ETV Bharat / entertainment

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಿನಿಮಾ: ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಟ್ರೇಲರ್ ಲಾಂಚ್

author img

By

Published : Jul 7, 2023, 11:49 AM IST

ಅಮೆರಿಕದಲ್ಲಿ ನಡೆಯಲಿರುವ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಈವೆಂಟ್​ನಲ್ಲಿ ಪ್ರಾಜೆಕ್ಟ್ ಕೆ ತಂಡ ಭಾಗಿಯಾಗಲಿದೆ. ಸಮಾರಂಭದಲ್ಲಿ ಚಿತ್ರದ ಪೋಸ್ಟರ್​, ಶೀರ್ಷಿಕೆ, ಟೀಸರ್, ಟ್ರೇಲರ್​ ಲಾಂಚ್ ಆಗುವ ಸಾಧ್ಯತೆಗಳಿವೆ.

project k team
ಪ್ರಾಜೆಕ್ಟ್ ಕೆ ತಂಡ

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಮುಂದಿನ ಬಹುನಿರೀಕ್ಷಿತ ಚಲನಚಿತ್ರದ ಹೆಸರು 'ಪ್ರಾಜೆಕ್ಟ್ ಕೆ'. ಬಹುತಾರಾಗಣದ ಬಿಗ್​ ಬಜೆಟ್​ನ ಈ ಸಿನಿಮಾ ಕುರಿತ ಇತ್ತೀಚಿನ ಮಾಹಿತಿ ಪ್ರಕಾರ, ಚಿತ್ರ ತಯಾರಕರು ದೊಡ್ಡ ಮಟ್ಟದಲ್ಲಿ ಪ್ರಚಾರ, ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಇಂಡಿಯನ್​ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ಪ್ರತಿಭಾನ್ವಿತ ಕಲಾವಿದರನ್ನೊಳಗೊಂಡ ಚಿತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು​ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಟಾಲಿವುಡ್​ ಸ್ಟಾರ್ ನಟ ಪ್ರಭಾಸ್ ಅಧಿಕೃತ ಪೋಸ್ಟ್ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ರೆಬೆಲ್‌ ಸ್ಟಾರ್ ಪ್ರಭಾಸ್ ಬಿಗ್ ಬಜೆಟ್ ಸಿನಿಮಾ 'ಪ್ರಾಜೆಕ್ಟ್ ಕೆ'ಯ ಪ್ರಮುಖ ಪಾತ್ರದಲ್ಲಿದ್ದಾರೆ. ಬಹುಭಾಷೆಗಳ ಬಹುಬೇಡಿಕೆ ನಟರಾದ ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಚಿತ್ರದ ಬಗ್ಗೆ ಅಭಿಮಾನಿಗಳು ಭಾರಿ ನಿರೀಕ್ಷೆ ಹೊಂದಿದ್ದಾರೆ. ಶೂಟಿಂಗ್ ಚುರುಕುಗೊಳಿಸಿರುವ ಚಿತ್ರತಂಡ ಸಿನಿಮಾದ ಬಗ್ಗೆ ಒಂದೊಂದೇ ಅಪ್​​ಡೇಟ್​​ಗಳನ್ನು ನೀಡುತ್ತಾ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ.

ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಪರೂಪದ ಗೌರವಕ್ಕೆ ಚಿತ್ರತಂಡ ಸಾಕ್ಷಿಯಾಗಲಿದೆ. ನಾವು ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ. ಹಾಗಾಗಿ ಕಾರ್ಯಕ್ರಮದಲ್ಲಿ ಚಿತ್ರಕ್ಕೆ ಸಂಬಂಧಿಸಿದ ವಿಚಾರಗಳು ಅನಾವರಣಗೊಳ್ಳಲಿರುವ ಸಾಧ್ಯತೆ ಇದೆ.

ಪ್ರಭಾಸ್ ಚಿತ್ರದ ಪೋಸ್ಟರ್‌ವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. "ಈ ಬಗ್ಗೆ ನನ್ನ ಉತ್ಸಾಹವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ, ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇವೆ'' ಅವರು ಬರೆದುಕೊಂಡಿದ್ದಾರೆ. ನಟ ಈ ಪೋಸ್ಟ್ ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಪ್ರಾಜೆಕ್ಟ್ ಕೆ ತಂಡಕ್ಕೆ ಶುಭ ಕೋರಲು ಪ್ರಾರಂಭಿಸಿದ್ದಾರೆ.

San Diego Comic Con 2023: ಅಮೆರಿಕದಲ್ಲಿ ನಡೆಯಲಿರುವ ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ಸಮಾರಂಭದಲ್ಲಿ ಪ್ರಾಜೆಕ್ಟ್-ಕೆ ಸಿನಿಮಾಗೆ ಸಂಬಂಧಿಸಿದ ಅಪ್​​ಡೇಟ್ಸ್ ಅನ್ನು ಬಹಿರಂಗಪಡಿಸಲಾಗುವುದು ಎಂದು ಚಿತ್ರ ತಯಾರಕರು ಅಧಿಕೃತವಾಗಿ ಘೋಷಿಸಿದ್ದಾರೆ. ಶೀರ್ಷಿಕೆ ಮತ್ತು ಸಿನಿಮಾದ ಬಿಡುಗಡೆ ದಿನಾಂಕವನ್ನು ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುವುದು. ಟ್ರೇಲರ್​ ಕೂಡ ಅನಾವರಣಗೊಳ್ಳುವ ಸಾಧ್ಯತೆ ಇದೆ. ಈ ಕಾಮಿಕ್-ಕಾನ್ ಈವೆಂಟ್ ಜುಲೈ 19ರಿಂದ ಪ್ರಾರಂಭವಾಗಲಿದೆ. ಜುಲೈ 20ರಂದು ನಡೆಯಲಿರುವ ಈವೆಂಟ್​ನಲ್ಲಿ ಪ್ರಾಜೆಕ್ಟ್ ಕೆ ತಂಡ ಭಾಗವಹಿಸಲಿದೆ. 'ಇದು ಪ್ರಾಜೆಕ್ಟ್ ಕೆ: ಫಸ್ಟ್ ಗ್ಲಿಂಪ್ಸ್ ಆಫ್ ಇಂಡಿಯಾಸ್ ಮೈಥೋ-ಸೈನ್ಸ್ ಫಿಕ್ಷನ್ ಎಪಿಕ್' ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗುವುದು.

ಅಮೆರಿಕದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್​​ ಬಚ್ಚನ್, ನಾಗ್ ಅಶ್ವಿನ್, ಅಶ್ವಿನಿ ದತ್ ಭಾಗವಹಿಸಲಿದ್ದಾರೆ. ಮತ್ತೊಂದು ವಿಶೇಷವೆಂದರೆ ಈವರೆಗೆ ಕಾಮಿಕ್ ಕಾನ್ ಸಮಾರಂಭದಲ್ಲಿ ಯಾವುದೇ ತೆಲುಗು ಸಿನಿಮಾ ಪ್ರದರ್ಶನ ಕಂಡಿಲ್ಲ. ಈ ಮೂಲಕ ಪ್ರಾಜೆಕ್ಟ್ ಕೆ ಇಂತಹ ಅಪರೂಪದ ಗೌರವ ಪಡೆದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ವೇದಿಕೆಯಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಚಿತ್ರತಂಡ ಭಾಗವಹಿಸಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Rishab Shetty Birthday: ಅಭಿಮಾನಿಗಳೊಂದಿಗೆ ಇಂದು 'ಕಾಡುಬೆಟ್ಟು ಶಿವ'ನ ಜನ್ಮದಿನ - ಡಿವೈನ್​ ಸ್ಟಾರ್ ರಿಷಬ್‌ ಶೆಟ್ಟಿ ಮುಂದಿನ ಸಿನಿಮಾಗಳಿವು..

ಪ್ರಾಜೆಕ್ಟ್ ಕೆ ಚಿತ್ರತಂಡ: ವೈಜಯಂತಿ ಮೂವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಅಶ್ವಿನಿ ದತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್​ ಕಟ್​​ ಹೇಳುತ್ತಿರುವ ವೈಜ್ಞಾನಿಕ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ನಟಿಸುತ್ತಿದೆ. ಈಗಾಗಲೇ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿರುವ ನಿರ್ಮಾಪಕರು ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಸೃಷ್ಟಿಸಿದ್ದಾರೆ. ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ಜನವರಿ 12ರಂದು ಸಿನಿಮಾ ಬಿಡುಗಡೆಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.