ETV Bharat / entertainment

ಮತ್ತೆ ಪ್ರೇಮಕಥೆಯತ್ತ ದಿಯಾ ಹೀರೋ: ಪೃಥ್ವಿ ಅಂಬಾರ್ ಸಿನಿಮಾದ ಶೀರ್ಷಿಕೆಯೇನು? - Jooni movie

ಪೃಥ್ವಿ ಅಂಬಾರ್ ಮತ್ತೊಂದು ವಿಭಿನ್ನ ಪ್ರೇಮಕಥೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

Jooni first look release
ಜೂನಿ ಫಸ್ಟ್ ಲುಕ್​
author img

By ETV Bharat Karnataka Team

Published : Nov 29, 2023, 1:52 PM IST

Updated : Nov 29, 2023, 2:05 PM IST

ದಿಯಾ ಸಿನಿಮಾ ಮೂಲಕ ಕನ್ನಡಿಗರ ಹೃದಯ ಕದ್ದ ಕರಾವಳಿಯ ಕುವರ ಪೃಥ್ವಿ ಅಂಬಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ತಮಿಳಿಗೂ ಪಾದರ್ಪಣೆ ಮಾಡಿರುವ ಪೃಥ್ವಿ, ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯುವ ಪ್ರತಿಭೆ ವೈಭವ್ ಮಹಾದೇವ್ ಸಾರಥ್ಯದ 'ಜೂನಿ' ಸಿನಿಮಾದಲ್ಲಿ ಪೃಥ್ವಿ ನಾಯಕನಾಗಿ ನಟಿಸುತ್ತಿದ್ದಾರೆ.

'ಜನ್ನಿ' ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ 'ಜೂನಿ' ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಪ್ರಾಗ್ ಫಿಲ್ಮ್ ಸ್ಕೂಲ್​​ನಲ್ಲಿ ನಿರ್ದೇಶಕರ ಕೋರ್ಸ್ ಮುಗಿಸಿರುವ ವೈಭವ್ ಮಹಾದೇವ್ ಅವರೀಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಶೀರ್ಷಿಕೆಯ 'ಜೂನಿ' ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪೃಥ್ವಿ ಅಂಬಾರ್ ಜೊತೆಗೆ ನಾಯಕಿ ರಿಷಿಕಾ ನಾಯಕ್ ಡಿಫರೆಂಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಜೂನಿ ರೊಮ್ಯಾಂಟಿಕ್ ಕಥಾಹಂದರದ ಸಿನಿಮಾ. ದಿಯಾ ಬಳಿಕ ಪೃಥ್ವಿ ಮತ್ತೊಮ್ಮೆ ಪ್ರೇಮಕಥೆಗೆ ಬಣ್ಣ ಹಚ್ಚಿದ್ದಾರೆ. ತ್ರಿಶೂಲ ಕ್ರಿಯೇಷನ್ ಅಡಿ ಮೋಹನ್ ಕುಮಾರ್ ಎಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶ್ರೇಯಸ್ ವೈ ಎಸ್ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ.

Jooni first look release
ಜೂನಿ ಫಸ್ಟ್ ಲುಕ್​

ಸದ್ದಿಲ್ಲದೇ ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮುಗಿಸಿರುವ ಜೂನಿ ಚಿತ್ರತಂಡ 2024ರ ಜನವರಿಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ನಕುಲ್ ಅಭ್ಯಂಕರ್ ಸಂಗೀತ, ಶಶಾಂಕ್ ನಾರಾಯಣ ಸಂಕಲನ, ಅಜಿನ್ ಬಿ, ಜಿತಿನ್ ದಾಸ್ ಛಾಯಾಗ್ರಹಣ, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಫಸ್ಟ್ ಲುಕ್ ರಿಲೀಸ್ ಮಾಡಿರುವ ಜೂನಿ ಬಳಗ ಟೀಸರ್, ಟ್ರೇಲರ್, ಹಾಡುಗಳು ಹೀಗೆ ಒಂದೊಂದಾಗಿ ರಿಲೀಸ್ ಮಾಡಲು ಸಜ್ಜಾಗಿದೆ.

ಇದನ್ನೂ ಓದಿ: ಬಿಗ್‌ ಬಾಸ್​ನಲ್ಲಿ ರಸಪ್ರಶ್ನೆ ಸ್ಪರ್ಧೆ: ಮೈಕಲ್​ ಕನ್ನಡಕ್ಕೆ ದಂಗಾದ ಮನೆಮಂದಿ

ಈಗಾಗಲೇ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಪೃಥ್ವಿ ಅಂಬಾರ್ ಅವರ ಜನಪ್ರಿಯತೆ ಹೆಚ್ಚಿಸಿದ ಸಿನಿಮಾ ಅಂದ್ರೆ ಅದು 'ದಿಯಾ'. ಅದ್ಭುತ ಪ್ರೇಮಕಥೆ ಮೂಲಕ ಕನ್ನಡ ಮಾತ್ರವಲ್ಲದೇ ಪರಭಾಷಿಗರ ಗಮನ ಸೆಳೆದ ತಾರೆ. ಪೃಥ್ವಿ ಅಂಬಾರ್ ಅಂದ ಕೂಡಲೇ ಸಿನಿಪ್ರಿಯರ ಬಾಯಲ್ಲಿ ಬರೋ ಮೊದಲ ಪದವೇ 'ದಿಯಾ'. ಅಷ್ಟರ ಮಟ್ಟಿಗೆ ಗಮನ ಸೆಳೆದ ಚಿತ್ರವಿದು. ಭಾವನಾತ್ಮಕವಾಗಿ ಮೂಡಿಬಂದ ಕಥೆ ಅನೇಕರ ಮನ ಗೆಲ್ಲುವಲ್ಲಿ ಯಶ ಕಂಡಿತು. 'ದಿಯಾ' ಜನಪ್ರಿಯತೆಯ ಬಳಿಕ ಸಾಲು ಸಾಲು ಆಫರ್​ಗಳು ನಟನ ಕೈ ಸೇರಿದೆ. ಆ ಪೈಕಿ 'ಜೂನಿ' ಸಿನಿಮಾ ಕೂಡ ಒಂದು. ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿರುವ ಪೃಥ್ವಿ ಅಂಬಾರ್ ಅವರ ಮುಂದಿನ ಸಿನಿಮಾಗಳ ಮೇಲೆ ಸಾಕಷ್ಟು ಕತೂಹಲ, ನಿರಿಕ್ಷೆಗಳಿವೆ. 'ಯಾರ ಮೇಲೆ ಪ್ರೀತಿ ಹುಟ್ಟುತ್ತೋ, ಅವರ ಮೇಲೇ ಪ್ರೀತಿ ಆಗುತ್ತಾ?' ಎಂಬ ಬರಹದ ಮೂಲಕ 'ಜೂನಿ' ಸಿನಿಮಾ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಕನ್ನಡದಲ್ಲೂ ಬಿಡುಗಡೆಯಾಗಲಿದೆ ರಶ್ಮಿಕಾರ 'ಅನಿಮಲ್​': ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರ

Last Updated : Nov 29, 2023, 2:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.