ETV Bharat / entertainment

ಪುಷ್ಕರ್​ ಗಿರಿಗೌಡ ಚೊಚ್ಚಲ ನಿರ್ದೇಶನದ 'ಸೈಕಿಕ್'​ ಚಿತ್ರದ ಟೀಸರ್​ ಬಿಡುಗಡೆ - ಈಟಿವಿ ಭಾರತ ಕನ್ನಡ

ಪುಷ್ಕರ್​ ಗಿರಿಗೌಡ ನಿರ್ದೇಶನದ ಕ್ರೈಮ್​, ಥ್ರಿಲ್ಲರ್​ ಕಥಾಹಂದರ ಹೊಂದಿರುವ 'ಸೈಕಿಕ್'​ ಚಿತ್ರದ ಟೀಸರ್​ ಅನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.

Psychic movie teaser released
Psychic movie teaser released
author img

By ETV Bharat Karnataka Team

Published : Oct 26, 2023, 5:47 PM IST

ಸ್ಯಾಂಡಲ್​ವುಡ್​ನಲ್ಲಿ ಕ್ರೈಮ್​ ಜಾನರ್​ ಸಿನಿಮಾಗಳು ಸಾಕಷ್ಟು ತೆರೆ ಕಾಣುತ್ತಿವೆ. ಇಂತಹದ್ದೇ ​ ಕಥಾಹಂದರ ಹೊಂದಿರುವ 'ಸೈಕಿಕ್'​ ಚಿತ್ರದ ಟೀಸರ್​ ಇದೀಗ ಬಿಡುಗಡೆಯಾಗಿದೆ. ಟೀಸರ್​ ಅನ್ನು ನಿರ್ದೇಶಕ ಕೆ.ಎಂ.ಚೈತನ್ಯ ಹಾಗೂ ನಿವೃತ್ತ ಪೊಲೀಸ್​ ಅಧಿಕಾರಿ ಶಿವರಾಮ್​ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಸಾಥ್​ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಸಿಪಿ ಹನುಮಂತೇಗೌಡ, ಎಸ್​.ಕೆ ಉಮೇಶ್​, ನಿರ್ಮಾಪಕ ದೇವೇಂದ್ರ ರೆಡ್ಡಿ, ಮಂಜುನಾಥ್​ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಪುಷ್ಕರ್​ ಗಿರಿಗೌಡ 'ಸೈಕಿಕ್​' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕ್ರೈಮ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳನ್ನು ಮಾಮೂಲಿ ಚೌಕಟ್ಟನ್ನು ಬಿಟ್ಟು ಈ ರೀತಿಯೂ ಮಾಡಿ ತೋರಿಸಬಹುದು ಎಂದು ಹೇಳಹೊರಟಿರುವ ಪುಷ್ಕರ್​ ಗಿರಿಗೌಡ ಅದಕ್ಕೆ ತಕ್ಕಂತೆ ಕಥೆ, ಚಿತ್ರಕಥೆಯನ್ನೂ ರಚಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, "ಕ್ರೈಮ್ ಥ್ರಿಲ್ಲರ್ ಇನ್ವೆಸ್ಟಿಗೇಶನ್ ಸಿನಿಮಾ ಎಂದರೆ ರಕ್ತಸಿಕ್ತ ದೃಶ್ಯಗಳನ್ನು ವೈಭವೀಕರಿಸುವುದು ಸಾಮಾನ್ಯ. 'ಸೈಕಿಕ್' ಸಿನಿಮಾದಲ್ಲಿ ಅದರ ಹೊರತಾಗಿ, ಕ್ರೌರ್ಯವನ್ನು ಪರೋಕ್ಷವಾಗಿ ಮನದಟ್ಟು ಮಾಡುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಛಾಯಾಗ್ರಹಣ, ಹಿನ್ನೆಲೆ‌ ಸಂಗೀತ ಮತ್ತು ಶಬ್ದ ವಿನ್ಯಾಸ ಬೆಂಬಲ ನೀಡಿವೆ" ಎಂದು ತಿಳಿಸಿದರು.

Psychic movie teaser released
ಪುಷ್ಕರ್​ ಗಿರಿಗೌಡ ಚೊಚ್ಚಲ ನಿರ್ದೇಶನದ 'ಸೈಕಿಕ್'​ ಚಿತ್ರದ ಟೀಸರ್​ ಬಿಡುಗಡೆ

ಇದನ್ನೂ ಓದಿ: 'ಸ್ನೇಹರ್ಷಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಿರಣ್ ನಾರಾಯಣ್ ಪ್ರವೇಶ

"ಎಂ.ಎಸ್.ತ್ಯಾಗರಾಜ್ ಅವರ ಸಂಗೀತ, ಸಿನಿಟೆಕ್ ಸೂರಿ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ಮೂರು ರೀತಿಯ ಲವ್ ಸ್ಟೋರಿಗಳನ್ನು ಇಲ್ಲಿ ಹೇಳಿದ್ದೇವೆ. ಚಿತ್ರದ ಹಲವಾರು ಮುಖ್ಯ ಅಂಶಗಳನ್ನು ಟೀಸರ್‌ನಲ್ಲಿ ಬಿಟ್ಟುಕೊಟ್ಟಿಲ್ಲ. ಮುಂದೆ ಟ್ರೇಲರ್​ನಲ್ಲಿ ಅದನ್ನು ತೋರಿಸುತ್ತೇವೆ. ಚಿತ್ರದಲ್ಲಿ ಕೊಲೆ, ಅಪರಾಧ, ತನಿಖೆ ಇದ್ದರೂ ಅದರ ಜೊತೆ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಕೊಡುವ ಪ್ರಯತ್ನ ಮಾಡಿದ್ದೇವೆ‌" ಎಂದರು.

ನಾಯಕ ನಟ ಸರ್ದಾರ್ ಸತ್ಯ ಮಾತನಾಡಿ, "ನಾನು ಬಹಳ ದಿನಗಳ ನಂತರ ಇಂತಹದ್ದೊಂದು ಪಾತ್ರ ಮಾಡಿದ್ದೇನೆ. ತುಂಬಾ ಸ್ಟ್ರಾಂಗ್ ಕಂಟೆಂಟ್ ಇರುವ ಚಿತ್ರವಿದು. ನಾನು ಈವರೆಗೂ ಮಾಡಿರದ ಹೊಸತನದ ಪಾತ್ರ ಮಾಡಿದ್ದೇನೆ" ಎಂದರು. ನಟ ಹಂಸ ಪ್ರತಾಪ್ ಮಾತನಾಡಿ, "ಪೊಲೀಸ್ ಪಾತ್ರ ಮಾಡಬೇಕೆನ್ನುವುದು ನನ್ನ ಬಹುದಿನಗಳ ಕನಸು. ಅದು ಈ ಚಿತ್ರದಲ್ಲಿ ನೆರವೇರಿದೆ" ಎಂದರು.

ಸರ್ದಾರ್ ಸತ್ಯ, ಹಂಸ ಪ್ರತಾಪ್​ ಮಾತ್ರವಲ್ಲದೇ, ಕೈಲಾಸ್ ದೇವ್, ನಿಖಿತಾ ದೋರ್ತೋಡಿ, ರೇಷ್ಮಾ ಲಿಂಗರಾಜಪ್ಪ, ರೋಹಿತ್ ನಾಗೇಶ್, ಕೇಶವ್ ಮೊದಲಾದವರು ಇದ್ದಾರೆ. ಸಿಲ್ಕ್ ಸಿನಿಮಾ ಅರ್ಪಿಸುವ 'ಸೈಕಿಕ್' ಚಿತ್ರವನ್ನು ಚೇತನ್ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ವೈ.ಎಸ್.ಶ್ರೀಧರ್ ಅವರ ಸಂಕಲನ, ಪ್ರಸನ್ನ ಶೆಟ್ಟಿ ಸಂಭಾಷಣೆ ಹಾಗೂ ಗೋಪಿ ಜಾ ಸಾಹಸ ಸಂಯೋಜನೆಯಿದೆ. ಸದ್ಯ ಟೀಸರ್​ನಿಂದ ಗಮನ ಸೆಳೆಯುತ್ತಿರುವ 'ಸೈಕಿಕ್' ಚಿತ್ರ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: 'ಕ್ಯಾಪ್ಚರ್'​ಗಾಗಿ ಪ್ರಿಯಾಂಕಾ ಉಪೇಂದ್ರ ಮಗಳಾದ 'ಟಗರು ಪುಟ್ಟಿ' ಮಾನ್ವಿತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.