ಕೇಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರ್ಥಿಕ ಅಪರಾಧಗಳ ವಿಭಾಗವು ಪಿಂಕಿ ಇರಾನಿ ಅವರಿಗೂ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಜಾಕ್ವೆಲಿನ್, ಸುಕೇಶ್ ಇಬ್ಬರಿಗೂ ಪರಿಚಯ ಇರುವುದರಿಂದ ಸುಕೇಶ್ ಮತ್ತು ಜಾಕ್ವೆಲಿನ್ ಸಂಪರ್ಕಿಸಲು ಪಿಂಕಿ ಇರಾನಿ ಸಹಾಯ ಮಾಡಿದ್ದಾರೆಂದು ತಿಳಿದು ಬಂದಿದೆ. ಹಾಗಾಗಿ ಅವರನ್ನೂ ವಿಚಾರಣೆಗೆ ಕರೆಯಲಾಗಿದೆ. ಜಾಕ್ವೆಲಿನ್ ತನಿಖೆಯನ್ನು ಒಂದೆರಡು ದಿನಗಳವರೆಗೆ ನಡೆಯಬಹುದು, ಅದಕ್ಕೆ ಅನುಗುಣವಾಗಿ ದೆಹಲಿಯಲ್ಲಿ ಉಳಿಯಲು ಯೋಜಿಸಲು ತಿಳಿಸಲಾಗಿದೆಯಂತೆ.
ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯ (ಇಡಿ) ಆರೋಪಿ ಸುಕೇಶ್ ಅವರನ್ನು ಒಳಗೊಂಡ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಕ್ವೆಲಿನ್ ಅವರನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಿತ್ತು. ಕ್ರಿಮಿನಲ್ ಪ್ರಕರಣಗಳಲ್ಲಿ ಸುಕೇಶ್ ಭಾಗಿಯಾಗಿರುವ ಬಗ್ಗೆ ಜಾಕ್ವೆಲಿನ್ ಅವರಿಗೆ ತಿಳಿದಿತ್ತು. ಆದರೆ ಅವರು ಅವರ ಕ್ರಿಮಿನಲ್ ಹಿನ್ನೆಲೆ ಕಡೆಗಣಿಸಿ ಅವರೊಂದಿಗೆ ಹಣಕಾಸಿನ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಇಡಿ ಚಾರ್ಜ್ಶೀಟ್ನಲ್ಲಿ ಹೇಳಿದೆ.
-
Economic Offences Wing of Delhi Police issues fresh summons to Jacqueline Fernandez to appear on Sept 14
— ANI Digital (@ani_digital) September 12, 2022 " class="align-text-top noRightClick twitterSection" data="
Read @ANI Story | https://t.co/WbNZGh3Y2Q#DelhiPolice #JacquelineFernandez #Summons pic.twitter.com/ZPyI9iy8Sv
">Economic Offences Wing of Delhi Police issues fresh summons to Jacqueline Fernandez to appear on Sept 14
— ANI Digital (@ani_digital) September 12, 2022
Read @ANI Story | https://t.co/WbNZGh3Y2Q#DelhiPolice #JacquelineFernandez #Summons pic.twitter.com/ZPyI9iy8SvEconomic Offences Wing of Delhi Police issues fresh summons to Jacqueline Fernandez to appear on Sept 14
— ANI Digital (@ani_digital) September 12, 2022
Read @ANI Story | https://t.co/WbNZGh3Y2Q#DelhiPolice #JacquelineFernandez #Summons pic.twitter.com/ZPyI9iy8Sv
ಈ ಹಿಂದೆ ದೆಹಲಿ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು. 2021ರ ಆಗಸ್ಟ್ 30 ಮತ್ತು ಅಕ್ಟೋಬರ್ 20ರಂದು ಜಾಕ್ವೆಲಿನ್ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಇಡಿ ಈ ಹಿಂದೆ ಹೇಳಿತ್ತು. ಚಂದ್ರಶೇಖರ್ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿರುವುದಾಗಿ ಜಾಕ್ವೆಲಿನ್ ಒಪ್ಪಿಕೊಂಡಿದ್ದಾರೆ ಎಂದು ಇಡಿ ತಿಳಿಸಿತ್ತು.
ಇದನ್ನೂ ಓದಿ: ಸೆ. 14 ರಂದು ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್‌ಗೆ ಮತ್ತೆ ಸಮನ್ಸ್ ಜಾರಿ!
ಇದೇ ಪ್ರಕರಣ ಸಂಬಂಧ ಜಾಕ್ವೆಲಿನ್ ಫರ್ನಾಂಡಿಸ್ಗೆ ಆಗಸ್ಟ್ 29ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಬರಲಿಲ್ಲ. ಹೀಗಾಗಿ, ಮತ್ತೆ ಸಮನ್ಸ್ ಜಾರಿ ಮಾಡಲಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಈ ಪ್ರಕರಣದ ತನಿಖೆ ಎದುರಿಸುತ್ತಿದ್ದಾರೆ. ಇನ್ನೂ ಕರ್ನಾಟಕ ಮೂಲದ ಸುಕೇಶ್ ಚಂದ್ರಶೇಖರ್ ಸದ್ಯ ದೆಹಲಿ ಜೈಲಿನಲ್ಲಿದ್ದು, ಆತನ ವಿರುದ್ಧ 10 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.