ಕನ್ನಡ ಚಿತ್ರರಂಗದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯಿಸಿರುವ ಡ್ರೀಮ್ ಪಾಜೆಕ್ಟ್ ಗಂಧದ ಗುಡಿ, ಇದೇ ಅಕ್ಟೋಬರ್ 28ರಂದು ಕರ್ನಾಟಕ ಅಲ್ಲದೇ ವಿಶ್ವದಾದ್ಯಂತ ತೆರೆ ಕಾಣುವ ಮೂಲಕ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ನಮ್ಮ ನಾಡಿನ ಅರಣ್ಯ ಸಂಪತ್ತು, ಪರಿಸರ ಹಾಗು ಪ್ರಾಣಿ ಸಂಕುಲದ ಬಗ್ಗೆ ಮಾಹಿತಿ ಒಳಗೊಂಡಿರುವ ಗಂಧದ ಗುಡಿ ಚಿತ್ರ ನಮ್ಮ ದೇಶದ ಹೆಮ್ಮೆ. ಪುನೀತ್ ರಾಜ್‍ಕುಮಾರ್ ತಾನೊಬ್ಬ ಸ್ಟಾರ್ ಅಲ್ಲದೆ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಕಾಣಿಸಿಕೊಂಡಿರುವ ಗಂಧದ ಗುಡಿ ಚಿತ್ರವನ್ನು ಕೋಟ್ಯಂತರ ಅಭಿಮಾನಿಗಳು ಮೆಚ್ಚಿಕೊಂಡಿರೋದು ಅಲ್ಲದೆ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಪುನೀತ್ ರಾಜ್‍ಕುಮಾರ್ ಕೊನೆಯ ಚಿತ್ರವಾಗಿರೋ ಗಂಧದ ಗುಡಿ ಚಿತ್ರವನ್ನ ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಹೀಗಾಗಿ ಬಾಕ್ಸ್ ಆಫೀಸ್‌ನಲ್ಲಿ ಗಂಧದ ಗುಡಿ ಸಿನಿಮಾ ಕಮಾಲ್ ಮಾಡಿದೆ. ಗಾಂಧಿನಗರ ಸಿನಿಮಾ ಪಂಡಿತರ ಪ್ರಕಾರ ಗಂಧದ ಗುಡಿ ಚಿತ್ರ ಮೂರು ದಿನಕ್ಕೆ ಬರೋಬ್ಬರಿ 20 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗ್ತಿದೆ. ಗಂಧದ ಗುಡಿ ಚಿತ್ರ ಬಿಡುಗಡೆಗೂ ಮುಂಚೆ ಬೆಂಗಳೂರಿನ 22 ಚಿತ್ರಮಂದಿರ ಹಾಗು ರಾಜ್ಯದ 50 ಜಿಲ್ಲೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಮಾಡಲಾಗಿತ್ತು. ಈ ಶೋನ ಎಲ್ಲಾ ಟಿಕೆಟ್ಗಳು ಮಾರಾಟ ಆಗುವ ಮೂಲಕ ಸೋಲ್ಡ್ ಔಟ್ ಆಗಿತ್ತು. ಇದರಿಂದ 1ಕೋಟಿ ಕಲೆಕ್ಷನ್ ಆಗಿದೆಯಂತೆ.
1,500ಕ್ಕೂ ಹೆಚ್ಚು ಶೋಗಳು ಪ್ರದರ್ಶನ: ಇನ್ನು, 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಗಂಧದ ಗುಡಿ ಸಿನಿಮಾ. ಸಿಂಗಲ್ ಸ್ಕ್ರೀನ್ ಹಾಗು ಮಲ್ಟಿಪ್ಲೆಕ್ಸ್ ಸೇರಿ ಬರೋಬ್ಬರಿ 1,500ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಆಗಿವೆ. ಬೆಂಗಳೂರು ಹಾಗು ವಿವಿಧ ಜಿಲ್ಲೆಗಳಲ್ಲಿ ಗಂಧದ ಗುಡಿ ಚಿತ್ರ ಬೆಳಗ್ಗೆ 8 ಗಂಟೆಯಿಂದ ಶೋ ಶುರುವಾಗಿತ್ತು. ಈ ಶೋಗಳ ಲೆಕ್ಕಾಚಾರದ ಮೇಲೆ ಗಂಧದಗುಡಿ ಚಿತ್ರ ಮೊದಲ ದಿನ ಬರೋಬ್ಬರಿ 7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.
ಪುನೀತ್ ರಾಜ್‍ಕುಮಾರ್ ಕನ್ನಡಿಗರನ್ನು ಅಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗಿದ್ದು, ಪವರ್ ಸ್ಟಾರ್ ಅವರ ಚಿತ್ರ ಗಂಧದ ಗುಡಿ ಎರಡನೇ ದಿನವೂ ಕೆಲವು ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇದರ ಆಧಾರದ ಮೇಲೆ 4 ಕೋಟಿ ಕಲೆಕ್ಷನ್ ಆಗಿದೆಯಂತೆ.
ವೀಕೆಂಡ್ನಲ್ಲಿ ಉತ್ತಮ ಕಲೆಕ್ಷನ್ : ಮೂರನೇ ದಿನವೂ ಅಪ್ಪುವಿನ ಗಂಧದ ಗುಡಿ ಸಿನಿಮಾದ ನಾಗಲೋಟ ಮುಂದುವರೆದಿದೆ. ವೀಕೆಂಡ್ ಆದ್ದರಿಂದ ಮೂರನೇ ಗಂಧದ ಗುಡಿ 5 ಕೋಟಿ ಕಲೆಕ್ಷನ್ ಆಗಿದೆಯಂತೆ. ಇದರ ಜೊತೆಗೆ ವಿದೇಶಗಳಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಚಿತ್ರ ಬಿಡುಗಡೆ ಆಗಿದ್ದು, ಮೂರು ದಿನಕ್ಕೆ ಬರೋಬ್ಬರಿ 20 ಕೋಟಿ ಗಳಿಸಿದೆ. ಇದರಲ್ಲಿ ಥಿಯೇಟರ್ ಬಾಡಿಗೆ ತೆಗೆದು ನೆಟ್ ಪ್ರಾಫಿಟ್ 16 ಕೋಟಿ ರೂಪಾಯಿನ್ನು ಗಂಧದ ಗುಡಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಪಡೆದಿದೆ ಎಂದು ಹೇಳಲಾಗ್ತಿದೆ.
ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘ ವರ್ಷ ನಿರ್ದೇಶನದ ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿರ್ಮಾಣ ಮಾಡಿದ್ದಾರೆ. ಪ್ರತೀಕ್ ಶೆಟ್ಟಿ ಕ್ಯಾಮರಾ ವರ್ಕ್, ಅಜನೀಶ್ ಲೋಕನಾಥ್ ಸಂಗೀತ ಇರುವ ಗಂಧದ ಗುಡಿ ಚಿತ್ರ ಮುಂದಿನ ದಿನಗಳಲ್ಲಿ ಮತ್ತಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಆಗಲಿದ್ದ 50 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ.
ಇದನ್ನೂ ಓದಿ : ಶಾಲಾ ಮಕ್ಕಳಿಗೆ ಗಂಧದ ಗುಡಿ ಉಚಿತ ವೀಕ್ಷಣೆಗೆ ಅವಕಾಶ ನೀಡಿ: ಸರ್ಕಾರಕ್ಕೆ ಆಪ್ ಆಗ್ರಹ