ETV Bharat / entertainment

'ಪುಷ್ಪ 2'ನಲ್ಲಿ ಮನಸೆಳೆಯುವ ಸೀಕ್ವೆನ್ಸ್​: ರೋಚಕ ಅಪ್​ಡೇಟ್​ ನೀಡಿದ ಸಂಗೀತ ನಿರ್ದೇಶಕ! - ಈಟಿವಿ ಭಾರತ ಕನ್ನಡ

Pushpa 2 movie latest update: 'ಪುಷ್ಪ 2' ಬಗ್ಗೆ ಸಂಗೀತ ನಿರ್ದೇಶಕರಾಗಿರುವ ದೇವಿ ಶ್ರೀ ಪ್ರಸಾದ್​ ಅವರು ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Pushpa 2 movie latest update
ಪುಷ್ಪ 2
author img

By ETV Bharat Karnataka Team

Published : Sep 10, 2023, 10:02 AM IST

ಭಾರತೀಯ ಚಿತ್ರರಂಗದ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಪುಷ್ಪ 2: ದಿ ರೂಲ್​'. ಸ್ಟೈಲಿಶ್​ ಸ್ಟಾರ್​​ ಅಲ್ಲು ಅರ್ಜುನ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಮೇಲೆ ಅಭಿಮಾನಿಗಳು ಮುಗಿಲೆತ್ತರದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರ್ದೇಶಕ ಸುಕುಮಾರನ್​ ಪ್ರಯತ್ನಕ್ಕೂ ಮೀರಿ ಚಿತ್ರವನ್ನು ರೂಪಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್​ ಅವರು 'ಪುಷ್ಪ 2' ಬಗ್ಗೆ ಕೆಲವು ಆಸಕ್ತಿದಾಯಕ ವಿಚಾರಗಳನ್ನು ತಿಳಿಸಿದರು.

"ನಾವೆಲ್ಲರೂ ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ. ಸಿನಿಮಾ ಬಗ್ಗೆ ಹೆಚ್ಚಿಗೆ ಹೇಳಲಾರೆ. ಆದರೆ ಒಂದು ವಿಚಾರ ಹೇಳಬಲ್ಲೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ನಿರ್ದೇಶಕ ಸುಕುಮಾರನ್​ ನಿರ್ದೇಶನ ಮಾಡುತ್ತಿದ್ದಾರೆ. ಪುಷ್ಪ 2 ಸ್ಕ್ರಿಪ್ಟ್​ ಮನಸ್ಸಿಗೆ ಮುದ ನೀಡುತ್ತದೆ. ಒಂದು ಸೀಕ್ವೆನ್ಸ್​ನ ದೃಶ್ಯವನ್ನು ನಾನು ನೋಡಿದ್ದೇನೆ. ಈ ಬಗ್ಗೆ ನಾನೇನು ಹೆಚ್ಚು ಹೇಳುವುದಿಲ್ಲ. ಆದರೆ ಇದು ಮನಸೆಳೆಯುವ ಸೀಕ್ವೆನ್ಸ್​" ಎಂದು ದೇವಿ ಶ್ರೀ ಪ್ರಸಾದ್ ಹೇಳಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ಆಗಿದೆ.

ಪುಷ್ಪ 2 ರಿಲೀಸ್ ಯಾವಾಗ​?: ಸುಕುಮಾರನ್​ ಕಥೆ ಬರೆದು ನಿರ್ದೇಶಿಸಿರುವ ಪುಷ್ಪ 2: ದಿ ರೂಲ್​ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಮುಂದಿನ ವರ್ಷ ಬೇಸಿಗೆ ಸಮಯದಲ್ಲಿ ಚಿತ್ರವನ್ನು ಥಿಯೇಟರ್​ಗೆ ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ 2024ರ ಮಾರ್ಚ್​ 22 ರಿಂದ 29ರ ಒಳಗಾಗಿ ಬಿಡುಗಡೆ ದಿನಾಂಕವನ್ನು ಚಿತ್ರ ನಿರ್ಮಾಪಕರು ನಿಗದಿಪಡಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಚಿತ್ರದ ಪ್ರಮುಖ ದೃಶ್ಯಗಳು ಸೇರಿದಂತೆ ಈಗಾಗಲೇ ಶೇ.70ರಷ್ಟು ಶೂಟಿಂಗ್​ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪೋಸ್ಟ್​ ಪ್ರೊಡಕ್ಷನ್ಸ್​ ಕೆಲಸಗಳು ಪ್ರಾರಂಭವಾಗಲಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ ಇತಿಹಾಸದಲ್ಲಿ ಇದೇ ಮೊದಲು: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ 'ಪುಷ್ಪ 2'

ಪುಷ್ಪ: ದಿ ರೈಸ್​ ಹಿಟ್​: 2021ರ ಡಿಸೆಂಬರ್​ 17 ರಂದು ಪುಷ್ಪ: ದಿ ರೈಸ್​ ತೆರೆಗೆ ಬಂದಿತ್ತು. ಚಿತ್ರವು ಜಗತ್ತಿನಾದ್ಯಂತ ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸುಕುಮಾರನ್​ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಎಲ್ಲರನ್ನೂ ಸೆಳೆದಿತ್ತು. ​ಕೆಂಪು ಚಂದನ ಮರದ ಕಳ್ಳಸಾಗಣೆ ಕುರಿತ ಕಥಾವಸ್ತುವನ್ನು ಸಿನಿಮಾ ಹೊಂದಿತ್ತು.

ಪುಪ್ಪ: ದಿ ರೈಸ್​ ಚಿತ್ರವು ವಿಶ್ವದಾದ್ಯಂತ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತ್ತು. ಈ ಮೂಲಕ 2021ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿತ್ತು. ಮೈತ್ರಿ ಮೂವೀ ಮೇಕರ್ಸ್, ಮುತ್ತಂ ಶೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿದ್ದ ಚಿತ್ರದಲ್ಲಿ ಸುನೀಲ್, ಫಹಾದ್ ಫಾಜಿಲ್, ಅನಸೂಯ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು.

ಇದನ್ನೂ ಓದಿ: ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ.. ಯಾವ ಚಿತ್ರಕ್ಕೆ ಗೊತ್ತಾ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.