ETV Bharat / entertainment

ಪಂಜಾಬಿ ಹಾಸ್ಯನಟ ಅಮೃತ್​ಪಾಲ್​ ಚೋಟು ನಿಧನ - ಪಿಎಫ್​ಟಿಎಎ ಪಂಜಾಬ್​ ಮತ್ತು ಟಿವಿ ಆಕ್ಟರ್ಸ್​ ಅಸೋಸಿಯೇಷನ್

ಹಿಂದಿ ಮತ್ತು ಪಂಜಾಬಿ ಸಿನಿಮಾಗಳಲ್ಲಿ ತಮ್ಮ ಹಾಸ್ಯಭರಿತ ನಟನೆಯಿಂದ ಮನಗೆದ್ದಿದ್ದ ಅಮೃತ್​ಪಾಲ್​ ಸಾವನ್ನಪ್ಪಿದ್ದಾರೆ.

ನಟ ಅಮೃತ್​ಪಾಲ್​ ಚೋಟು
ನಟ ಅಮೃತ್​ಪಾಲ್​ ಚೋಟು
author img

By

Published : Feb 17, 2023, 3:30 PM IST

Updated : Feb 17, 2023, 4:53 PM IST

ಪಂಜಾಬಿ​​ ನಟ ಅಮೃತ್​ಪಾಲ್​ ಚೋಟು ಅವರಿಂದು ನಿಧನರಾಗಿದ್ದಾರೆ. ಪಿಎಫ್​ಟಿಎಎ ಪಂಜಾಬ್​ ಮತ್ತು ಟಿವಿ ಆಕ್ಟರ್ಸ್​ ಅಸೋಸಿಯೇಷನ್​ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಹಾಸ್ಯ ಕಲಾವಿದರಾಗಿದ್ದ ಚೋಟು ಅನೇಕ ಹಿಂದಿ ಮತ್ತು ಪಂಜಾಬಿ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಸ್ಟಾಂಡಪ್​ ಕಾಮಿಡಿಯನ್​ ಆಗಿ ವೃತ್ತಿ ಆರಂಭಿಸಿದ್ದರು. ಬಳಿಕ ಸಿನಿಮಾ ಕ್ಷೇತ್ರದಲ್ಲಿ ಬಹು ಬೇಡಿಕೆಯ ನಟರಾದರು.

ಅಮೃತ್​ಪಾಲ್​ ಸಿನಿಮಾ ಜೀವನ: 2008ರಲ್ಲಿ ಸಿಂಗ್​ ಈಸ್​ ಕಿಂಗ್, 2014ರಲ್ಲಿ ದಿ ಸ್ಲಮ್​ ಸ್ಟಾರ್​, 2015ರಲ್ಲಿ ವಿಯಹ್​​ ದ ಗೆರಿಸ್​ ಜಿಲ್ಲಯದಲ್ಲಿ ಮಿಂಚಿದ್ದರು. 2016ರಲ್ಲಿ ಸರ್ದಜೂ 2 ಸಿನಿಮಾದಲ್ಲಿ ನಟಿಸಿದ್ದ ಇವರಿಗೆ ಸರ್ದರ್ಜಿ ಸಿನಿಮಾ ಇವರಿಗೆ ಹೆಸರು ತಂದುಕೊಟ್ಟಿತ್ತು. ಒನ್ಸ್​ ಅಪನ್​ ಎ ಟೈಮ್​ ಇನ್​ ಅಮೃತ್​​ಸರ್​, ಸಗಿಫುಲ್​ ಮತ್ತು ದೊಲ್ರತಿ ಸಿನಿಮಾದಲ್ಲಿ ನಟಿಸಿದ್ದರು. ಪಂಜಾಬಿ ನಟರಾದ ದಲ್ಜಿತ್​ ಕೌರ್​​, ಗುರಿಂದರ್​ ಡಿಪೆ ಸೇರಿದಂತೆ ಅನೇಕರು ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಶೆಹಜಾದಾ ಸಿನಿಮಾ ಬಿಡುಗಡೆ: ಬಾಲಿವುಡ್​ ಸಕ್ಸಸ್ ಮುಂದುವರಿಯುತ್ತಾ?!

Last Updated : Feb 17, 2023, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.