ETV Bharat / entertainment

ಅಪ್ಪು ಕನಸಿನ 'ಗಂಧದ ಗುಡಿ' ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ - ಪುನೀತ್ ರಾಜಕುಮಾರ್ ಗಂಧದ ಗುಡಿ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಗಂಧದ ಗುಡಿ' ಚಿತ್ರ ತೆರೆಗೆ ಅಪ್ಪಳಿಸುವ ದಿನ ಫಿಕ್ಸ್ ಆಗಿದೆ. ಅಕ್ಟೋಬರ್ 28 ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.

ಗಂಧದ ಗುಡಿ
ಗಂಧದ ಗುಡಿ
author img

By

Published : Jul 15, 2022, 8:14 PM IST

Updated : Jul 15, 2022, 8:48 PM IST

ದಿವಗಂತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಅಮೃತ ಘಳಿಗೆ ಬಂದೇ ಬಿಟ್ಟಿದೆ. ಕನ್ನಡ ಚಿತ್ರರಂಗದ ರಾಜರತ್ನ, ಪವರ್ ಸ್ಟಾರ್ ಕಂಡ ಕನಸಿನ ಪಯಣದ ಚಿತ್ರ ಗಂಧದ ಗುಡಿ. ಟೀಸರ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ. ತೆರೆ ಮೇಲೆ ಚಿತ್ರವನ್ನು ನೋಡಲು ಕಾತುರರಾಗಿರುವ ಕೋಟ್ಯಂತರ ಅಭಿಮಾನಿಗಳಿಗೆ ಗಂಧದ ಗುಡಿಯ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಹೌದು, ಈ ವರ್ಷದ ನಾಡಹಬ್ಬ ರಾಜ್ಯೋತ್ಸವವನ್ನು ಅಪ್ಪುವಿನ ಗಂಧದ ಗುಡಿಯೊಂದಿಗೆ ಆಚರಿಸಲು ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 28, 2022 ರಂದು ಗಂಧದಗುಡಿ ಬಿಡುಗಡೆಯಾಗುತ್ತಿದೆ. ಅಪ್ಪು ಕೊನೆಯದಾಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ರಾಷ್ಟ್ರ ಪ್ರಶಸ್ತಿ ಪಡೆದ ವನ್ಯಜೀವಿ ಚಿತ್ರ ನಿರ್ದೇಶಕ ಅಮೋಘವರ್ಷ ನಿರ್ದೇಶನದ ಚಲನಚಿತ್ರ ಇದಾಗಿದೆ.

ಗಂಧದ ಗುಡಿ
ಗಂಧದ ಗುಡಿ

ಈ ಸಿನಿಮಾ ಪ್ರಕೃತಿಯತ್ತ ಒಂದು ಪಯಣ. ಒಬ್ಬ ನಿಜವಾದ ನಾಯಕನ ಮತ್ತು ಅವನ ಕಾಳಜಿಯ ಕಥೆ. ಬಯಲು ಸೀಮೆಯಿಂದ ಹಿಡಿದು ಸಮುದ್ರ ತೀರದವರೆಗೂ, ಪತನವಾಗಿರುವ ಕಾಡುಗಳಿಂದ, ಪಶ್ಚಿಮ ಘಟ್ಟ, ದಟ್ಟ ಅರಣ್ಯದವರೆಗೂ ಈ ಮಣ್ಣಿನ ಸಿರಿ ಸೆರೆ ಹಿಡಿದಿರುವ ಸಿನಿಮಾ. ಹಾಡುಗಳೊಂದಿಗೆ, ದೃಶ್ಯ ವೈಭವದೊಂದಿಗೆ ತನ್ನ ಜನರಿಗೆ ಪರಿಚಯಿಸುವ ಉತ್ಸಾಹವನ್ನ ಪುನೀತ್ ರಾಜ್ ಕುಮಾರ್ ಮಾಡಿದ್ದಾರೆ.

ವನ್ಯಜೀವಿಗಳ ಬದುಕು, ಕಾಡಿನ ಸಂರಕ್ಷಣೆ, ಜನ ಸಾಮಾನ್ಯರಿಗೆ ಕಾಡಿನ ಬಗ್ಗೆ ಉತ್ಸಾಹ ಹಾಗೂ ಕಾಳಜಿಯನ್ನು ಹೆಚ್ಚಿಸಲು ಪ್ರಯತ್ನಿಸಿ, ನಮ್ಮ ವ್ಯಕ್ತಿತ್ವದ ಮೇಲೆ ಮಹತ್ತರವಾದ ಬದಲಾವಣೆಯನ್ನು ತರಲು ಅಪ್ಪು ಹೊರಟಿದ್ದರು. ಆದರೆ, ಪವರ್ ಸ್ಟಾರ್ ಅಕಾಲಿಕ ನಿಧನದಿಂದ ಆ ಕನಸು ಹಾಗೆ ಉಳಿದಿದೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

  • " class="align-text-top noRightClick twitterSection" data="">

ಇನ್ನು ಪವರ್ ಸ್ಟಾರ್ ಕಂಡ ಈ ಕನಸು ಬಹುಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಭಾವಗೀತೆಗಳಿಂದ ಕೂಡಿರುವ ಮನೋರಂಜನಾತ್ಮಕ ಮತ್ತು ಸಂಗೀತಮಯ ಸಿನೆಮಾ ಇದಾಗಿದ್ದು, ಕುಟುಂಬ ಸಮೇತ ವೀಕ್ಷಿಸಬಹುದಾಗಿದೆ.

(ಇದನ್ನೂ ಓದಿ: ಅಪ್ಪು'ಗಂಧದಗುಡಿ'ಗೆ ಸಿಎಂ ಬೊಮ್ಮಾಯಿ ಮೆಚ್ಚುಗೆ..)

Last Updated : Jul 15, 2022, 8:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.